'ಕಾಂತಾರ– ಅಧ್ಯಾಯ 1': ಬಿಡುಗಡೆಗೆ ಮುನ್ನವೇ ಡಿಜಿಟಲ್ ಹಕ್ಕು ಭಾರಿ ಬೆಲೆಗೆ ಮಾರಾಟ

ಬಹು ನಿರೀಕ್ಷಿತ ಕಾಂತಾರ- ಅಧ್ಯಾಯ 1 ರ ಡಿಜಿಟಲ್ ಹಕ್ಕುಗಳನ್ನು ಭಾರಿ ಬೆಲೆಗೆ ಅಮೆಜಾನ್ ಪ್ರೈಮ್ ವಿಡಿಯೋ ಪಡೆದುಕೊಂಡಿದೆ. ಚಿತ್ರದ ಪೂರ್ಣ ಪ್ರಮಾಣದ ಚಿತ್ರೀಕರಣ ಪ್ರಾರಂಭವಾಗುವ ಮೊದಲೇ ಕಾಂತಾರ ಪ್ರಿಕ್ವೆಲ್‌ನ ಹಕ್ಕುಗಳನ್ನು ದೊಡ್ಡ ಮೊತ್ತಕ್ಕೆ ಖರೀದಿಸಿದೆ.
ಪ್ರೈಂ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ, ವಿಜಯ್ ಕಿರಗಂದೂರು
ಪ್ರೈಂ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ, ವಿಜಯ್ ಕಿರಗಂದೂರು
Updated on

ಬಹು ನಿರೀಕ್ಷಿತ ಕಾಂತಾರ- ಅಧ್ಯಾಯ 1 ರ ಡಿಜಿಟಲ್ ಹಕ್ಕುಗಳನ್ನು ಭಾರಿ ಬೆಲೆಗೆ ಅಮೆಜಾನ್ ಪ್ರೈಮ್ ವಿಡಿಯೋ ಪಡೆದುಕೊಂಡಿದೆ. ಚಿತ್ರದ ಪೂರ್ಣ ಪ್ರಮಾಣದ ಚಿತ್ರೀಕರಣ ಪ್ರಾರಂಭವಾಗುವ ಮೊದಲೇ ಕಾಂತಾರ ಪ್ರಿಕ್ವೆಲ್‌ನ ಹಕ್ಕುಗಳನ್ನು ದೊಡ್ಡ ಮೊತ್ತಕ್ಕೆ ಖರೀದಿಸಿದೆ. ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ (2022) ಪ್ರೀಕ್ವೆಲ್ ಕನ್ನಡವಷ್ಟೇ ಅಲ್ಲದೆ, ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ಬಿಡುಗಡೆಯಾಗಲಿದ್ದು, ಅದಕ್ಕೂ ಮುನ್ನವೇ ಪ್ರೈಮ್ ವಿಡಿಯೋ ಡಿಜಿಟಲ್ ಹಕ್ಕುಗಳನ್ನು ತಮ್ಮದಾಗಿಸಿಕೊಂಡಿದೆ.

'ಅತಿಯಾದ ಆಸೆಗಳಿಗಿಂತ ದೊಡ್ಡದಾದ ಆಪತ್ತು ಇನ್ನೊಂದಿಲ್ಲ. ರಾಜನಿಂದ ಉಂಟಾದ ಇಂತಹ ವಿಪತ್ತು ದೇವರಿಂದಲೇ ಆಯ್ಕೆಯಾದ ಬುಡಕಟ್ಟು ನಾಯಕನ ಹೃದಯದಲ್ಲಿ ಕ್ರೋಧವನ್ನು ಹೊತ್ತಿಸುತ್ತದೆ'. ಕಾಂತಾರ- ಅಧ್ಯಾಯ 1 ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯವಿರುತ್ತದೆ ಎಂದು ಪ್ರೈಮ್ ವಿಡಿಯೋ ಟ್ವೀಟ್ ಮಾಡಿದೆ.

ಮಂಗಳವಾರ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾನು ಖರೀದಿಸಿದ 29 ಸಿನಿಮಾಗಳ ಶೀರ್ಷಿಕೆಯನ್ನು ಪ್ರೈಂ ಘೋಷಿಸಿತು. ರಿಷಬ್ ಶೆಟ್ಟಿ ಮತ್ತು ನಿರ್ಮಾಪಕ ವಿಜಯ್ ಕಿರಗಂದೂರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾಂತಾರ ಸಿನಿಮಾದ ವರಾಹ ರೂಪಂ ಹಾಡಿಗೆ ಯಕ್ಷಗಾನ ಕಲಾವಿದರು ಪ್ರದರ್ಶನ ನೀಡಿದ ಬಳಿಕ, ಮಾತನಾಡಿದ ರಿಷಬ್ ಶೆಟ್ಟಿ, ಚಿತ್ರಕ್ಕಾಗಿ ನಡೆಯುತ್ತಿರುವ ಸಿದ್ಧತೆಗಳ ಕುರಿತು ಹೇಳಿದರು. ತಮ್ಮ ಹುಟ್ಟೂರಾದ ಕುಂದಾಪುರದಲ್ಲಿ ಭವ್ಯವಾದ ಸೆಟ್ ನಿರ್ಮಿಸುವುದರಿಂದ ಹಿಡಿದು ಕುದುರೆ ಸವಾರಿ ಮತ್ತು ಕಲಾರಿಪ್ಪಾಯಟ್ಟುಗಳ ಕಠಿಣ ತರಬೇತಿಯವರೆಗೆ ಮಾಹಿತಿ ನೀಡಿದರು.

ಪ್ರೈಂ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ, ವಿಜಯ್ ಕಿರಗಂದೂರು
ಕಾಂತಾರ ಪ್ರೀಕ್ವೆಲ್‌ನಲ್ಲಿ ಸಪ್ತ ಸಾಗರದಾಚೆ ಎಲ್ಲೋ ಖ್ಯಾತಿಯ ನಟಿ ರುಕ್ಮಿಣಿ ವಸಂತ್?

ಈಗಾಗಲೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಲಾಗಿದ್ದು, ಪ್ರೇಕ್ಷಕರಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಹೊಂಬಾಳೆ ಫಿಲ್ಮ್ಸ್ ಪ್ರಕಾರ, ಕನ್ನಡದಲ್ಲಿ ಕಾಂತಾರದ ಅದ್ಭುತ ಯಶಸ್ಸು ಮತ್ತು ಥಿಯೇಟರ್‌ಗಳಲ್ಲಿ ಮತ್ತು ಒಟಿಟಿ ವೇದಿಕೆಗಳಲ್ಲಿ ಚಿತ್ರಕ್ಕೆ ಸಿಕ್ಕ ಮೆಚ್ಚುಗೆಯಿಂದಾಗಿ ಕಂಟೆಂಟ್ ಪವರ್‌ಹೌಸ್ ಆಗಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿತು. ಒಟಿಟಿ ವೇದಿಕೆ ಡಿಜಿಟಲ್ ಹಕ್ಕುಗಳನ್ನು ಪಡೆದುಕೊಂಡಿದೆ ಎಂದಿದೆ.

ಪ್ರೈಂ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ, ವಿಜಯ್ ಕಿರಗಂದೂರು
Kantara Movie: ಶೂಟಿಂಗ್‌ ಆರಂಭಕ್ಕೂ ಮುನ್ನವೇ OTT ಹಕ್ಕು Amazon Prime ಪಾಲು, ಭಾರಿ ಮೊತ್ತಕ್ಕೆ 'ಕಾಂತಾರ 1' ಮಾರಾಟ?

ಚಿತ್ರಕ್ಕೆ ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣ ಮತ್ತು ಅಜನೀಶ್ ಬಿ ಲೋಕನಾಥ್ ಅವರ ಸಂಗೀತ ಸಂಯೋಜನೆಯಿದೆ. ಚಿತ್ರದ ಪಾತ್ರವರ್ಗವು ಗೌಪ್ಯವಾಗಿ ಉಳಿದಿದೆ. ಇತ್ತೀಚಿನ ವರದಿಗಳ ಪ್ರಕಾರ, ಸಪ್ತ ಸಾಗರದಾಚೆ ಎಲ್ಲೋ ಖ್ಯಾತಿಯ ನಟಿ ರುಕ್ಮಿಣಿ ವಸಂತ್ ಅವರು ನಾಯಕಿಯಾಗಿ ನಟಿಸಲು ಸ್ಕ್ರೀನ್ ಟೆಸ್ಟ್‌ಗೆ ಒಳಗಾಗಿದ್ದಾರೆ ಎನ್ನಲಾಗಿದೆ. ಅಲ್ಲದೆ, ಸಾಯಿ ಪಲ್ಲವಿ, ಆಲಿಯಾ ಭಟ್ ಮತ್ತು ಸಪ್ತಮಿ ಗೌಡ ಅವರಂತಹ ನಟಿಯರನ್ನು ಸಹ ಪರಿಗಣಿಸಲಾಗುತ್ತಿದೆ ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com