UI: ಉಪೇಂದ್ರ ನಿರ್ದೇಶನದ ಚಿತ್ರ ನೋಡಿ ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಶ್ ಮೆಚ್ಚುಗೆ!

ಉಪೇಂದ್ರ ನಿರ್ದೇಶಿಸಿ ನಟಿಸಿರುವ UI ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಕನ್ನಡ ಚಿತ್ರರಂಗದ ದೊಡ್ಡ ದೊಡ್ಡ ಸ್ಟಾರ್‌ಗಳೇ ಉಪೇಂದ್ರ ಅವರನ್ನು ಶ್ಲಾಘಿಸುತ್ತಿದ್ದಾರೆ. ಇದೀಗ ಕಿಚ್ಚ ಸುದೀಪ್ ಮತ್ತು ರಾಕಿಂಗ್ ಸ್ಟಾರ್ ಯಶ್ ಮೆಚ್ಚುಗೆ ಸೂಚಿಸಿದ್ದಾರೆ.
ಕಿಚ್ಚ ಸುದೀಪ್ - ಯಶ್
ಕಿಚ್ಚ ಸುದೀಪ್ - ಯಶ್
Updated on

ಉಪೇಂದ್ರ ನಿರ್ದೇಶಿಸಿ ನಟಿಸಿರುವ UI ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ದೂರದೃಷ್ಟಿಯ ಕಥೆ ಹೇಳುವಿಕೆ ಮತ್ತು ಆಳವಾದ ವಿಷಯಗಳನ್ನು ಬಳಸಿಕೊಳ್ಳುವುದಕ್ಕಾಗಿ ಕನ್ನಡ ಚಿತ್ರರಂಗದ ದೊಡ್ಡ ದೊಡ್ಡ ಸ್ಟಾರ್‌ಗಳೇ ಉಪೇಂದ್ರ ಅವರನ್ನು ಶ್ಲಾಘಿಸುತ್ತಿದ್ದಾರೆ. ಡಿಸೆಂಬರ್ 23 ರಂದು ನಡೆದ ವಿಶೇಷ ಚಿತ್ರ ಪ್ರದರ್ಶನದಲ್ಲಿ, ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಪಂಡಿತ್, ನಿರ್ದೇಶಕ ಪ್ರೇಮ್, ನಿರ್ಮಾಪಕ ವೆಂಕಟ್ ಕೆ ನಾರಾಯಣ್ ಮತ್ತು ಉಪೇಂದ್ರ ಅವರ ಕುಟುಂಬ ಸೇರಿದಂತೆ ಚಿತ್ರರಂಗದ ಗಣ್ಯರು ಪಾಲ್ಗೊಂಡಿದ್ದರು.

ಉಪೇಂದ್ರ ಅವರ ವಿಶಿಷ್ಟ ನಿರ್ದೇಶನ ಶೈಲಿಯನ್ನು ಕಿಚ್ಚ ಸುದೀಪ್ ಶ್ಲಾಘಿಸಿದ್ದಾರೆ. 'ಇಂತಹ ಸ್ಕ್ರಿಪ್ಟ್ ಅನ್ನು ಉಪೇಂದ್ರ ಸರ್ ಮಾತ್ರ ದೃಶ್ಯೀಕರಿಸಬಹುದು ಮತ್ತು ನಿರೂಪಿಸಬಹುದು' ಎಂದಿರುವ ಅವರು, ಉಪೇಂದ್ರ ಅವರ ಅದ್ಭುತ ಚಿಂತನೆಯ ಪ್ರಕ್ರಿಯೆ ಮತ್ತು ಚಿತ್ರ ಗಳಿಸಿದ ಅದ್ಭುತ ಪ್ರತಿಕ್ರಿಯೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಮತ್ತು ಅವರ ಪತ್ನಿ ರಾಧಿಕಾ ಪಂಡಿತ್ ಚಿತ್ರ ಪ್ರದರ್ಶನಕ್ಕೆ ಹಾಜರಾಗಿದ್ದರು. ಉಪೇಂದ್ರ ಅವರೊಂದಿಗೆ ಚಲನಚಿತ್ರವನ್ನು ನೋಡಿದ ಅನುಭವ ಹೊಸ ಮತ್ತು ಇಂತಹ ಕಥಾಹಂದರವನ್ನು ವೀಕ್ಷಿಸುವುದು ಆಶೀರ್ವಾದ ಎಂದರು. UI ಚಿತ್ರ ಕೇವಲ ಮನರಂಜನೆಗಷ್ಟೇ ಸೀಮಿತವಾಗಿಲ್ಲ. ಅದಕ್ಕಿಂತ ಹೆಚ್ಚಿನದು ಚಿತ್ರದಲ್ಲಿದೆ. ಇದು ಪ್ರೇಕ್ಷಕರಿಗೆ ಅದರ ಒಳ ಪದರಗಳು ಮತ್ತು ಆಳವಾದ ಅರ್ಥಗಳನ್ನು ಬಹಿರಂಗಪಡಿಸಲು ಸವಾಲು ಹಾಕುವ ಪ್ರಯಾಣವಾಗಿದೆ ಎಂದು ಯಶ್ ಹೇಳಿದ್ದಾರೆ.

ಕಿಚ್ಚ ಸುದೀಪ್ - ಯಶ್
ಬೇರೆ ಭಾಷೆಯ ಚಿತ್ರಗಳನ್ನು ಬೆಂಬಲಿಸುವಂತೆಯೇ ಕನ್ನಡ ಸಿನಿಮಾಗಳನ್ನೂ ಬೆಂಬಲಿಸಿ: ಕಿಚ್ಚ ಸುದೀಪ್ ಮನವಿ

'ನಾವೆಲ್ಲರೂ ಉಪೇಂದ್ರ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದಿದ್ದೇವೆ ಮತ್ತು ಇಂದು, ಅವರೊಂದಿಗೆ ಚಿತ್ರವನ್ನು ವೀಕ್ಷಿಸುವ ಅವಕಾಶಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ಚಿತ್ರದ ಪ್ರತಿಯೊಂದು ಅಂಶವು ಆಳವಾದ ಸಂಕೇತವನ್ನು ಹೊಂದಿದೆ. ಉಪ್ಪಿ ಸರ್ ಅವರ ಅಸಾಂಪ್ರದಾಯಿಕ ಕಥೆ ಹೇಳುವಿಕೆಗೆ UI ಕೂಡ ಸೇರಿಕೊಂಡಿದೆ. ಈ ಕಥೆಯು ಸರಿ ಮತ್ತು ತಪ್ಪು ಯಾವುದು ಎಂದು ಪ್ರಶ್ನಿಸಲು ನಮಗೆ ಸವಾಲೊಡ್ಡುತ್ತದೆ. ಆಗಾಗ್ಗೆ ಸಮಾಜದ ನೈಜತೆಯನ್ನು ಪ್ರತಿಬಿಂಬಿಸುತ್ತದೆ. ಉಪೇಂದ್ರ ಅವರು ತೆರೆಮೇಲೆ ಹೇಗೆ ಪ್ರಾಬಲ್ಯ ಸಾಧಿಸಿದ್ದಾರೆ ಎಂಬುದನ್ನು ನಾನು ಪ್ರಶಂಸಿಸಬೇಕಾಗಿದೆ' ಎಂದರು.

ರಾಧಿಕಾ ಪಂಡಿತ್ ಮಾತನಾಡಿ, ಉಪೇಂದ್ರ ಅವರೇ ನಿರ್ದೇಶಿಸುವುದು ಮತ್ತು ನಟಿಸುವುದನ್ನು ನೋಡುವುದು ಅವರ ಅಭಿಮಾನಿಗಳಿಗೆ ಟ್ರೀಟ್ ಆಗಿದೆ. ಚಿತ್ರದ ಬುದ್ಧಿವಂತಿಕೆ ಮತ್ತು ಅದನ್ನು ತೆರೆಮೇಲೆ ತಂದಿರುವಲ್ಲಿನ ಕಠಿಣ ಪರಿಶ್ರಮವನ್ನು ಶ್ಲಾಘಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com