ಪ್ರಾದೇಶಿಕ vs ಪ್ಯಾನ್-ಇಂಡಿಯಾ; 2025ರಲ್ಲಿ ಬಾಕ್ಸಾಫೀಸ್ ರೇಸ್ ನಲ್ಲಿ ಕನ್ನಡ ಸಿನಿಮಾಗಳು!

ಇದೀಗ ಹೊಸ ವರ್ಷ 2025ರಲ್ಲೂ ಕನ್ನಡ ಸಿನಿಮಾ ಒಂದು ಮಹತ್ವದ ಮುನ್ನಡೆಯನ್ನು ಸಾಧಿಸುವ ನಿರೀಕ್ಷೆಯಿದೆ. ಹಲವಾರು ಚಲನಚಿತ್ರಗಳು ಬಹು ಭಾಷೆಗಳಲ್ಲಿ ಪ್ಯಾನ್-ಇಂಡಿಯಾ ಬಿಡುಗಡೆಗಳ ಮೂಲಕ ವ್ಯಾಪಕ ಪ್ರೇಕ್ಷಕರನ್ನು ತಲುಪಲು ಸಜ್ಜಾಗಿವೆ.
Kannada cinema in 2025 year
2025ರಲ್ಲಿ ಬಿಡುಗಡೆ ಕಾಣಲಿರುವ ಕನ್ನಡ ಸಿನಿಮಾಗಳು
Updated on

ಕನ್ನಡ ಚಲನಚಿತ್ರೋದ್ಯಮವು ತನ್ನ ಶ್ರೀಮಂತ ಕಥೆ ಹೇಳುವಿಕೆ, ವಿಶಿಷ್ಟ ನಿರೂಪಣೆ ಮತ್ತು ಚಲನಚಿತ್ರ ನಿರ್ಮಾಣಕ್ಕೆ ನವೀನ ವಿಧಾನಕ್ಕಾಗಿ ಬಹಳ ಹಿಂದಿನಿಂದಲೂ ಪ್ರಸಿದ್ಧ. ಇತ್ತೀಚಿನ ವರ್ಷಗಳಲ್ಲಿ, ಆಕ್ಷನ್-ಪ್ಯಾಕ್ಡ್ ಥ್ರಿಲ್ಲರ್‌ಗಳಿಂದ ಹಿಡಿದು ಚಿಂತನಶೀಲ ಡ್ರಾಮಾಗಳವರೆಗೆ ನಿರಂತರವಾಗಿ ವಿಸ್ತರಿಸುತ್ತಿರುವ ಪ್ರಕಾರಗಳ ಶ್ರೇಣಿಯನ್ನು ಅಳವಡಿಸಿಕೊಳ್ಳುವ ಮೂಲಕ ಅದು ಗಡಿಗಳನ್ನು ಮುರಿಯುವುದನ್ನು ಮುಂದುವರೆಸಿದೆ. ಇದು ಭಾರತದಲ್ಲಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಚಿತ್ರರಂಗ ಸ್ಥಿರವಾಗಿ ತನ್ನ ಹೆಸರನ್ನು ಕೆತ್ತುವಂತೆ ಮಾಡಿದೆ.

ಇದೀಗ ಹೊಸ ವರ್ಷ 2025ರಲ್ಲೂ ಕನ್ನಡ ಸಿನಿಮಾ ಒಂದು ಮಹತ್ವದ ಮುನ್ನಡೆಯನ್ನು ಸಾಧಿಸುವ ನಿರೀಕ್ಷೆಯಿದೆ. ಹಲವಾರು ಚಲನಚಿತ್ರಗಳು ಬಹು ಭಾಷೆಗಳಲ್ಲಿ ಪ್ಯಾನ್-ಇಂಡಿಯಾ ಬಿಡುಗಡೆಗಳ ಮೂಲಕ ವ್ಯಾಪಕ ಪ್ರೇಕ್ಷಕರನ್ನು ತಲುಪಲು ಸಜ್ಜಾಗಿವೆ. ಇದು ಉದ್ಯಮದ ನಿರಂತರವಾಗಿ ಬೆಳೆಯುತ್ತಿರುವ ಜಾಗತಿಕ ವ್ಯಾಪ್ತಿಯನ್ನು ಸೂಚಿಸುತ್ತದೆ.

ರಾಕಿಂಗ್ ಸ್ಟಾರ್ ಯಶ್ ಮತ್ತು ರಿಷಬ್ ಶೆಟ್ಟಿಯಂತಹ ಸ್ಟಾರ್ ಗಳು ಪ್ರಾದೇಶಿಕ ಪ್ರೇಕ್ಷಕರನ್ನು ಮಾತ್ರವಲ್ಲದೆ ಪ್ಯಾನ್-ಇಂಡಿಯನ್ ಮಾರುಕಟ್ಟೆಯನ್ನು ಪೂರೈಸುವ ಚಿತ್ರಗಳಲ್ಲಿ ನಟಿಸುವ ಮೂಲಕ ತಮ್ಮ ಪರಿಧಿಯನ್ನು ವಿಸ್ತರಿಸುತ್ತಿದ್ದು, ಆ ಮೂಲಕ ಕನ್ನಡ ಚಲನಚಿತ್ರಗಳು ತಮ್ಮ ಭಾಷಾ ಬೇರುಗಳನ್ನು ಮೀರು ಬೆಳೆಯುತ್ತಿವೆ. ಹೆಚ್ಚಿನ ಬಜೆಟ್ ನಿರ್ಮಾಣಗಳು, ಅಸಾಧಾರಣ ತಾಂತ್ರಿಕ ಕರಕುಶಲತೆ ಮತ್ತು ಸಾರ್ವತ್ರಿಕ ವಿಷಯಾಧಾರಿತ ಕಥೆಗಳೊಂದಿಗೆ, ಕನ್ನಡ ಚಲನಚಿತ್ರೋದ್ಯಮವು ಹೆಚ್ಚಿನ ಪ್ರಮಾಣದಲ್ಲಿ ಮನ್ನಣೆಯನ್ನು ಗಳಿಸುತ್ತಿದೆ.

Kannada cinema in 2025 year
ನಿರ್ದೇಶನಕ್ಕೆ ರಂಜನಿ ರಾಘವನ್ ಎಂಟ್ರಿ; ಕನ್ನಡತಿಯ ಚಿತ್ರಕ್ಕೆ ಇಳಯರಾಜ ಸಂಗೀತ

ಶರಣ್ ಅವರ ಚೂಮಂತರ್ ಮತ್ತು ನಾಗಶೇಖರ್ ಅವರ ಸಂಜು ವೆಡ್ಸ್ ಗೀತಾ ಮುಂತಾದ ಚಿತ್ರಗಳಿಂದ ಪ್ರಾರಂಭಿಸಿ, 2025 ವಿವಿಧ ರೋಮಾಂಚಕಾರಿ ಶೀರ್ಷಿಕೆಗಳೊಂದಿಗೆ ಪ್ರಾರಂಭವಾಗುವ ಭರವಸೆ ನೀಡುತ್ತದೆ. ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು ನಂತರ ರಾಯಲ್ ಚಿತ್ರ ಬಿಡುಗಡೆಯಾಗಲಿದೆ, ಇದನ್ನು ದಿನಕರ್ ತೂಗುದೀಪ ನಿರ್ದೇಶಿಸುತ್ತಿದ್ದು, ವಿರಾಟ್ ಮತ್ತು ಸಂಜನಾ ಆನಂದ್ ಈ ಚಿತ್ರದಲ್ಲಿ ನಟಿಸಿದ್ದಾರೆ. ರಿಷಿ ಅವರ ರುದ್ರ ಗರುಡ ಪುರಾಣ ಮತ್ತು ಚಿಕ್ಕಣ್ಣ, ಗುರುನಂದನ್ ಮತ್ತು ಅನಿಶ್ ಸೇರಿದಂತೆ ಅನೇಕ ನಟರು ನಟಿಸಿರುವ ಫಾರೆಸ್ಟ್ ಜನವರಿಯಲ್ಲಿ ತೆರೆಗೆ ಬರುತ್ತಿದೆ.

ಅಂತೆಯೇ ಫೆಬ್ರವರಿ ವೇಳೆಗೆ, ಯೋಗರಾಜ್ ಭಟ್ ಅವರ ಮಾನದ ಕಡಲು, ಭುವನಂ ಗಗನಂ ಮತ್ತು ಶ್ರೇಯಸ್ ಮಂಜು ನಟಿಸಿದ ವಿಷ್ಣು ಪ್ರಿಯಾ ಮುಂತಾದ ಚಿತ್ರಗಳು ಮೊದಲ ಎರಡು ತಿಂಗಳು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಸಜ್ಜಾಗಿವೆ. ಇದರ ಜೊತೆಗೆ, ರಮೇಶ್ ಹಳ್ಳಿ ಜಗನ್ನಾಥ್ ನಿರ್ದೇಶನದ 'ತೀರ್ಥರೂಪ ತಂದೆಯವರಿಗೆ' ಮತ್ತು ಬಿಗ್ ಬಾಸ್ ವಿಜೇತ ಕಾರ್ತಿಕ್ ಮಹೇಶ್ ಅವರ 'ರಾಮರಸ' ಚಿತ್ರಗಳು, ಅನಿಲ್ ಕುಮಾರ್ ನಿರ್ದೇಶನದ ಜೈದ್ ಖಾನ್ ನಟಿಸಿರುವ 'ಕಲ್ಟ್' ಚಿತ್ರಗಳು ಕೂಡ ತೆರೆಗೆ ಬರಲು ಸಿದ್ಧತೆ ನಡೆಸಿದ್ದು, ಇದು ರೋಮಾಂಚನವನ್ನು ಮತ್ತಷ್ಟು ಹೆಚ್ಚಿಸಲಿವೆ.

Kannada cinema in 2025 year
Year 2025: ಬಿಡುಗಡೆ ಕಾಣಲಿರುವ ಬಹು ನಿರೀಕ್ಷಿತ ಕನ್ನಡ ಚಿತ್ರಗಳು

ಅಂತೆಯೇ ಕ್ರೇಜಿ ಸ್ಟಾರ್ ರವಿಚಂದ್ರನ್ ಕೂಡ ಒಂದೆರಡು ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ, ಅಧಿಕೃತ ವಿವರಗಳು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. ವಿಕ್ರಮ್ ರವಿಚಂದ್ರನ್ ಅವರ 'ಮುಧೋಳ' ಚಿತ್ರವೂ ಬಿಡುಗಡೆಗೆ ಸಿದ್ಧವಾಗುತ್ತಿದೆ.

ಇಷ್ಟು ಮಾತ್ರವಲ್ಲದೇ ರಿಷಬ್ ಶೆಟ್ಟಿ ಅವರ ಕಾಂತಾರ ಅಧ್ಯಾಯ 1, ಯಶ್ ಅವರ ಟಾಕ್ಸಿಕ್, ದರ್ಶನ್ ರ ಡೆವಿಲ್-ದಿ ಹೀರೋ, ಸುದೀಪ್ ಅಭಿನಯದ ಬಿಲ್ಲರಂಗ ಭಾಷಾ, ಗಣೇಶ್ ಮತ್ತು ರಮೇಶ್ ಅರವಿಂದ್ ಜೋಡಿಯ ಯುವರ್ಸ್ ಸಿನ್ಸಿಯರ್ಲಿ ರಾಮ್‌, ಪ್ರೇಮ್-ಧ್ರುವ ಸರ್ಜಾ ಅವರ ಕೆಡಿ, ಅರ್ಜುನ್ ಜನ್ಯ ಅವರ 45, ಧನಂಜಯ್ ಅವರ ಜಿಂಗೊ, ಉಪೇಂದ್ರರ ಬುದ್ದಿವಂತ 2, ರಕ್ಷಿತ್ ಶೆಟ್ಟಿ ಅಭಿನಯದ ರಿಚರ್ಡ್ ಆ್ಯಂಟನಿ ಮತ್ತು ಶ್ರೀಮುರಳಿ ಅಭಿನಯದ ಇನ್ನೂ ಹೆಸರಿಡದ ಚಿತ್ರ ಸೇರಿದಂತೆ 2025ರಲ್ಲಿ ಇನ್ನೂ ಹಲವಾರು ಪ್ರಮುಖ ಚಿತ್ರಗಳ ಬಿಡುಗಡೆಯಾಗುತ್ತಿದ್ದು, ಈ ವರ್ಷ ಕನ್ನಡ ಚಿತ್ರರಂಗಕ್ಕೆ ಒಂದು ಹೆಗ್ಗುರುತಾಗುವ ಮುನ್ಸೂಚನೆ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com