Kollywood: ತಮಿಳು ಚಿತ್ರರಂಗದ ಖ್ಯಾತ ನಟ Madhan Bob ನಿಧನ

ಕಳೆದ ಕೆಲವು ವರ್ಷಗಳಿಂದ ಕ್ಯಾನ್ಸರ್​ನಿಂದ (Cancer) ಬಳಲುತ್ತಿದ್ದ ಮದನ್ ಬಾಬ್ ಅವರು ಚಿಕಿತ್ಸೆ ಫಲಕಾರಿ ಆಗದೇ ಇಂದು ಕೊನೆಯುಸಿರೆಳೆದಿದ್ದಾರೆ.
Veteran Tamil Actor Madhan Bob Dies
ಹಾಸ್ಯನಟ ಮದನ್ ಬಾಬ್
Updated on

ಚೆನ್ನೈ: ತಮಿಳುಚಿತ್ರರಂಗದ ಖ್ಯಾತ ಹಾಸ್ಯನಟ ಮದನ್ ಬಾಬ್ (Madhan bob) ನಿಧನರಾಗಿದ್ದು, ಅವರಿಗೆ 71 ವರ್ಷ ವಯಸ್ಸಾಗಿತ್ತು.

ಕಳೆದ ಕೆಲವು ವರ್ಷಗಳಿಂದ ಕ್ಯಾನ್ಸರ್​ನಿಂದ (Cancer) ಬಳಲುತ್ತಿದ್ದ ಮದನ್ ಬಾಬ್ ಅವರು ಚಿಕಿತ್ಸೆ ಫಲಕಾರಿ ಆಗದೇ ಇಂದು ಕೊನೆಯುಸಿರೆಳೆದಿದ್ದಾರೆ. ಚೆನ್ನೈನಲ್ಲಿ ಶನಿವಾರ (ಆಗಸ್ಟ್ 2) ಸಂಜೆ ಅವರು ನಿಧನರಾಗಿದ್ದು, ಅನೇಕ ಸೆಲೆಬ್ರಿಟಿಗಳು ಕಂಬಿನಿ ಮಿಡಿದಿದ್ದಾರೆ.

ಅಂದಹಾಗೆ ಮನದ ಬಾಬ್ ಅವರ ಮೂಲ ಹೆಸರು ಎಸ್. ಕೃಷ್ಣಮೂರ್ತಿ. ಚಿತ್ರರಂಗದಲ್ಲಿ ಅವರು ಮದನ್ ಬಾಬ್ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದರು.

ರಜನಿಕಾಂತ್, ಕಮಲ್ ಹಾಸನ್, ಅಜಿತ್ ಕುಮಾರ್, ಸೂರ್ಯ, ವಿಜಯ್ ಮುಂತಾದ ಸ್ಟಾರ್ ಕಲಾವಿದರ ಸಿಮಾಗಳಲ್ಲಿ ಮದನ್ ಬಾಬ್ ನಟಿಸಿದ್ದರು.

ಅವರು ನಿಭಾಯಿಸಿದ್ದ ಕಾಮಿಡಿ ಪಾತ್ರಗಳನ್ನು ಅಭಿಮಾನಿಗಳು ತುಂಬ ಇಷ್ಟಪಟ್ಟಿದ್ದರು. ನೂರಾರು ಸಿನಿಮಾಗಳಲ್ಲಿ ಮದನ್ ಬಾಬ್ ಅವರು ಅಭಿನಯಿಸಿದ್ದರು.

Veteran Tamil Actor Madhan Bob Dies
Sandalwood: ಚಿತ್ರರಂಗದಲ್ಲಿ ಮತ್ತೊಂದು ಫೈಲ್ಸ್; 'ಧರ್ಮಸ್ಥಳ ಫೈಲ್ಸ್' ಹೆಸರಲ್ಲಿ ಶೀರ್ಷಿಕೆ ನಮೂದು!

ರಜನಿಕಾಂತ್, ಕಮಲ್ ಹಾಸನ್, ಅಜಿತ್ ಕುಮಾರ್, ಸೂರ್ಯ, ವಿಜಯ್ ಮುಂತಾದ ಸ್ಟಾರ್ ಕಲಾವಿದರ ಸಿಮಾಗಳಲ್ಲಿ ಮದನ್ ಬಾಬ್ ನಟಿಸಿದ್ದರು. ಅವರು ನಿಭಾಯಿಸಿದ್ದ ಕಾಮಿಡಿ ಪಾತ್ರಗಳನ್ನು ಅಭಿಮಾನಿಗಳು ತುಂಬ ಇಷ್ಟಪಟ್ಟಿದ್ದರು. ನೂರಾರು ಸಿನಿಮಾಗಳಲ್ಲಿ ಮದನ್ ಬಾಬ್ ಅವರು ಅಭಿನಯಿಸಿದ್ದರು.

ಮದನ್ ಬಾಬ್ ಅವರ ನಿಧನದಿಂದ ಚಿತ್ರರಂಗದಲ್ಲಿ ಶೋಕ ಆವರಿಸಿದ್ದು, ನಟ, ನಿರ್ದೇಶಕ, ನೃತ್ಯ ಸಂಯೋಜಕ ಪ್ರಭುದೇವರ ಅವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

‘ನಾವು ಒಟ್ಟಿಗೆ ತೆರೆ ಹಂಚಿಕೊಂಡಿದ್ದೆವು. ಅವರಿಂದಾಗಿ ಸೆಟ್​​ನಲ್ಲಿ ಸಂತಸ ಇರುತ್ತಿತ್ತು. ತಮ್ಮ ಸುತ್ತಮುತ್ತ ಇರುವ ಎಲ್ಲರನ್ನೂ ನಗಿಸುತ್ತಿದ್ದರು. ಅವರ ಕುಟುಂಬಕ್ಕೆ ಸಂತಾಪಗಳು. ಅವರು ಯಾವಾಗಲೂ ನಮ್ಮ ನೆನಪಿನಲ್ಲಿ ಇರುತ್ತಾರೆ’ ಎಂದು ಪ್ರಭುದೇವ ಪೋಸ್ಟ್ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com