

ಗೀತುಮೋಹನ್ ದಾಸ್ ನಿರ್ದೇಶನದ ಟಾಕ್ಸಿಕ್ ದಿ ಮೂವಿ ತನ್ನ ಭಾರತೀಯ ಭಾಷಾ ಆವೃತ್ತಿಗಳಿಗೆ 105 ಕೋಟಿ ರೂಪಾಯಿ ವಿದೇಶಗಳಲ್ಲಿ ಮುಂಗಡ ಹಣವನ್ನು ಪಡೆದುಕೊಂಡಿದೆ. ಇದು ಭಾರತೀಯ ಚಲನಚಿತ್ರವೊಂದಕ್ಕೆ ದೊರೆತ ಅತಿದೊಡ್ಡ ಬಿಡುಗಡೆ ಪೂರ್ವ ಅಂತಾರಾಷ್ಟ್ರೀಯ ಒಪ್ಪಂದಗಳಲ್ಲಿ ಒಂದಾಗಿದೆ.
ಮುಂಬರುವ ಆಕ್ಷನ್ ಥ್ರಿಲ್ಲರ್ ಚಿತ್ರ ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್, ನೇಪಾಳ, ಜಪಾನ್ ಮತ್ತು ಚೀನಾ ಹೊರತುಪಡಿಸಿ ಪ್ರಮುಖ ಮಾರುಕಟ್ಟೆಗಳಲ್ಲಿ ಅದರ ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಆವೃತ್ತಿಗಳಿಗಾಗಿ ಫಾರ್ಸ್ ಫಿಲ್ಮ್‌ನೊಂದಿಗೆ 105 ಕೋಟಿ ರೂಪಾಯಿ ವಿದೇಶಿ ವಿತರಣಾ ಒಪ್ಪಂದವನ್ನು ಮಾಡಿಕೊಂಡಿತು.
ಟಾಕ್ಸಿಕ್ ನಿರ್ಮಾಪಕರು ದಿಲ್ ರಾಜು ಅವರ ಪವರ್‌ಹೌಸ್ ಬ್ಯಾನರ್ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ (SVC) ಜೊತೆಗೆ AP-TG ಮಾರುಕಟ್ಟೆಯಲ್ಲಿ 105 ಕೋಟಿ ರೂಪಾಯಿ ವಿತರಣಾ ಒಪ್ಪಂದವನ್ನು ಮಾಡಿಕೊಂಡಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ, ಟಾಕ್ಸಿಕ್ ನ್ನು ಅತ್ಯಂತ ಪ್ರಬಲವಾದ ವಿದೇಶಿ ವಿತರಕರಲ್ಲಿ ಒಬ್ಬರಾದ ಫಾರ್ಸ್ ಫಿಲ್ಮ್ ಸ್ವಾಧೀನಪಡಿಸಿಕೊಂಡಿದೆ. ಇದು ಚಿತ್ರದ ಅಸಾಧಾರಣ ಪೂರ್ವ-ಬಿಡುಗಡೆಯಲ್ಲಿ ಮತ್ತೊಂದು ಬೃಹತ್ ಮೈಲಿಗಲ್ಲನ್ನು ಗುರುತಿಸುತ್ತದೆ. ಈ ಒಪ್ಪಂದವನ್ನು ಭಾರತೀಯ ಚಿತ್ರವೊಂದಕ್ಕೆ ಇದುವರೆಗೆ ಸಾಗರೋತ್ತರ ಸ್ವಾಧೀನಗಳಲ್ಲಿ ಒಂದೆಂದು ಹೇಳಲಾಗುತ್ತಿದೆ.
ಯಶ್ ಅವರ ಹಿಂದಿನ ಚಿತ್ರ, ಕೆಜಿಎಫ್: ಅಧ್ಯಾಯ 2, ಜಾಗತಿಕ ಮಾರುಕಟ್ಟೆಗಳಲ್ಲಿ ಸಾಕಷ್ಟು ವ್ಯವಹಾರ ಮಾಡಿತ್ತು. ಜಿಸಿಸಿ ಪ್ರದೇಶದಲ್ಲಿ ಅತಿ ಹೆಚ್ಚು ಗಳಿಕೆಯ ಭಾರತೀಯ ಚಿತ್ರವಾಗಿ ಹೊರಹೊಮ್ಮಿತು. ಇದರ ಮುಂದುವರಿದ ಭಾಗವಾಗಿ ಟಾಕ್ಸಿಕ್ ತನ್ನ ಪಯಣ ಮುಂದುವರಿಸಿದೆ.
ಮುಂಬರುವ ಆಕ್ಷನ್ ಥ್ರಿಲ್ಲರ್ ಚಿತ್ರ ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್, ನೇಪಾಳ, ಜಪಾನ್ ಮತ್ತು ಚೀನಾ ಹೊರತುಪಡಿಸಿ ಪ್ರಮುಖ ಮಾರುಕಟ್ಟೆಗಳಲ್ಲಿ ಅದರ ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಆವೃತ್ತಿಗಳಿಗಾಗಿ ಫಾರ್ಸ್ ಫಿಲ್ಮ್‌ನೊಂದಿಗೆ ₹105 ಕೋಟಿ ವಿದೇಶಿ ವಿತರಣಾ ಒಪ್ಪಂದವನ್ನು ಮಾಡಿಕೊಂಡಿತು.
ನಯನತಾರಾ ಮತ್ತು ಕಿಯಾರಾ ಅಡ್ವಾಣಿ ಸೇರಿದಂತೆ ತಾರಾಗಣದೊಂದಿಗೆ ಗೀತು ಮೋಹನ್ದಾಸ್ ನಿರ್ದೇಶಿಸಿದ ಚಿತ್ರ ಯಶ್ ಅವರ ಕೆಜಿಎಫ್ ಅಧ್ಯಾಯ 2 ಯಶಸ್ಸಿನ ನಂತರ ಹೆಚ್ಚಿನ ನಿರೀಕ್ಷೆಗಳ ನಡುವೆ ಮಾರ್ಚ್ 19ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.
Advertisement