ಸಲ್ಮಾನ್ ಖಾನ್ ಗೆ ಆಕ್ಷನ್ ಕಟ್ ಹೇಳಲಿದ್ದಾರೆಯೇ ನಿರ್ದೇಶಕ ಪ್ರೇಮ್?

ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಗೆ ಜೋಗಿ ಚಿತ್ರ ಖ್ಯಾತಿಯ ನಿರ್ದೇಶಕ ಪ್ರೇಮ್ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಈ ಮೂಲಕ ನಿರ್ದೇಶಕ ಪ್ರೇಮ್ ಬಾಲಿವುಡ್ ಗೆ ಪದಾರ್ಪಣೆ ಮಾಡಲಿದ್ದಾರೆ.
ಪ್ರೇಮ್-ಸಲ್ಮಾನ್ ಖಾನ್(ಸಂಗ್ರಹ ಚಿತ್ರ)
ಪ್ರೇಮ್-ಸಲ್ಮಾನ್ ಖಾನ್(ಸಂಗ್ರಹ ಚಿತ್ರ)
Updated on

ಬೆಂಗಳೂರು: ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಗೆ ಜೋಗಿ ಚಿತ್ರ ಖ್ಯಾತಿಯ ನಿರ್ದೇಶಕ ಪ್ರೇಮ್ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಈ ಮೂಲಕ ನಿರ್ದೇಶಕ ಪ್ರೇಮ್ ಬಾಲಿವುಡ್ ಗೆ ಪದಾರ್ಪಣೆ ಮಾಡಲಿದ್ದಾರೆ.

ಪ್ರೇಮ್ ನಿರ್ದೇಶನ ಮಾಡುತ್ತಾರೆ ಎನ್ನಲಾದ ಚಿತ್ರವನ್ನು ಸಜೀಸ್ ನಡಿಯಾಲ್ ಅನ್ನುವವರು ನಿರ್ಮಾಣ ಮಾಡಲಿದ್ದಾರಂತೆ.  ಚಿತ್ರದ ಬಗ್ಗೆ ಈಗಾಗಲೇ ಮಾತುಕತೆ ಆರಂಭವಾಗಿದ್ದು, ನಿರ್ದೇಶಕ ಪ್ರೇಮ್ ಅವರಿಂದ ಅಧಿಕೃತ ಮಾಹಿತಿ ಸಿಗಬೇಕಿದೆ. ಕೆಡಿ ಸಿನಿಮಾದ ನಂತರ ಇದೇ ಪ್ರೇಮ್ ಅವರು ದರ್ಶನ್ ಅವರಿಗಾಗಿ ಸಿನಿಮಾ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಕೆ.ವಿಎನ್ ಪ್ರೊಡಕ್ಷನ್ ಈ ಚಿತ್ರವನ್ನು ನಿರ್ಮಾಣ ಮಾಡಲಿದೆ ಎನ್ನುವುದೂ ಸುದ್ದಿ ಆಗಿತ್ತು. ಮೊದಲು ದರ್ಶನ್ ಅವರ ಸಿನಿಮಾವಾಗುತ್ತಾ? ಅಥವಾ ಸಲ್ಮಾನ್ ಚಿತ್ರಕ್ಕೆ ಪ್ರೇಮ್ ಕೆಲಸ ಆರಂಭಿಸುತ್ತಾರಾ ಕಾದುನೋಡಬೇಕು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com