ಶಿವರಾಜ್‌ಕುಮಾರ್ ಅಭಿನಯದ ಘೋಸ್ಟ್ ಚಿತ್ರದ ಟ್ರೇಲರ್ ಬಿಡುಗಡೆ; ಗಮನ ಸೆಳೆದ ಡಿಜಿಟಲ್ ಡಿ-ಏಜಿಂಗ್!

ಜೈಲರ್‌ನಲ್ಲಿನ ತಮ್ಮ ಮನೋಜ್ಞ ಅಭಿನಯದಿಂದಾಗಿ ಹೊಸ ಅಭಿಮಾನಿಗಳನ್ನು ಸಂಪಾದಿಸಿದ್ದ ನಟ ಶಿವರಾಜ್‌ಕುಮಾರ್ ಈಗ ಘೋಸ್ಟ್‌ ಸಿನಿಮಾದಲ್ಲಿ ಮತ್ತೆ ಗಮನ ಸೆಳೆದಿದ್ದಾರೆ. ಬಹುನಿರೀಕ್ಷಿತ ಟ್ರೇಲರ್ ಅಕ್ಟೋಬರ್ 1ರಂದು ಬಹು ಭಾಷೆಗಳಲ್ಲಿ ಬಿಡುಗಡೆಯಾಗಿದೆ.
ಘೋಸ್ಟ್ ಸಿನಿಮಾದ ಸ್ಟಿಲ್
ಘೋಸ್ಟ್ ಸಿನಿಮಾದ ಸ್ಟಿಲ್

ಜೈಲರ್‌ನಲ್ಲಿನ ತಮ್ಮ ಮನೋಜ್ಞ ಅಭಿನಯದಿಂದಾಗಿ ಹೊಸ ಅಭಿಮಾನಿಗಳನ್ನು ಸಂಪಾದಿಸಿದ್ದ ನಟ ಶಿವರಾಜ್‌ಕುಮಾರ್ ಈಗ ಘೋಸ್ಟ್‌ ಸಿನಿಮಾದಲ್ಲಿ ಮತ್ತೆ ಗಮನ ಸೆಳೆದಿದ್ದಾರೆ. ಬಹುನಿರೀಕ್ಷಿತ ಟ್ರೇಲರ್ ಅಕ್ಟೋಬರ್ 1ರಂದು ಬಹು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಪೃಥ್ವಿರಾಜ್ ಸುಕುಮಾರನ್, ಎಸ್ಎಸ್ ರಾಜಮೌಳಿ ಮತ್ತು ಧನುಷ್ ಕ್ರಮವಾಗಿ ಮಲಯಾಳಂ, ತೆಲುಗು ಮತ್ತು ತಮಿಳು ಆವೃತ್ತಿಗಳನ್ನು ಅನಾವರಣಗೊಳಿಸಿದ್ದಾರೆ.

ಜೈಲಿನ ಸುತ್ತ ಚಿತ್ರವು ಸುತ್ತುತ್ತದೆ ಎಂದು ಟ್ರೇಲರ್ ಸುಳಿವು ನೀಡುತ್ತದೆ ಮತ್ತು ಶಿವಣ್ಣ ಕೂಲಿಯ ಪಾತ್ರವನ್ನು ನಿಭಾಯಿಸಿದ್ದಾರೆ. ಯುದ್ಧಕ್ಕೆ ಮಾನವೀಯತೆಯ ಮೇಲಿನ ಅಸಂಖ್ಯಾತ ಗಾಯಗಳು ಹೇಗೆ ಮೂಲ ಕಾರಣ ಎಂಬ ಪ್ರಬಲ ಭಾವನೆಗಳನ್ನು ಪ್ರತಿಧ್ವನಿಸುತ್ತದೆ. ಈ ಘರ್ಷಣೆಗಳು ಸಾಮ್ರಾಜ್ಯಗಳನ್ನು ಹೇಗೆ ಹುಟ್ಟುಹಾಕಬಹುದು ಅಥವಾ ಅವುಗಳ ಅವಸಾನಕ್ಕೆ ಕಾರಣವಾಗಬಹುದೆಂಬುದನ್ನು ತೋರಿಸುತ್ತದೆ. ಆದರೆ, ಇತಿಹಾಸವು ಈ ಸಾಮ್ರಾಜ್ಯಗಳನ್ನು ನಿರ್ಮಿಸಿದ ಚಕ್ರವರ್ತಿಗಳನ್ನು ಕಡೆಗಣಿಸುವ ಪ್ರವೃತ್ತಿಯನ್ನು ಹೊಂದಿದೆ. ಅದರಂತೆಯೇ, ಅವ್ಯವಸ್ಥೆಯನ್ನು ಬಿತ್ತುವವರನ್ನು ನೆನಪಿಟ್ಟುಕೊಳ್ಳುತ್ತದೆ ಎನ್ನುವ ಸಂದೇಶ ನೀಡಲಾಗಿದೆ.

ಎರಡು ನಿಮಿಷಗಳ ಟ್ರೇಲರ್‌ನಲ್ಲಿ, ಘೋಸ್ಟ್ ಆಕ್ಷನ್-ಪ್ಯಾಕ್ಡ್ ಚಮತ್ಕಾರದ ಭರವಸೆ ನೀಡುತ್ತದೆ. ಬಹು ಭಾಷೆಗಳಲ್ಲಿ ಶಿವಣ್ಣ ಅವರ ಧ್ವನಿಯನ್ನೇ ಟ್ರೇಲರ್ ಹೊಂದಿದೆ. ಶಿವಣ್ಣ ಕನ್ನಡ ಮತ್ತು ತಮಿಳಿನಲ್ಲಿ ಡಬ್ ಮಾಡಿದ್ದಾರೆ. ಆದರೆ, ತಂಡವು ಶಿವಣ್ಣನ ಧ್ವನಿಯನ್ನು ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ರೆಕಾರ್ಡ್ ಮಾಡಲು AI ಅನ್ನು ಬಳಸಿದೆ ಎಂದು  ಎಂದು ನಿರ್ದೇಶಕರು ಬಹಿರಂಗಪಡಿಸಿದರು.

ಟ್ರೇಲರ್‌ನಲ್ಲಿ ಪ್ರೇಕ್ಷಕರ ಗಮನ ಸೆಳೆದದ್ದು ಚಿತ್ರದ ಕೆಲವು ಭಾಗಗಳಿಗೆ ಅನ್ವಯಿಸಲಾದ ಡಿಜಿಟಲ್ ಡಿ-ಏಜಿಂಗ್. ಶಿವಣ್ಣನ ಕೆಲವು ಲುಕ್‌ಗಳು ಪ್ರೇಕ್ಷಕರನ್ನು ಆನಂದ್, ಇನ್ಸ್‌ಪೆಕ್ಟರ್ ವಿಕ್ರಮ್ ಮತ್ತು ಸಂಯುಕ್ತ ಚಿತ್ರದಲ್ಲಿನ ಅವರ ಪಾತ್ರಗಳಿಗೆ ಕರೆದೊಯ್ಯುತ್ತವೆ. ಘೋಸ್ಟ್ ಶಿವಣ್ಣನ ಪಾತ್ರವನ್ನು ಬಹು ಛಾಯೆಗಳಲ್ಲಿ ಪ್ರದರ್ಶಿಸುತ್ತದೆ ಮತ್ತು ಡಿ-ಏಜಿಂಗ್ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದು ನಿರ್ದೇಶಕರು ಉಲ್ಲೇಖಿಸಿದ್ದಾರೆ.

ಟ್ರೇಲರ್ ಬಿಡುಗಡೆಯ ಸಂದರ್ಭದಲ್ಲಿ ನಿರ್ದೇಶಕ ಶ್ರೀನಿ ಸಿನಿಮಾ ಎಕ್ಸ್‌ಪ್ರೆಕ್ ಜೊತೆ ಮಾತನಾಡುತ್ತಾ, ಚಿತ್ರವು ಟಿಪಿಕಲ್ ಗ್ಯಾಂಗ್‌ಸ್ಟರ್ ಸಿನಿಮಾವಲ್ಲ ಬದಲಿಗೆ ಹೀಸ್ಟ್ ಥ್ರಿಲ್ಲರ್ ಎಂದು ಉಲ್ಲೇಖಿಸಿದ್ದಾರೆ.

ಸಂದೇಶ್ ಪ್ರೊಡಕ್ಷನ್ಸ್ ನಿರ್ಮಿಸಿರುವ ಘೋಸ್ಟ್ ಅಕ್ಟೋಬರ್ 19 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅನುಪಮ್ ಖೇರ್, ಅರ್ಚನಾ ಜೋಯಿಸ್ ಮತ್ತು ಜಯರಾಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಇದೇ ವೇಳೆ, ಪೆನ್ ಸ್ಟುಡಿಯೋಸ್ ಹಿಂದಿ ಆವೃತ್ತಿಯನ್ನು ವಿತರಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com