
ಚೆನ್ನೈ: ಕಾಲಿವುಡ್ ನ ಖ್ಯಾತ ನಟ ಜಯಂ ರವಿ ವಿಚ್ಚೇದನ ಪ್ರಕರಣ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಇತ್ತ ನಟ ರವಿ ಅವರ ಪತ್ನಿ ಮಾಸಿಕ 40 ಲಕ್ಷ ರೂ ಜೀವನಾಂಶ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಜಯಂ ರವಿ (Jayam Ravi) ಹಾಗೂ ಅವರ ಪತ್ನಿ ಆರತಿ ಬೇರೆ ಆಗಿರೋ ಸುದ್ದಿ ಚರ್ಚೆ ಆಗಿತ್ತು. ಜಯಂ ರವಿ ಅವರು ಏಕಾಏಕಿ ಸೋಶಿಯಲ್ ಮೀಡಿಯಾದಲ್ಲಿ ಡಿವೋರ್ಸ್ ಘೋಷಣೆ ಮಾಡಿದರು. ಆದರೆ, ಇದಕ್ಕೆ ಆರತಿ ಕಿರಿಕ್ ಮಾಡಿದ್ದರು.
ನನಗೆ ಈ ವಿಚಾರ ಗೊತ್ತೇ ಇರಲಿಲ್ಲ ಎಂದು ಹೇಳುವ ಮೂಲಕ ಚರ್ಚೆಗೆ ಎಡೆ ಮಾಡಿಕೊಟ್ಟರು. 2009ರಲ್ಲಿ ವಿವಾಹವಾಗಿದ್ದ ಈ ದಂಪತಿ 18 ವರ್ಷಗಳ ದಾಂಪತ್ಯದ ನಂತರ ಬೇರೆಯಾಗಿದ್ದಾರೆ. ಇದೀಗ ಫ್ಯಾಮಿಲಿ ಕೋರ್ಟ್ನಲ್ಲಿ ಇಬ್ಬರ ವಿಚ್ಛೇದನಕ್ಕೆ ಶೀಘ್ರವೇ ಅಧಿಕೃತ ಮುದ್ರೆ ಬೀಳಲಿದೆ ಎನ್ನಲಾಗಿದೆ.
ವಿಚಾರಣೆಗೆ ದಂಪತಿ ಹಾಜರು
ರವಿ ಮೋಹನ್ ಮತ್ತು ಅವರ ಪತ್ನಿ ಆರತಿ ತಮ್ಮ ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆನ್ನೈನ ಕುಟುಂಬ ಕಲ್ಯಾಣ ನ್ಯಾಯಾಲಯದ ಮುಂದೆ ಹಾಜರಾದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಎರಡೂ ಕಡೆಯವರು ಸಮನ್ವಯಕ್ಕಾಗಿ ಕುಟುಂಬ ಸಮಾಲೋಚನೆಗೆ ಹಾಜರಾಗುವಂತೆ ಸಲಹೆ ನೀಡಿತು. ಆದರೆ, ಆರತಿ ಜೊತೆಗಿನ ವೈವಾಹಿಕ ಸಂಬಂಧವನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ನಟ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ವರದಿಯಾಗಿದೆ.
ರವಿ ಮೋಹನ್ ಅವರ ಕಾನೂನು ತಂಡವು ಅವರಿಗೆ ತಕ್ಷಣ ವಿಚ್ಛೇದನ ನೀಡುವಂತೆ ನ್ಯಾಯಾಲಯವನ್ನು ಕೋರಿದೆ. ಅದೇ ರೀತಿ, ಆರತಿ ವಿಚ್ಛೇದನ ಕೋರುತ್ತಿದ್ದ ತನ್ನ ಪತಿಯಿಂದ ಜೀವನಾಂಶ ಕೇಳಿದರು. ಪ್ರತಿ ತಿಂಗಳು. ಆಕೆ 40 ಲಕ್ಷ ರೂ. ಪರಿಹಾರ ಕೋರಿ ನ್ಯಾಯಾಲಯದಲ್ಲಿ ಮತ್ತೊಂದು ಅರ್ಜಿ ಸಲ್ಲಿಸಿದರು. ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಜೂನ್ 12ಕ್ಕೆ ಮುಂದೂಡಿದೆ. ವಿಚಾರಣೆಯ ಬಳಿಕ ರವಿ ಮೋಹನ್ ಅವರು ಎಷ್ಟು ಜೀವನಾಂಶ ನೀಡಲಿದ್ದಾರೆ ಎಂದು ತಿಳಿಯಲಿದೆ.
ತಿಂಗಳಿಗೆ 40 ಲಕ್ಷ ರೂ ಜೀವನಾಂಶ ಬೇಕು
ಇನ್ನು ಸೆಲೆಬ್ರಿಟಿಗಳ ವಿಚ್ಚೇದನ ಪ್ರಕರಣ ಇತ್ತೀಚಿನ ದಿನಗಳಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದೆ. ಈ ಹಿಂದೆ ಕ್ರಿಕೆಟರ್ ಯಜುವೇಂದ್ರ ಚಹಾಲ್ ಬಳಿ ಡ್ಯಾನ್ಸರ್ ಧನಶ್ರೀ ವರ್ಮಾ ಅವರು 4.75 ಕೋಟಿ ರೂಪಾಯಿ ಜೀವನಾಂಶ ಪಡೆದಿದ್ದು ಸುದ್ದಿ ಆಗಿತ್ತು. ಇದೀಗ ಆರತಿ ರವಿ ಮ್ತು ಜಯಂ ರವಿ ವಿಚ್ಚೇದನ ಪಡೆಯುತ್ತಿದ್ದಾರೆ. ಮೇ 21ರಂದು ಜಯಮ್ ರವಿ ಹಾಗೂ ಆರತಿ ಚೆನ್ನೈನಲ್ಲಿರುವ ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಿ ಹಾಕಿದ್ದಾರೆ.
ಮತ್ತೆ ಸಂಬಂಧವನ್ನು ಸರಿ ಮಾಡಿಕೊಳ್ಳುವ ಸಾಧ್ಯತೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿ, ಪರಸ್ಪರ ವಿಚ್ಛೇದನ ಕೊಡಲು ಇಬ್ಬರೂ ಒಪ್ಪಿದ್ದಾರೆ. ಈ ವೇಳೆ ಆರತಿ ಅವರು ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ದಾರೆ. ಪ್ರತಿ ತಿಂಗಳು 40 ಲಕ್ಷ ರೂಪಾಯಿ ಜೀವನಾಂಶ ನೀಡಬೇಕು ಎಂದು ಆರತಿ ಆಗ್ರಹಿಸಿದ್ದಾರೆ. ಅಂದರೆ ವರ್ಷಕ್ಕೆ 4.8 ಕೋಟಿ ರೂಪಾಯಿ ಆಗಲಿದೆ.
ವಿಚಾರಣೆ ಮುಂದೂಡಿಕೆ
ಜೀವನಾಂಶದ ವಿಚಾರವನ್ನು ರವಿ ಎದುರು ಕೋರ್ಟ್ ಇಟ್ಟಿದ್ದು, ವಿಚಾರಣೆಯನ್ನು ಜೂನ್ 12ಕ್ಕೆ ಮುಂದೂಡಿದೆ. ತಿಂಗಳಿಗೆ 40 ಲಕ್ಷ ರೂಪಾಯಿ ಜೀವನಾಂಶ ನೀಡೋದು ನಿಜಕ್ಕೂ ಚಾಲೆಂಜಿಂಗ್. ಹೀಗಾಗಿ, ರವಿ ಅವರು ಇದಕ್ಕೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ರವಿ ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿ ಇದ್ದಾರೆ. ಅವರು ಗಾಯಕಿ ಕೆನಿಶಾ ಫ್ರಾನ್ಸಿಸ್ ಜೊತೆ ಸುತ್ತಾಡುತ್ತಿದ್ದಾರೆ ಎಂದು ವರದಿ ಆಗಿದೆ.
ಅಂದಹಾಗೆ ರವಿ ಮೋಹನ್ ಪ್ರಸಿದ್ಧ ಸಂಪಾದಕ ಮೋಹನ್ ಅವರ ಮಗ. ಅವರ ಸಹೋದರ ನಿರ್ದೇಶಕ ಮೋಹನ್ ರಾಜ, ಅವರು ಮೆಗಾ ಸ್ಟಾರ್ ಚಿರಂಜೀವಿ ಅವರೊಂದಿಗೆ ಗಾಡ್ ಫಾದರ್ ಚಿತ್ರವನ್ನು ನಿರ್ಮಿಸಿದರು. ರವಿ ಕಾಲಿವುಡ್‌ನಲ್ಲಿ ಸ್ಟಾರ್ ಹೀರೋ ಆಗಿ ಹೊರಹೊಮ್ಮುತ್ತಿದ್ದಾರೆ. ಅವರು ೨೦೦೯ ರಲ್ಲಿ ಪ್ರಸಿದ್ಧ ನಿರ್ಮಾಪಕಿ ಸುಜಾತಾ ವಿಜಯಕುಮಾರ್ ಅವರ ಪುತ್ರಿ ಆರತಿ ಅವರನ್ನು ವಿವಾಹವಾದರು. ಅವರಿಗೆ ಆರವ್ ಮತ್ತು ಅಯಾನ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.
Advertisement