Tollywoodಗೆ ಮತ್ತೊಂದು ಆಘಾತ: ಖ್ಯಾತ ಹಾಸ್ಯನಟ ಫಿಶ್‌ ವೆಂಕಟ್‌ ಇನ್ನಿಲ್ಲ..!

ಫಿಶ್ ವೆಂಕಟ್ ಅವರು ಟಾಲಿವುಡ್‌ನಲ್ಲಿ ಹಲವು ಚಿತ್ರಗಳಲ್ಲಿ ಖಳನಟನಾಗಿ, ಹಾಸ್ಯ ಖಳ ನಟನಾಗಿ, ಹಾಸ್ಯನಟನಾಗಿ ನಟಿಸಿ ನಗೆಯ ಹೊಳೆಯನ್ನೇ ಹರಿಸಿದ್ದರು.
Fish venkat
ನಟ ಫಿಶ್ ವೆಂಕಟ್
Updated on

ಹೈದರಾಬಾದ್: ಕೋಟ ಶ್ರೀನಿವಾಸ್ ರಾವ್ ನಿಧನ ಬೆನ್ನಲ್ಲೇ ತೆಲುಗು ಚಿತ್ರರಂಗಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಖ್ಯಾತ ಹಾಸ್ಯ ನಟ ಫಿಶ್ ವೆಂಕಟ್ (53) ಅವರು ಶನಿವಾರ ನಿಧನರಾಗಿದ್ದಾರೆ.

ತೆಲುಗು ಚಿತ್ರರಂಗದಲ್ಲಿ ಹಾಸ್ಯ ನಟನಾಗಿ ತಮ್ಮದೇ ಆದ ಛಾಪು ಮೂಡಿಸಿದ್ದ ಫಿಶ್ ವೆಂಕಟ್ ಅನಾರೋಗ್ಯದ ಕಾರಣದಿಂದಾಗಿ ಕೊನೆಯುಸಿರೆಳೆದಿದ್ದಾರೆ.

ಫಿಶ್ ವೆಂಕಟ್ ಅವರು ಟಾಲಿವುಡ್‌ನಲ್ಲಿ ಹಲವು ಚಿತ್ರಗಳಲ್ಲಿ ಖಳನಟನಾಗಿ, ಹಾಸ್ಯ ಖಳ ನಟನಾಗಿ, ಹಾಸ್ಯನಟನಾಗಿ ನಟಿಸಿ ನಗೆಯ ಹೊಳೆಯನ್ನೇ ಹರಿಸಿದ್ದರು. ಆದರೆ, ಅನಾರೋಗ್ಯ ಕಾರಣದಿಂದಾಗಿ ಕಳೆದ ಕೆಲವು ಕಾಲದಿಂದ ಸಿನಿಮಾಗಳಿಂದ ದೂರ ಉಳಿದಿದ್ದರು.

ಮೂತ್ರಪಿಂಡ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಫಿಶ್ ವೆಂಕಟ್ ಅವರು, ಕಾಯಿಲೆ ಉಲ್ಬಣಗೊಂಡು ಎರಡೂ ಮೂತ್ರಪಿಂಡಗಳು ಹಾಳಾದ ಕಾರಣ ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗಿದ್ದರು. ಇದಾದ ಕೆಲ ದಿನಗಳ ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎನ್ನಲಾಗಿತ್ತು. ಆದರೆ, ಮತ್ತೆ ಆರೋಗ್ಯದಲ್ಲಿ ಏರುಪೇರಾದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Fish venkat
ಹಿರಿಯ ನಟ ಕೋಟ ಶ್ರೀನಿವಾಸ್ ರಾವ್ ಇನ್ನಿಲ್ಲ: ಟಾಲಿವುಡ್ ಚಿತ್ರರಂಗ, ಸಿಎಂ ಚಂದ್ರಬಾಬು ನಾಯ್ಡು ಸೇರಿ ಗಣ್ಯರಿಂದ ಸಂತಾಪ

ಬಳಿಕ ಸಹಾಯ ಮಾಡುವಂತೆ ಚಿತ್ರರಂಗ ಮತ್ತು ಸರ್ಕಾರಕ್ಕೆ ಕುಟುಂಬ ಸದಸ್ಯರು ಮನವಿ ಮಾಡಿದ್ದರು. ಅನೇಕರು ನೆರವಿನ ಹಸ್ತ ಚಾಚಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ. ಫಿಶ್‌ ವೆಂಕಟ್‌ ನಿಧನಕ್ಕೆ ಅವರ ಆಪ್ತರು ಮತ್ತು ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ಫಿಶ್ ವೆಂಕಟ್ ಅವರ ಅಕಾಲಿಕ ಮರಣವು ಟಾಲಿವುಡ್‌ಗೆ ದೊಡ್ಡ ನಷ್ಟವಾಗಿದೆ ಎಂದು ಅನೇಕರು ಹೇಳಿದ್ದಾರೆ.

2000ರಲ್ಲಿ ʼಸಮ್ಮಕ್ಕ ಸಾರಕ್ಕʼ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಫಿಶ್ ವೆಂಕಟ್ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಎಲ್ಲಾ ಸ್ಟಾರ್ ಹೀರೋಗಳೊಂದಿಗೆ ತೆರೆ ಹಂಚಿಕೊಂಡಿದ್ದರು.

ಫಿಶ್ ವೆಂಕಟ್ ತಮ್ಮ ವಿಶಿಷ್ಟ ತೆಲಂಗಾಣ ಉಪಭಾಷೆ ಮತ್ತು ನಿಷ್ಪಾಪ ಹಾಸ್ಯ ಸಮಯಪ್ರಜ್ಞೆಗೆ ಹೆಸರುವಾಸಿಯಾಗಿದ್ದರು. ಇದು ಪ್ರೇಕ್ಷಕರಿಂದ ವ್ಯಾಪಕ ಮೆಚ್ಚುಗೆಯನ್ನು ಗಳಿಸಿತು.

ಹೈದರಾಬಾದ್‌ನಲ್ಲಿ ಜನಿಸಿದ ಅವರು 2000ರ ದಶಕದ ಆರಂಭದಲ್ಲಿ ʼಖುಷಿʼ ಚಿತ್ರದ ಮೂಲಕ ಉತ್ತಮ ಹೆಸರು ಮಾಡಿದ್ದರು. ಆದಿ, ಬನ್ನಿ, ಅದುರ್ಸ್, ಗಬ್ಬರ್ ಸಿಂಗ್ ಮತ್ತು ಡಿಜೆ ಟಿಲ್ಲು ಮುಂತಾದ ಹಲವಾರು ಚಿತ್ರಗಳಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದಾರೆ.

ಹಾಸ್ಯ ಪಾತ್ರಗಳ ಜೊತೆಗೆ ಅವರು ವಿಲನ್ ಪಾತ್ರಗಳಲ್ಲಿನ ಅಭಿನಯದ ಮೂಲಕವೂ ಛಾಪು ಮೂಡಿಸಿದ್ದರು. ಫಿಶ್ ವೆಂಕಟ್ ಇತ್ತೀಚಿನ ಚಿತ್ರಗಳಾದ ಸ್ಲಮ್ ಡಾಗ್ ಹಸ್ಬೆಂಡ್, ನರಕಾಸುರ ಮತ್ತು ಕಾಫಿ ವಿತ್ ಎ ಕಿಲ್ಲರ್‌ನಲ್ಲಿ ನಟಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com