
ಭೀಮ ಚಿತ್ರ ದುನಿಯಾ ವಿಜಯ್ ಅವರ ನಿರ್ದೇಶನದ ಎರಡನೇ ಸಿನಿಮಾ ಆಗಿದ್ದು, ಆಗಸ್ಟ್ 9 ರಂಜು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಿದೆ.
ಚಿತ್ರದಲ್ಲಿ ಡ್ರಗ್ ವ್ಯಸನವನ್ನೇ ಪ್ರಧಾನ ಕಥೆಯನ್ನಾಗಿ ಮಾಡಿಕೊಂಡ ದುನಿಯಾ ವಿಜಯ್ ಮತ್ತು ಅವರ ತಂಡ, ಯುವ ಪೀಳಿಗೆ ಹಾದಿ ತಪ್ಪುತ್ತಿರುವುದು ಎಲ್ಲಿ, ಈ ನಿಟ್ಟಿನಲ್ಲಿ ಪೋಷಕರು, ಶಿಕ್ಷಕರು ಕೆಲಸ ಏನು ಎಂಬುದನ್ನು ಭೀಮ ಸಿನಿಮಾ ಮೂಲಕ ತೆರೆಮೇಲೆ ತಂದಿದ್ದಾರೆ. ಇದರ ಜೊತೆಗೆ ರೌಡಿಸಮ್‌ನ ರಕ್ತದೋಕುಳಿಯೂ ಚಿತ್ರದಲ್ಲಿ ಕಂಡು ಬಂದಿದೆ.
ಭೀಮ ಸಿನಿಮಾಕ್ಕಾಗಿ ಬಲಿಷ್ಠ ತಾಂತ್ರಿಕ ವರ್ಗವೇ ದುಡಿದಿದೆ, ಛಾಯಾಗ್ರಹಕರಾಗಿ ಶಿವಸೇನಾ, ಸಂಕಲನ ದೀಪು ಎಸ್. ಕುಮಾರ್, ಸಂಭಾಷಣೆ ಮಾಸ್ತಿ, ವಿನೋದ್ ಅವರ ಸಾಹಸ, ಚೇತನ್ ಡಿಸೋಜಾ, ಟೈಗರ್ ಶಿವ, ಗೌತಮ್ ಹಾಗೂ ಡ್ಯಾನ್ಸ್ ಕೋರಿಯೋಗ್ರಾಫಿ ಬಿ. ಧನಂಜಯ, ರಾಜು ಅವರು ಮಾಡಿದ್ದಾರೆ.
ಭೀಮ ಚಿತ್ರದ ಯಶಸ್ಸಿನ ಬೆನ್ನಲ್ಲೇ ದುನಿಯಾ ವಿಜಯ್ ಅವರು ಇತ್ತೀಚೆಗೆ ತಮ್ಮ ಮುಂದಿನ ಚಿತ್ರವನ್ನು ಘೋಷಣೆ ಮಾಡಿದ್ದರು. ಚಿತ್ರಕ್ಕೆ 'ವಿಕೆ 30' ಎಂಬ ತಾತ್ಕಾಲಿಕ ಶೀರ್ಷಿಕೆಯನ್ನು ನೀಡಲಾಗಿದೆ. ವೆಟ್ರಿವೇಲ್ ಅಂದರೆ ತಂಬಿ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದುಸ ಚಿತ್ರಕ್ಕೆ ತಂಬಿ ನಿರ್ದೇಶಕರು ಎಂಬುದು ಬಿಟ್ಟರೆ ಇನ್ಯಾವ ವಿಚಾರವೂ ಬಹಿರಂಗಗೊಂಡಿಲ್ಲ. ನಿರ್ಮಾಪಕರು, ಸಹ ಕಲಾವಿದರು ಮತ್ತು ತಂತ್ರಜ್ಞರು ಸೇರಿದಂತೆ ಚಿತ್ರದ ಹೆಚ್ಚಿನ ಮಾಹಿತಿ ಇನ್ನಷ್ಟೇ ಘೋಷಣೆಯಾಗಬೇಕಿದೆ.
ಚಿತ್ರದ ಕುರಿತು ಇತ್ತೀಚೆಗೆ ತಮ್ಮ ಗಂಭೀರ ನೋಟದ ಪೋಸ್ಟರ್ ಹಂಚಿಕೊಂಡಿದ್ದ ವಿಜಯ್, ಮತ್ತೆ ನನ್ನ ಗ್ಯಾಂಗ್ ಜೊತೆ ಸಿನಿಮಾ ಮಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ಭೀಮ. ಸಲಗ ಸಿನಿಮಾದ ಸಿಕ್ವೇಲ್ ಕೂಡ ಬರಲಿದೆ ಎಂದು ವಿಜಯ್ ಅವರು ಮಾಹಿತಿ ನೀಡಿದ್ದಾರೆ.
Advertisement