UI Review: ಉಪ್ಪಿ ನಿರ್ದೇಶನದ UI ಚಿತ್ರ ಅದ್ಧೂರಿ ಬಿಡುಗಡೆ; ಚಿತ್ರ ನೋಡಿದ ಅಭಿಮಾನಿಗಳು ಹೇಳಿದ್ದೇನು?

ವಿಭಿನ್ನ ಚಿತ್ರ ಕಥೆಗಳ ಮೂಲಕ ಹೊಸ ಪ್ರಪಂಚವನ್ನೇ ಉಪೇಂದ್ರ ನಿರ್ಮಿಸುತ್ತಾರೆ. ಸೂಪರ್ ಚಿತ್ರದಲ್ಲಿ ಭಾರತ ಮುಂದೆ ಹೇಗೆ ಬದಲಾಗಲಿದೆ ಎಂದು ಕಟ್ಟಿಕೊಟ್ಟಿದ್ದ ಉಪೇಂದ್ರ ಇದೀಗ ಯುಐ ಮೂಲಕ ರಿಯಲ್ ಲೈಫ್​ನ ಸಮಸ್ಯೆಗಳನ್ನು ಬಿಚ್ಚಿಟ್ಟಿದ್ದಾರೆ.
UI Review: ಉಪ್ಪಿ ನಿರ್ದೇಶನದ UI ಚಿತ್ರ ಅದ್ಧೂರಿ ಬಿಡುಗಡೆ; ಚಿತ್ರ ನೋಡಿದ ಅಭಿಮಾನಿಗಳು ಹೇಳಿದ್ದೇನು?
Updated on: 

ನಿರ್ದೇಶನದಲ್ಲಿ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ರಿಯಲ್ ಸ್ಟಾರ್ ಉಪೇಂದ್ರ ಅವರ UI ಚಿತ್ರ ಇಂದು ದೇಶಾದ್ಯಂತ ಅದ್ಧೂರಿ ಬಿಡುಗಡೆಯಾಗಿದೆ. ಸರಿಸುಮಾರು 4000ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದು ಚಿತ್ರವನ್ನು ನೋಡಲು ಅಭಿಮಾನಿಗಳು ಮುಗಿ ಬಿದ್ದಿದ್ದಾರೆ.

ವಿಭಿನ್ನ ಚಿತ್ರ ಕಥೆಗಳ ಮೂಲಕ ಹೊಸ ಪ್ರಪಂಚವನ್ನೇ ಉಪೇಂದ್ರ ನಿರ್ಮಿಸುತ್ತಾರೆ. ಸೂಪರ್ ಚಿತ್ರದಲ್ಲಿ ಭಾರತ ಮುಂದೆ ಹೇಗೆ ಬದಲಾಗಲಿದೆ ಎಂದು ಕಟ್ಟಿಕೊಟ್ಟಿದ್ದ ಉಪೇಂದ್ರ ಇದೀಗ ಯುಐ ಮೂಲಕ ರಿಯಲ್ ಲೈಫ್​ನ ಸಮಸ್ಯೆಗಳನ್ನು ಬಿಚ್ಚಿಟ್ಟಿದ್ದಾರೆ. ಅಲ್ಲದೆ ಸಮಾಜವನ್ನು ತಿದ್ದಲು ಬೇಕಾದ ಹಲವು ವಿಷಯಗಳನ್ನು ಈ ಸಿನಿಮಾ ಮೂಲಕ ಉಪೇಂದ್ರ ಹೇಳಲು ಪ್ರಯತ್ನಿಸಿದ್ದಾರೆ.

ಚಿತ್ರ ನೋಡಿ ಬಂದ ಪ್ರೇಕ್ಷಕರು ಇದು ಕಲ್ಪನೆಗೂ ಮೀರಿದ್ದು ಎಂದು ಹೇಳಿದ್ದಾರೆ. ನಮ್ಮೊಳಗಿನ ಭಾವವೆ ಹಾಗೂ ಹೊರಗಿನ ಭಾವನೆ ನಡುವಿನ ತಿಕ್ಕಾಟದಲ್ಲಿ ಗೆಲ್ಲೊದು ಯಾರು? ಈ ಚಿತ್ರದ ಬಹುತೇಕ ದೃಶ್ಯಗಳು ಯಾವುದೋ ಕಲ್ಪನಾ ಲೋಕದಲ್ಲಿ ನಡೆಯುತ್ತಿರುವಂತೆ ಕಾಣಿಸುತ್ತವೆ. ಅದನ್ನು ಇಂದಿನ ಕಾಲಕ್ಕೆ ಅನ್ವಯ ಆಗುವಂತೆ ಅರ್ಥ ಮಾಡಿಕೊಂಡು ಸಿನಿಮಾವನ್ನು ನೋಡಬೇಕು. ಒಟ್ಟಿನಲ್ಲಿ ಸಿನಿಮಾ ಜನರ ಮೇಲೆ ಪ್ರಭಾವ ಬೀರಿದ ರೀತಿ ಚರ್ಚೆಯಾಗುತ್ತಿದೆ. ಉಪೇಂದ್ರ ಅವರ ಕಲ್ಪನಾ ಪ್ರಪಂಚವನ್ನು ಥಿಯೇಟರ್ ನಲ್ಲಿಯೇ ನೋಡಿ ಕಣ್ತುಂಬಿಕೊಳ್ಳಬೇಕು.

UI Review: ಉಪ್ಪಿ ನಿರ್ದೇಶನದ UI ಚಿತ್ರ ಅದ್ಧೂರಿ ಬಿಡುಗಡೆ; ಚಿತ್ರ ನೋಡಿದ ಅಭಿಮಾನಿಗಳು ಹೇಳಿದ್ದೇನು?
ಉಪೇಂದ್ರ ನಟನೆಯ ಬಹುನಿರೀಕ್ಷಿತ ಚಿತ್ರ ನಾಳೆ ತೆರೆಗೆ: 4,000ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ UI ಅಬ್ಬರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com