ನನ್ನನ್ನು ನಟನಾಗಿ, ಸ್ಟಾರ್ ಆಗಿ ಮಾತ್ರವಲ್ಲದೆ ನಿಮ್ಮ ಮಗನಾಗಿಯೂ ಬೆಳೆಸಿದ್ದೀರಿ: ಶಿವರಾಜಕುಮಾರ್

ಚಂದನವನದ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ನಟನೆ ಆರಂಭಿಸಿ 37 ವರ್ಷಗಳು ಕಳೆದಿವೆ. ಆನಂದ್ (ಫೆಬ್ರುವರಿ 19, 1986) ರಿಂದ ವೇದ (ಡಿಸೆಂಬರ್ 23, 2023) ವರೆಗೆ 125 ಸಿನಿಮಾಗಳಲ್ಲಿ ನಟಿಸಿರುವ ನಟ, ಇಂದಿಗೂ ಸಿನಿಮಾ ಇಂಡಸ್ಟ್ರಿಯಲ್ಲಿ ಬ್ಯುಸಿಯಾಗಿರುವ ನಟರಲ್ಲಿ ಒಬ್ಬರಾಗಿದ್ದಾರೆ.
ಶಿವರಾಜ್‌ಕುಮಾರ್
ಶಿವರಾಜ್‌ಕುಮಾರ್

ಚಂದನವನದ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ನಟನೆ ಆರಂಭಿಸಿ 37 ವರ್ಷಗಳು ಕಳೆದಿವೆ. ಆನಂದ್ (ಫೆಬ್ರುವರಿ 19, 1986) ರಿಂದ ವೇದ (ಡಿಸೆಂಬರ್ 23, 2023) ವರೆಗೆ 125 ಸಿನಿಮಾಗಳಲ್ಲಿ ನಟಿಸಿರುವ ನಟ, ಇಂದಿಗೂ ಸಿನಿಮಾ ಇಂಡಸ್ಟ್ರಿಯಲ್ಲಿ ಬ್ಯುಸಿಯಾಗಿರುವ ನಟರಲ್ಲಿ ಒಬ್ಬರಾಗಿದ್ದಾರೆ. ಫೆಬ್ರುವರಿ 19 ರಂದು ಸೆಂಚುರಿ ಸ್ಟಾರ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 37 ವರ್ಷಗಳನ್ನು ಕಳೆದ ದಿನ.

ಹಲವಾರು ಯಶಸ್ಸು ಮತ್ತು ಸೋಲುಗಳನ್ನು ಕಂಡಿದ್ದು, ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಶಿವರಾಜಕುಮಾರ್, ಇಷ್ಟು ವರ್ಷಗಳ ಕಾಲ ಪ್ರೀತಿ ತೋರಿದ್ದಕ್ಕಾಗಿ ತಮ್ಮ ಅಭಿಮಾನಿಗಳು, ಕುಟುಂಬ ಸದಸ್ಯರು ಮತ್ತು ಕೋಟ್ಯಂತರ ಕನ್ನಡಿಗರಿಗೆ ಹೃದಯಪೂರ್ವಕವಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ.

'ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ 37 ವರ್ಷಗಳಾಗಿವೆ. ಆನಂದ್ ಚಿತ್ರದ ಮೊದಲ ದೃಶ್ಯ ಇನ್ನೂ ಮನಸೆಳೆಯುವಂತಿದೆ. ಆನಂದ್‌ನಿಂದ ವೇದ ತನಕ ನೀವು ನೀಡಿದ ಪ್ರೀತಿಗೆ ಬೆಲೆ ಕಟ್ಟಲಾಗದು. ನೀವು ನನ್ನನ್ನು ಒಬ್ಬ ನಟನಾಗಿ, ಸ್ಟಾರ್ ಆಗಿ ಮಾತ್ರವಲ್ಲದೆ ನಿಮ್ಮ ಮಗನಾಗಿಯೂ ಬೆಳೆಸಿದ್ದೀರಿ. ದೇವರ ರೂಪವಾಗಿರುವ ಅಭಿಮಾನಿಗಳು, ಮಾಧ್ಯಮ ಮಿತ್ರರು, ಹಿರಿಯರು, ಕಿರಿಯರು, ಸಹೋದ್ಯೋಗಿಗಳು ಹಾಗೂ ನನ್ನ ಇಡೀ ಕುಟುಂಬಕ್ಕೆ ಅನಂತ ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ.

ಸೆಂಚುರಿ ಸ್ಟಾರ್ ಶೀಘ್ರದಲ್ಲೇ ಮೈಸೂರಿನಲ್ಲಿ ಶ್ರೀನಿ ನಿರ್ದೇಶನದ ಘೋಸ್ಟ್ ಚಿತ್ರೀಕರಣವನ್ನು ಪುನರಾರಂಭಿಸಲಿದ್ದಾರೆ. ನಟ ಯೋಗರಾಜ್ ಭಟ್ ಅವರ ‘K ಕರಟಕ D ದಮನಕ’ ಚಿತ್ರಕ್ಕೂ ಏಕಕಾಲದಲ್ಲಿ ಚಿತ್ರೀಕರಣ ನಡೆಸುತ್ತಿದ್ದಾರೆ. ಅಲ್ಲದೆ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ '45' ಮತ್ತು ನರ್ತನ್ ಅವರ ಭೈರತಿ ರಣಗಲ್ ಸಿನಿಮಾಗಳಲ್ಲೂ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ.

ಧನುಷ್ ಅವರ ಕ್ಯಾಪ್ಟನ್ ಮಿಲ್ಲರ್, ರಜನಿಕಾಂತ್ ಅವರ ಜೈಲರ್ ಚಿತ್ರಗಳಲ್ಲಿ ನಟಿಸುವ ಮೂಲಕ ಶಿವರಾಜಕುಮಾರ್ ತಮಿಳು ಮತ್ತು ತೆಲುಗಿನಲ್ಲೂ ತಮ್ಮ ಹೆಜ್ಜೆಗುರುತನ್ನು ಮೂಡಿಸುತ್ತಿದ್ದಾರೆ ಮತ್ತು ಅವರು ನಂದಮೂರಿ ಬಾಲಕೃಷ್ಣ ಅವರ ಮುಂಬರುವ ಯೋಜನೆಯ ಭಾಗವಾಗಿದ್ದಾರೆ ಎಂದು ವರದಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com