ಬಿಗ್ ಬಜೆಟ್ ಉಗ್ರಂ ವರ್ಷನ್?; Salaar Trailer ಪಬ್ಲಿಕ್ ರಿವ್ಯೂ

ನಿರೀಕ್ಷೆಯಂತೆಯೇ ನಟ ಪ್ರಭಾಸ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಜುಗಲ್ ಬಂದಿಯ ಸಲಾರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಟ್ರೈಲರ್ ಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸಲಾರ್ ಟ್ರೈಲರ್
ಸಲಾರ್ ಟ್ರೈಲರ್

ಬೆಂಗಳೂರು: ನಿರೀಕ್ಷೆಯಂತೆಯೇ ನಟ ಪ್ರಭಾಸ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಜುಗಲ್ ಬಂದಿಯ ಸಲಾರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಟ್ರೈಲರ್ ಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರದ ಟ್ರೇಲರ್ ಶುಕ್ರವಾರ ಸಂಜೆ 7:19 ಕ್ಕೆ ಬಿಡುಗಡೆಯಾಗಿದ್ದು, ಪ್ರಭಾಸ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರವು ಆಕ್ಷನ್-ಪ್ಯಾಕ್ಡ್ ಡ್ರಾಮಾ ಆಗಿದೆ. ಎರಡು ವರ್ಷಗಳಿಂದ ಚಿತ್ರತಂಡ ಈ ಬಹು ನಿರೀಕ್ಷಿತ ಚಿತ್ರದ ತಯಾರಿಕೆಯಲ್ಲಿದೆ. ಇದು ಮಲಯಾಳಂ ಸ್ಟಾರ್ ಪೃಥ್ವಿರಾಜ್ ಅವರ ತೆಲುಗಿನ ಚೊಚ್ಚಲ ಚಿತ್ರವಾಗಿದ್ದು, ಚಿತ್ರದಲ್ಲಿ ನಟಿ ಶ್ರುತಿ ಹಾಸನ್, ಜಗಪತಿ ಬಾಬು, ಈಶ್ವರಿ ರಾವ್ ಮತ್ತು ಶ್ರೀಯಾ ರೆಡ್ಡಿ ಚಿತ್ರದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು ಸಲಾರ್ ಚಿತ್ರದ ಟ್ರೈಲರ್ ಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು,  ಈ ಟ್ರೈಲರ್‌ ನೋಡಿದವರು ಅದ್ಭುತವಾಗಿದೆ ಅಂತ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇನ್ನೂ ಕೆಲವರು ಸಲಾರ್‌ ಸಿನಿಮಾವನ್ನು ಬೇರೆ ಬೇರೆ ಸಿನಿಮಾಗಳಿಗೆ ಕಂಪೇರ್ ಮಾಡುತ್ತಿದ್ದಾರೆ. ಇದರ ನಡುವೆಯೇ ಟ್ರೈಲರ್ ಉಗ್ರಂ ಚಿತ್ರದ ಹೊಸ ವರ್ಷನ್ ಎಂಬಂತಿದೆ ಎಂಬ ಮಾತುಗಳೂ ಇವೆ. ಸೋಷಿಯಲ್‌ ಮೀಡಿಯಾದಲ್ಲಿ ಸಲಾರ್‌ ಟ್ರೈಲರ್‌ ನೋಡಿದವರು ಇದೇನ್‌ ಗುರೂ ಸೇಮ್‌ ಕಬ್ಜ ಸಿನಿಮಾ ಥರಾನೇ ಇದೆ ಅಂತ ಪೋಸ್ಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರಂತೂ ಕಬ್ಜ ಸಿನಿಮಾದ ಟ್ರೈಲರ್‌ ಸಲಾರ್‌ ಟ್ರೈಲರ್‌ಗಿಂತ ಚೆನ್ನಾಗಿದೆ ಅಂತಿದ್ದಾರೆ.

ಕೆಲವರು ಈ ಸಿನಿಮಾ ಉಗ್ರಂನ ಬಿಗ್‌ ಬಜೆಟ್‌ ಸಿನಿಮಾದಂತಿದೆ ಅಂತ ಹೇಳುತ್ತಿದ್ದಾರೆ. ಕನ್ನಡ ಉಗ್ರಂ ಸಿನಿಮಾದಲ್ಲೂ ಸ್ನೇಹಿತರ ಕಥೆಯಿತ್ತು. ಇಲ್ಲು ಕೂಡ ಅದೇ ಇದೆ ಅಂತಿದ್ದಾರೆ. ಉಗ್ರಂ ಸ್ವಲ್ಪ ಕಡಿಮೆ ಬಜೆಟ್‌ ಸಿನಿಮಾ. ಸಲಾರ್ ಸ್ವಲ್ಪ ಬಿಗ್ ಬಜೆಟ್‌ ವರ್ಷನ್‌ ಅಂತ ಕಾಲೆಳೆಯುತ್ತಿದ್ದಾರೆ. ಸಲಾರ್‌ ಟ್ರೈಲರ್‌ ಈ ರೀತಿಯೂ ಹೆಚ್ಚು ಟ್ರೋಲ್ ಆಗ್ತಿದೆ.

ಇದು ಕಬ್ಜ ಥರ ಸಿನಿಮಾನಾ? ಇಲ್ಲ ಉಗ್ರಂ ಕಥೆನಾ? ಅನ್ನೋದಕ್ಕೆ ಉತ್ತರ ಇದೇ ತಿಂಗಳ 22ರಂದು ಸಿಗಲಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com