ನೀನು ತುಂಬಾ ಎತ್ತರ ಇದ್ದೀಯಾ, ಮನೆಗೆ ಹೋಗು: ಸೆಟ್ ನಿಂದ ಹೊರಬಿದ್ದ ಘಟನೆ ಸ್ಮರಿಸಿದ ಬಿಗ್ ಬಿ ಅಮಿತಾಬ್ ಬಚ್ಚನ್!

"ತುಂಬಾ ಎತ್ತರ" ಇರುವ ಕಾರಣ ನನ್ನನ್ನು ಚಲನಚಿತ್ರ ಸೆಟ್‌ನಿಂದ ಹೊರಹೋಗುವಂತೆ ಹೇಳಿದ್ದರು ಎಂಬ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.
Amitabh Bachchan
ಅಮಿತಾಬ್ ಬಚ್ಚನ್
Updated on

ಬಾಲಿವುಡ್‌ನ ಬಿಗ್ ಬಿ ನಟ ಅಮಿತಾಬ್ ಬಚ್ಚನ್ ಅವರು ಆರಂಭಿಕ ದಿನಗಳಲ್ಲಿ ಅನುಭವಿಸಿದ ಮುಜುಗರ ಹೋರಾಟಗಳ ಬಗ್ಗೆ ಆಗಾಗ್ಗೆ ಮಾತನಾಡುತ್ತಿರುತ್ತಾರೆ. ಈ ಬಾರಿ ತಮ್ಮ ಹೈಟ್ ನಿಂದಾಗಿ ಅನುಭವಿಸಿದ ಮುಜುಗರದ ವಿಷಯವನ್ನು ಹಂಚಿಕೊಂಡಿದ್ದಾರೆ.

"ತುಂಬಾ ಎತ್ತರ" ಇರುವ ಕಾರಣ ನನ್ನನ್ನು ಚಲನಚಿತ್ರ ಸೆಟ್‌ನಿಂದ ಹೊರಹೋಗುವಂತೆ ಹೇಳಿದ್ದರು ಎಂಬ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.

ಕೌನ್ ಬನೇಗಾ ಕರೋಡ್‌ಪತಿ 18 ರ ವಿಶೇಷ ಸಂಚಿಕೆಯ ಸಂದರ್ಭದಲ್ಲಿ, ಬಿಗ್ ಬಿ ಕಾಮನ್‌ವೆಲ್ತ್ ಗೇಮ್ಸ್ 2026 ರ ಚಿನ್ನದ ಪದಕ ವಿಜೇತರಾದ ಲವ್ಲಿನಾ ಬೊರ್ಗೊಹೈನ್, ಝಂಡು ಕುಮಾರ್, ಶರ್ಮಿಳಾ ಧಂಕರ್ ಮತ್ತು ಅಸ್ಮಿತಾ ಡೇ ಅವರೊಂದಿಗೆ ಸಂವಹನ ನಡೆಸಿದರು. ಕ್ರೀಡಾಪಟುಗಳು ತರಬೇತಿಯ ಸಮಯದಲ್ಲಿ ಕೆಲವೊಮ್ಮೆ ತಪ್ಪುಗಳನ್ನು ಮಾಡಿದಾಗ ಪಡೆಯುವ ರೀತಿಯ ನಿಂದನೆಯನ್ನು ನೀವು ಚಲನಚಿತ್ರ ಸೆಟ್‌ಗಳಲ್ಲಿ ಎದುರಿಸಿದ್ದೀರಾ ಎಂದು ಅಸ್ಮಿತಾ ಅಮಿತಾಬ್ ಅವರನ್ನು ಕೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬಿಗ್ ಬಿ, ತಮ್ಮ ವೃತ್ತಿಜೀವನದ ಆರಂಭದಲ್ಲಿ ಎದುರಿಸಿದ ಟೀಕೆ ಮತ್ತು ಅವಮಾನಗಳ ಬಗ್ಗೆ ಮತ್ತು ಅಂತಿಮವಾಗಿ ನಟನಾಗಿ ಸುಧಾರಿಸಲು ಹೇಗೆ ಸಹಾಯ ಮಾಡಿತು ಎಂಬುದರ ಬಗ್ಗೆ ಮಾತನಾಡಿದರು.

Amitabh Bachchan
ಕೌನ್ ಬನೇಗಾ ಕರೋಡ್ಪತಿ KBC18: ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಪ್ರಶ್ನೆ ಕೇಳಿದ ಅಮಿತಾಬ್ ಬಚ್ಚನ್; Video ವೈರಲ್!

ಆರಂಭದಲ್ಲಿ ನಾನು ತುಂಬಾ ಬೈಯ್ಯಿಸಿಕೊಳ್ಳುತ್ತಿದ್ದೆ. ನಿನಗೆ ನಟನೆಯ ಬಗ್ಗೆ ಏನೂ ತಿಳಿದಿಲ್ಲ ಮತ್ತು ನೀನು ತುಂಬಾ ಎತ್ತರವಾಗಿದ್ದೀಯ. ಮನೆಗೆ ಹೋಗು ಎಂದು ಹೇಳುತ್ತಿದ್ದರು ಎಂಬುದಾಗಿ ತಿಳಿಸಿದ್ದಾರೆ. ಕೆಲಸಕ್ಕೆ ಹೋಗಲು ಪ್ರಾರಂಭಿಸಿದ ನಂತರ ಪರಿಸ್ಥಿತಿ ಹೇಗೆ ಬದಲಾಯಿತು ಎಂದು ಶೋಲೆ ನಟ ನೆನಪಿಸಿಕೊಂಡರು. "ನನಗೆ ಕೊನೆಗೂ ಕೆಲಸ ಸಿಕ್ಕಾಗ, ಅವರು, 'ಸರಿ, ಸರಿ, ಅಲ್ಲಿ ನಿಂತು ಸಂಭಾಷಣೆ ಹೇಳಿ' ಎಂದು ಹೇಳುತ್ತಿದ್ದರು.

ನಂತರ ಇದು ಡೈಲಾಗ್ ಹೇಳುವ ಮಾರ್ಗವೇ?' ಎಂದು ಅವರು ನನ್ನನ್ನು ಗದರಿಸಿ ಸರಿಪಡಿಸುತ್ತಿದ್ದರು, ಮತ್ತು ನಿಧಾನವಾಗಿ, ನಾನು ಸುಧಾರಿಸಿಕೊಂಡೆ ಎಂದು ಅಮಿತಾಬ್ ತಿಳಿಸಿದ್ದಾರೆ. ಆರಂಭಿಕ ದಿನಗಳಲ್ಲಿ ಚಿತ್ರೀಕರಣಕ್ಕೆ ತಡವಾಗಿ ಬಂದಿದ್ದಕ್ಕಾಗಿ ವಾಗ್ದಂಡನೆಗೆ ಒಳಗಾದ ಮತ್ತೊಂದು ಘಟನೆಯನ್ನು ಸಹ ನೆನಪಿಸಿಕೊಂಡರು.

"ಸಾಮಾನ್ಯವಾಗಿ, ನಾನು ಚಿತ್ರೀಕರಣಕ್ಕೆ ಸಮಯಕ್ಕೆ ಸರಿಯಾಗಿ ತಲುಪಲು ಪ್ರಯತ್ನಿಸುತ್ತೇನೆ. ಒಮ್ಮೆ, ನಾನು ತಡವಾಗಿತ್ತು. ನಿರ್ದೇಶಕರು ಸೆಟ್ ಹೊರಗೆ ನಿಂತಿದ್ದರು. ಆ ಸಮಯದಲ್ಲಿ ನನ್ನ ಬಳಿ ಕಾರು ಇಲ್ಲದ ಕಾರಣ ನಾನು ಬೇರೆಯವರ ಕಾರಿನಲ್ಲಿ ಬಂದೆ. ನಾನು ತಲುಪಿದಾಗ, ನಿರ್ದೇಶಕರು ನನ್ನನ್ನು ನೋಡಿ ಶೂಟಿಂಗ್ ಪ್ಯಾಕ್ ಆಗಿದೆ ಎಂದು ಹೇಳಿದರು. ಅವರು ನನಗೆ, 'ಇಲ್ಲಿಂದ ಹೊರಡು' ಎಂದು ಹೇಳಿದರು ಎಂದು ಅಮಿತಾಭ್ ನೆನಪಿಸಿಕೊಂಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com