ಕೊಲ್ಕತ್ತಾ ಚಲಚಿತ್ರೋತ್ಸವದಲ್ಲಿ ಕೊಡಗಿನ ಮಹಿಳೆ ನಿರ್ದೇಶನದ 'ಕಂದೀಲು' ಪ್ರದರ್ಶನ

ಮಡಿಕೇರಿ: ಕೊಡಗಿನ ಮಹಿಳೆಯೊಬ್ಬರು ನಿರ್ದೇಶಿಸಿರುವ ಕನ್ನಡ ಚಿತ್ರವೊಂದು ಡಿಸೆಂಬರ್ 5ರಿಂದ 12ರವರೆಗೆ ನಡೆಯಲಿರುವ 29ನೇ ಕೊಲ್ತತ್ತಾ ಚಲನಚಿತ್ರೋತ್ಸದಲ್ಲಿ ಪ್ರದರ್ಶನಗೊಳ್ಳಲು ಆಯ್ಕೆಯಾಗಿದೆ. ಮಡಿಕೇರಿಯ ಯಶೋಧ ಪ್ರಕಾಶ್ ನಿರ್ದೇಶಿಸಿರುವ 'ಕಂದೀಲು' ಏಕೈಕ ಕನ್ನಡ ಚಿತ್ರ ಮಾತ್ರ ಈ ವರ್ಷದ ಭಾರತೀಯ ಭಾಷೆಗಳ ಚಿತ್ರಗಳಲ್ಲಿ ಸ್ಪರ್ಧೆಗೆ ಆಯ್ಕೆಯಾಗಿದೆ.
ಮಡಿಕೇರಿ ನಿವಾಸಿಯಾಗಿರುವ ಯಶೋಧ ಜಿಲ್ಲೆಯ ಏಕೈಕ ಮಹಿಳಾ ನಿರ್ದೇಶಕರಾಗಿದ್ದಾರೆ. ಇಲ್ಲಿಯವರೆಗೂ ಅನೇಕ ಸಿನಿಮಾಗಳ ನಿರ್ದೇಶನ ಹಾಗೂ ನಿರ್ಮಾಣವನ್ನು ಅವರು ಮಾಡಿದ್ದಾರೆ. ಇದರಲ್ಲಿ ಮೂರು ಕೊಡವ ಸಿನಿಮಾಗಳಾದರೆ, ಐದು ಕನ್ನಡ ಸಿನಿಮಾಗಳಾಗಿವೆ. ಉದ್ಯಮದಲ್ಲಿ ಸಕ್ರಿಯರಾಗಿರುವ ಅವರು, ಅನೇಕ ಉತ್ತಮ ಚಿತ್ರಗಳನ್ನು ನಿರ್ಮಿಸಿದ್ದಾರೆ. ಆಕೆ ನಿರ್ದೇಶಿಸಿರುವ ಕಂದೀಲು ಕೋಲ್ಕತ್ತಾ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗುವ ಮೂಲಕ ಅವರ ನಿರ್ದೇಶನಕ್ಕೆ ಮತ್ತೊಂದು ಕಿರೀಟ ಸಿಕ್ಕಿದಂತಾಗಿದ್ದು, ಸ್ಪರ್ಧೆಯಲ್ಲಿ ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದಾರೆ.

'ಕಂದೀಲು' ಗ್ರಾಮವೊಂದರ ಕಥೆಯಾಗಿದ್ದು, ರೈತ ಹಾಗೂ ಆತನ ಕುಟುಂಬದ ಸುತ್ತ ಸುತ್ತುತ್ತದೆ. ಈ ಸಿನಿಮಾ ಹಲವರ ಜೀವನಾಧಾರಿತ ಕಥೆಯಿಂದ ಪ್ರೇರಣೆ ಪಡೆದಿದೆ. ಅನೇಕ ಸವಾಲುಗಳ ನಡುವೆ ಬದುಕು ಎಷ್ಟು ಮಹತ್ವದ್ದು ಎಂಬುದನ್ನು ಅನೇಕ ಅಯಾಮಾಗಳಲ್ಲಿ ಚಿತ್ರ ವಿವರಿಸಲಿದೆ. ಚಿತ್ರೋತ್ಸವದಲ್ಲಿ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗುವ ವಿಶ್ವಾಸವಿದೆ ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


