ಬಿಡುಗಡೆಗೂ ಮುನ್ನವೇ ದಾಖಲೆ ಬರೆಯುತ್ತಾ ‘Toxic’? Yash ಮಾಸ್‌ ಎಂಟ್ರಿಗೆ ಅಭಿಮಾನಿಗಳು ಕಾತರ, ಬುಕಿಂಗ್ ಓಪನ್ ಆಗುತ್ತಿದ್ದಂತೆ ಟಿಕೆಟ್‌ಗಳು ಸೋಲ್ಡ್‌ ಔಟ್

ಬೆಂಗಳೂರಿನ ಪ್ರಮುಖ ಮಲ್ಟಿಪ್ಲೆಕ್ಸ್‌ಗಳಲ್ಲಿ ಮೊದಲ ದಿನದ ಹಲವು ಶೋಗಳ ಬಹುತೇಕ ಟಿಕೆಟ್‌ಗಳು ಕೆಲವೇ ನಿಮಿಷಗಳಲ್ಲಿ ಮಾರಾಟವಾಗಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
Toxic-Tabaahi song
ಟಾಕ್ಸಿಕ್ ಚಿತ್ರದ ತಬಾಹಿ ಹಾಡಿನ ದೃಶ್ಯ
Updated on

ಬೆಂಗಳೂರು: ರಾಕಿಂಗ್‌ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ತೆರೆಗೆ ಬರಲು ದಿನಗಣನೆ ಆರಂಭವಾಗಿದೆ.

ಚಿತ್ರದ ಮುಂಗಡ ಟಿಕೆಟ್‌ ಬುಕಿಂಗ್‌ ಆರಂಭವಾಗುತ್ತಿದ್ದಂತೆ ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬೆಂಗಳೂರಿನ ಹಲವು ಚಿತ್ರಮಂದಿರಗಳ ಮೊದಲ ದಿನದ ಪ್ರದರ್ಶನಗಳ ಟಿಕೆಟ್‌ಗಳು ಕ್ಷಣಾರ್ಧದಲ್ಲೇ ಸೋಲ್ಡ್‌ ಔಟ್ ಆಗಿವೆ.

ಟಿಕೆಟ್‌ ಬುಕಿಂಗ್‌ ವಿಂಡೋ ತೆರೆಯುತ್ತಿದ್ದಂತೆಯೇ ಯಶ್‌ ಅಭಿಮಾನಿಗಳು ಮುಂಗಡ ಟಿಕೆಟ್‌ ಕಾಯ್ದಿರಿಸಲು ಮುಗಿಬಿದ್ದಿದ್ದಾರೆ.

ಬೆಂಗಳೂರಿನ ಪ್ರಮುಖ ಮಲ್ಟಿಪ್ಲೆಕ್ಸ್‌ಗಳಲ್ಲಿ ಮೊದಲ ದಿನದ ಹಲವು ಶೋಗಳ ಬಹುತೇಕ ಟಿಕೆಟ್‌ಗಳು ಕೆಲವೇ ನಿಮಿಷಗಳಲ್ಲಿ ಮಾರಾಟವಾಗಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

‘ಕೆಜಿಎಫ್‌ 2’ ಬಳಿಕ ಯಶ್‌ ನಟಿಸುತ್ತಿರುವ ಸಿನಿಮಾ ಎಂಬ ಕಾರಣಕ್ಕೆ ‘ಟಾಕ್ಸಿಕ್‌’ ಮೇಲೆ ಆರಂಭದಿಂದಲೇ ಭಾರಿ ನಿರೀಕ್ಷೆ ಇದೆ. ಇದೀಗ ಬುಕಿಂಗ್‌ ಆರಂಭವಾದ ತಕ್ಷಣವೇ ಟಿಕೆಟ್‌ಗಳು ಸೋಲ್ಡ್ ಔಟ್ ಆಗುತ್ತಿರುವುದು ನಟನ ಮೇಲಿರುವ ಅಭಿಮಾನಿಗಳ ಕ್ರೇಜ್‌ ಎಷ್ಟಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

Toxic-Tabaahi song
Toxic: ಟಾಕ್ಸಿಕ್ ಬಿಡುಗಡೆಗೂ ಮುನ್ನವೇ ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ರಾ ನಯನತಾರಾ? ಫೋಟೋ ವೈರಲ್!

ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಯಶ್‌ಗೆ ದೊಡ್ಡ ಅಭಿಮಾನಿ ಬಳಗವಿದ್ದು, ಹಲವು ತಿಂಗಳುಗಳಿಂದ ‘ಟಾಕ್ಸಿಕ್‌’ ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಮೊದಲ ದಿನವೇ ದಾಖಲೆ ಬರೆಯುತ್ತಾ ‘ಟಾಕ್ಸಿಕ್‌’?

ಬಿಡುಗಡೆಗೂ ಮುನ್ನವೇ ಮುಂಗಡ ಬುಕಿಂಗ್‌ಗೆ ಸಿಗುತ್ತಿರುವ ಭರ್ಜರಿ ಪ್ರತಿಕ್ರಿಯೆ ಚಿತ್ರತಂಡದ ನಿರೀಕ್ಷೆ ಹೆಚ್ಚಿಸಿದೆ. ಮೊದಲ ದಿನದ ಪ್ರದರ್ಶನಗಳಿಗೆ ಈ ಮಟ್ಟದ ಬೇಡಿಕೆ ಮುಂದುವರಿದರೆ, ಬಿಡುಗಡೆಯ ಬಳಿಕ ಬಾಕ್ಸ್‌ ಆಫೀಸ್‌ನಲ್ಲಿ ‘ಟಾಕ್ಸಿಕ್‌’ ಹೊಸ ದಾಖಲೆಗಳನ್ನು ನಿರ್ಮಿಸುವ ಸಾಧ್ಯತೆ ಇದೆ.

ಗೀತು ಮೋಹನ್‌ದಾಸ್‌ ನಿರ್ದೇಶನದ ಈ ಚಿತ್ರವನ್ನು ಕೆವಿಎನ್‌ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ನಿರ್ಮಿಸಲಾಗಿದೆ. ಯಶ್‌ ಅವರ ವಿಭಿನ್ನ ಲುಕ್‌ ಹಾಗೂ ಚಿತ್ರದ ಕಥೆಯ ಬಗ್ಗೆ ಈಗಾಗಲೇ ಭಾರಿ ಕುತೂಹಲ ಮೂಡಿದ್ದು, ಇದೀಗ ಮುಂಗಡ ಬುಕಿಂಗ್‌ ಕೂಡ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com