Hyderabad: ಯಶ್ 'ಟಾಕ್ಸಿಕ್' ಫ್ರೀ ರಿಲೀಸ್ ಇವೆಂಟ್ ನಲ್ಲಿ ಅವಘಡ, ಸೌಂಡ್ ಸಿಸ್ಟಮ್ ಕುಸಿದು,ನಾಲ್ವರಿಗೆ ಗಾಯ! Video

ಯಶ್ ಅವರನ್ನು ಹತ್ತಿರದಿಂದ ನೋಡುವ ಭರದಲ್ಲಿ ಅಭಿಮಾನಿಗಳು ಧ್ವನಿವರ್ಧಕ ಜೋಡಿಸಿದ್ದ ಎತ್ತರದ ಸ್ಟ್ಯಾಂಡ್ ಮೇಲೆ ಹತ್ತಿದ್ದರು. ತೂಕ ತಾಳಲಾರದೆ ಸ್ಟ್ಯಾಂಡ್ ಕುಸಿದುಬಿದ್ದ ಪರಿಣಾಮ ನಾಲ್ವರಿಗೆ ಗಾಯಗಳಾಗಿದ್ದು, ಒಬ್ಬರಿಗೆ ಕಾಲು ಮುರಿತವಾಗಿದೆ
Yash
ಯಶ್
Updated on

ಹೈದರಾಬಾದ್‌ : ಮೇಡ್ಚಲ್‌ನ ಮಲ್ಲಾ ರೆಡ್ಡಿ ವಿಶ್ವವಿದ್ಯಾಲಯದಲ್ಲಿ ಶನಿವಾರ ರಾತ್ರಿ ನಡೆದ ನಟ ಯಶ್ ಅಭಿನಯದ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' (Toxic: A Fairy Tale for Grown-Ups) ಚಿತ್ರದ ಫ್ರೀ ರಿಲೀಸ್ ಇವೆಂಟ್ ನಲ್ಲಿ ಅವಘಡವೊಂದು ಸಂಭವಿಸಿದೆ. ಸೌಂಡ್ ಸಿಸ್ಟಮ್ ಕುಸಿದು ಬಿದ್ದ ಪರಿಣಾಮ ವಿದ್ಯಾರ್ಥಿಯೊಬ್ಬರು ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ ಅಭಿಮಾನಿಗಳನ್ನುದ್ದೇಶಿಸಿ ಯಶ್ ಮಾತನಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಯಶ್ ಅವರನ್ನು ಹತ್ತಿರದಿಂದ ನೋಡುವ ಭರದಲ್ಲಿ ಅಭಿಮಾನಿಗಳು ಧ್ವನಿವರ್ಧಕ ಜೋಡಿಸಿದ್ದ ಎತ್ತರದ ಸ್ಟ್ಯಾಂಡ್ ಮೇಲೆ ಹತ್ತಿದ್ದರು. ತೂಕ ತಾಳಲಾರದೆ ಸ್ಟ್ಯಾಂಡ್ ಕುಸಿದುಬಿದ್ದ ಪರಿಣಾಮ ನಾಲ್ವರಿಗೆ ಗಾಯಗಳಾಗಿದ್ದು, ಒಬ್ಬರಿಗೆ ಕಾಲು ಮುರಿತವಾಗಿದೆ.

ಗಾಯಾಳುಗಳನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಪರಿಸ್ಥಿತಿ ಗಮನಿಸಿದ ಯಶ್ ತಮ್ಮ ಮಾತುಗಳನ್ನು ಅರ್ಧದಲ್ಲೇ ಸ್ಥಗಿತಗೊಳಿಸಿ, ಅಭಿಮಾನಿಗಳಿಗೆ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದರು.

"ಒಬ್ಬ ವಿದ್ಯಾರ್ಥಿಯ ಕಾಲಿನ ಮೂಳೆ ಮುರಿದಿದ್ದರೆ, ಉಳಿದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಾಯಗೊಂಡ ನಾಲ್ವರನ್ನೂ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

Yash
Toxic pre-release: ಒಬ್ಬ ವ್ಯಕ್ತಿ ಎಲ್ಲಿಂದ ಬಂದವರು ಎಂಬುದು ಮುಖ್ಯವಲ್ಲ, ಪ್ರತಿಭೆ, ಉತ್ತಮ ಕೆಲಸಕ್ಕೆ ಯಾವಾಗಲೂ ಮನ್ನಣೆ: ಯಶ್ ಭಾಷಣಕ್ಕೆ ಅಭಿಮಾನಿಗಳು, ಶಾಸಕ ಮಲ್ಲಾರೆಡ್ಡಿ ಫಿದಾ!Video

ಈ ಘಟನೆಗೆ ಸಂಬಂಧಿಸಿದಂತೆ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಕಾರ್ಯಕ್ರಮದ ವ್ಯವಸ್ಥಾಪಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಅವಘಡ ಸ್ಥಳದಲ್ಲಿದ್ದವರಿಂದ ವಿಡಿಯೋದಲ್ಲಿ ಸೆರೆಯಾಗಿದ್ದು, ಆ ದೃಶ್ಯಗಳು ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com