Bigg Boss Kannada Season 11: ನಿರೂಪಣೆ ಮಾಡೋದು ಬೇಡ ಎಂದು ಯೋಚಿಸಿದ್ದು ನಿಜ- ನಟ ಸುದೀಪ್

ನಾವು ತಂಡ ಮಾಡದೇ ಇದ್ದರೂ ಅವರು ಒಳಗಡೆ ಹೋದ ನಂತರ ತಮ್ಮ ತಂಡ ಮಾಡಿಕೊಳ್ಳುತ್ತಾರೆ. ಹೀಗಾಗಿ ಈ ಬಾರಿ ನಾವೇ ಸ್ವರ್ಗ ಮತ್ತು ನರಕ ಎಂದು ಎರಡು ತಂಡ ಮಾಡಿ ಅವರನ್ನು ಮನೆಯೊಳಗೆ ಕಳುಹಿಸುತ್ತಿದ್ದೇವೆ.
ನಟ ಸುದೀಪ್
ನಟ ಸುದೀಪ್
Updated on

ಕನ್ನಡದ ‘ಬಿಗ್ ಬಾಸ್ ಸೀಸನ್ 11’ರ ಶುರುವಾಗುತ್ತಿದ್ದಂತೆ ಈ ಬಾರಿ ಸುದೀಪ್ ನಿರೂಪಣೆ ಮಾಡುತ್ತಾರಾ? ಇಲ್ವಾ? ಹೀಗೆ ಹಲವು ವಿಚಾರಗಳು ಚರ್ಚೆಗೆ ಗ್ರಾಸವಾಗಿತ್ತು. ಆ ನಂತರ ಬಿಗ್ ಬಾಸ್ ಪ್ರೋಮೋ ಮೂಲಕ ಎಲ್ಲಾ ವದಂತಿಗಳಿಗೂ ಉತ್ತರ ಸಿಕ್ಕಿತ್ತು. ಆದರೆತ ಅಸಲಿಗೆ ಏನಾಗಿತ್ತು ಎಂಬುದನ್ನು ನಟ ಸುದೀಪ್‌ ಅವರು ವಿವರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸೀಸನ್ ನಿರೂಪಣೆ ಮಾಡೋದು ಬೇಡ ಎಂದು ಯೋಚನೆ ಮಾಡಿದ್ದು ನಿಜ, ಕಳೆದ 10 ವರ್ಷಗಳಿಂದ 'ಬಿಗ್ ಬಾಸ್' ಶೋ ನಿರೂಪಣೆ ಮಾಡುತ್ತಲೇ ಬಂದಿದ್ದೇನೆ. ಈ ಬಾರಿ ಬೇರೆಯವರು ನಿರೂಪಣೆ ಮಾಡಲಿ ಎಂದೇ ನಿರ್ಧರಿಸಿದ್ದೆ, ಹಾಗಂತ ವಾಹಿನಿಯ ಜೊತೆ ಒಡನಾಟ ಚೆನ್ನಾಗಿರಲಿಲ್ಲ ಎಂದಲ್ಲ. ತಂಡ ನನ್ನನ್ನು ತಂಬಾ ಚೆನ್ನಾಗಿ ನೋಡಿಕೊಂಡಿದೆ. ಪ್ರತಿ ಬಾರಿ ಬಿಗ್ ಬಾಸ್ ಶುರು ಆಗ್ತಿದ್ದಂತೆ ನನ್ನ ಲೈಫ್ ಮ್ಯೂಟ್ ಆಗುತ್ತದೆ. 4 ದಿನ ಹೊರಗೆ ಹೋಗಬಹುದು ಅಷ್ಟೇ, ಮತ್ತೆ ಶುಕ್ರವಾರ ಬರಬೇಕಾಗುತ್ತದೆ. ಹಾಗಾಗಿ 10 ವರ್ಷ ಆಯ್ತು ಬೇರೆಯವರು ಮಾಡಲಿ ಎಂದೆನಿಸಿತ್ತು. ಬಳಿಕ ನನ್ನ ಒಪ್ಪಿಸೋಕೆ ವಾಹಿನಿ ತಂಡ ಮನೆಗೆ ಬಂದಿತ್ತು. ಬಿಗ್ ಬಾಸ್ ಅನ್ನೋದು ಬ್ಯೂಟಿಫುಲ್ ವೇದಿಕೆ, ಹಾಗಾಗಿ ಆ ನಂತರ ನಿರೂಪಣೆ ಮಾಡಲು ಒಪ್ಪಿಕೊಂಡೆ ಎಂದು ಹೇಳಿದರು.

ಇನ್ನು ಕುರಿತು ಮಾಹಿತಿ ನೀಡಿದ ಸುದೀಪ್ ಅವರು, ಈ ಬಾರಿ ಸ್ವರ್ಗ ನರಕದ ಕಥೆ ಬಿಗ್ ಬಾಸ್‌ನಲ್ಲಿದೆ, ನಾವು ತಂಡ ಮಾಡದೇ ಇದ್ದರೂ ಅವರು ಒಳಗಡೆ ಹೋದ ನಂತರ ತಮ್ಮ ತಂಡ ಮಾಡಿಕೊಳ್ಳುತ್ತಾರೆ. ಹೀಗಾಗಿ ಈ ಬಾರಿ ನಾವೇ ಸ್ವರ್ಗ ಮತ್ತು ನರಕ ಎಂದು ಎರಡು ತಂಡ ಮಾಡಿ ಅವರನ್ನು ಮನೆಯೊಳಗೆ ಕಳುಹಿಸುತ್ತಿದ್ದೇವೆ.

ನಟ ಸುದೀಪ್
Bigg Boss Kannada Season 11: ಈ ಬಾರಿ ಆರಂಭಕ್ಕೂ ಮೊದಲೇ ಕೆಲ ಸ್ಪರ್ಧಿಗಳ ಹೆಸರು ಘೋಷಣೆ!

ಉಳಿದಂತೆ ಈ ಬಾರಿಯ ಬಿಗ್ ಬಾಸ್ ಈ ಸೆಪ್ಟೆಂಬರ್ 29ರಿಂದ ಶುರುವಾಗಲಿದೆ. ಪ್ರತಿ ದಿನ ರಾತ್ರಿ 09-30ರಿಂದ ನೀವು ಈ ಕಾರ್ಯಕ್ರಮವನ್ನು ನೋಡಬಹುದು. ಇನ್ನೂ ಮನೆಯ ಒಳಗೆ ಈ ಬಾರಿ ಯಾರೆಲ್ಲ ಬರಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಅವತ್ತೇ ಸಿಗಲಿದೆಯಾದರೂ ಸೆಪ್ಟೆಂಬರ್ 28 ರಂದು ರಾಜಾ ರಾಣಿ ರಿಲೋಡೆಡ್ ಫಿನಾಲೆ ಸಂಚಿಕೆಯಲ್ಲಿ ಮಾಹಿತಿಗಳು ಬಹಿರಂಗಗೊಳ್ಳಲಿದೆ ಎನ್ನಲಾಗಿದೆ.

ಈ ಬಾರಿಯ ಸೀಸನ್ ನಲ್ಲಿ ಯಾರು ನರಕಕ್ಕೆ ಹಾಗೂ ಯಾರೂ ಸ್ವರ್ಗಕ್ಕೆ ಹೋಗಬೇಕೆಂಬ ನಿರ್ಧಾರವನ್ನು ವೀಕ್ಷಕರ ಕೈಗೆ ನೀಡಲಾಗುತ್ತಿದ್ದು, ಆನ್'ಲೈನ್ ಮತದ ಮೂಲಕ ನಿರ್ಧಾರವಾಗಲಿದೆ. ಈ ಬಾರಿಯ ಕಾರ್ಯಕ್ರಮದಲ್ಲಿ ಪ್ರೇಕ್ಷಕರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆಂದು ಸುದೀಪ್ ಅವರು ತಿಳಿಸಿದ್ದಾರೆ,

ವಯೋಕಾಮ್ ಎಂಟರ್‌ಟೈನ್‌ಮೆಂಟ್​​ನ ಪ್ರೆಸಿಡೆಂಟ್ ಅಲೋಕ್ ಜೈನ್ ಅವರು ಮಾತನಾಡಿ, ನಟ ಸುದೀಪ್ ಅವರ ವಿವಿಧ ಪ್ರದೇಶಗಳ ಪ್ರೇಕ್ಷಕರ ಸಂಪರ್ಕ ಸಾಧಿಸುವ ಸಾಮರ್ಥ್ಯವನ್ನು ಶ್ಲಾಘಿಸಿದರು. ಈ ಬಾರಿ ಸ್ವರ್ಗ ಮತ್ತು ನರಕ ಥೀಮ್ ಇರಲಿದ್ದು, ವೀಕ್ಷಕರಿಗೆ ಮನರಂಜನೆ ನೀಡಲಿದೆ ಎಂದು ಹೇಳಿದರು.

ಬನಿಜಯ್ ಏಷ್ಯಾದ ಸಂಸ್ಥಾಪಕರಾದ ದೀಪಕ್ ಧರ್ ಮಾತನಾಡಿ, ಭಾರತ, ಕರ್ನಾಟಕ, ಭಾರತ ಮತ್ತು ಅದರಾಚೆಗಿನ ವೀಕ್ಷಕರಿಗೂ ಮನರಂಜನೆ ನೀಡಲು ಬದ್ಧರಾಗಿದ್ದೇವೆ. ಈ ಸೀಸನ್ ನಮ್ಮ ಪ್ರೇಕ್ಷಕರನ್ನು ರೋಮಾಂಚನಗೊಳಿಸುವ ವಿಶ್ವಾಸವಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com