'ವಾಸನೆ ಮತ್ತು ರುಚಿ ಸಾಮರ್ಥ್ಯವೇ ಹೋಗಿತ್ತು'; ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟನ ಸ್ಫೋಟಕ ಹೇಳಿಕೆ!

ಮಲಯಾಳಂ ಸೂಪರ್‌ಸ್ಟಾರ್ ಹಾಗೂ ದಕ್ಷಿಣ ಭಾರತದ ಖ್ಯಾತ ನಟ ಮಮ್ಮುಟ್ಟಿ ಇತ್ತೀಚೆಗೆ 2025 ರಲ್ಲಿ ನಟನೆಯಿಂದ ವಿರಾಮ ತೆಗೆದುಕೊಂಡಿದ್ದ ಕಾರಣವನ್ನು ಕೊನೆಗೂ ಬಹಿರಂಗಪಡಿಸಿದ್ದಾರೆ.
Mammootty Reveals He Lost Sense Of Smell And Taste
ನಟ ಮಮ್ಮುಟ್ಟಿ
Updated on

ಕೊಚ್ಚಿನ್: ಚಿತ್ರವೊಂದರ ಚಿತ್ರೀಕರಣ ವೇಳೆ ಆರೋಗ್ಯ ತೀರಾ ಹದಗೆಟ್ಟು ನನ್ನ ವಾಸನೆ ಮತ್ತು ರುಚಿ ಸಾಮರ್ಥ್ಯವೇ ಹೋಗಿತ್ತು ಎಂದು ಸೂಪರ್ ಸ್ಟಾರ್ ನಟ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಹೌದು.. ಮಲಯಾಳಂ ಸೂಪರ್‌ಸ್ಟಾರ್ ಹಾಗೂ ದಕ್ಷಿಣ ಭಾರತದ ಖ್ಯಾತ ನಟ ಮಮ್ಮುಟ್ಟಿ ಇತ್ತೀಚೆಗೆ 2025 ರಲ್ಲಿ ನಟನೆಯಿಂದ ವಿರಾಮ ತೆಗೆದುಕೊಂಡಿದ್ದ ಕಾರಣವನ್ನು ಕೊನೆಗೂ ಬಹಿರಂಗ ಪಡಿಸಿದ್ದು, ತಮ್ಮ ಈ ದಿಢೀರ್ ನಿರ್ಧಾರಕ್ಕೆ ಆರೋಗ್ಯದಲ್ಲಿನ ಏರುಪೇರು ಕಾರಣ ಎಂದು ಎಂದು ಹೇಳಿದ್ದಾರೆ.

ಈ ಹಿಂದೆ ಚಿತ್ರವೊಂದರ ಚಿತ್ರೀಕರಣ ವೇಳೆ ನಾನು ವಾಸನೆ ಮತ್ತು ರುಚಿಯ ಪ್ರಜ್ಞೆಯನ್ನು ಕಳೆದುಕೊಂಡಿದ್ದೆ. ಹೀಗಾಗಿ ನಾನು ತಾತ್ಕಾಲಿಕವಾಗಿ ಸಿನಿಮಾಗಳಿಂದ ವಿರಾಮ ತೆಗೆದುಕೊಂಡಿದ್ದೆ. ಬಳಿಕ ನಿರಂತರ ಚಿಕಿತ್ಸೆ ಮತ್ತು ಆರೈಕೆಯ ಬಳಿಕ ನಿಧಾನವಾಗಿ ಅವುಗಳನ್ನು ಮರಳಿ ಪಡೆಯುತ್ತಿದ್ದೇನೆ ಎಂದು ನಟ ಮಮ್ಮುಟ್ಟಿ ಬಹಿರಂಗಪಡಿಸಿದ್ದಾರೆ.

ಅಂತೆಯೇ ತಮಗಾದ ಈ ಕರಾಳ ಅನುಭವವು ತಾವು ತಮ್ಮ ದೇಹ ಮತ್ತು ಸಾಮಾನ್ಯ ಸಂವೇದನಾ ಕಾರ್ಯಗಳಿಗೆ ಹೆಚ್ಚು ಗಮನ ಹರಿಸುವಂತೆ ಮಾಡಿದೆ ಎಂದು ಹೇಳಿಕೊಂಡಿದ್ದಾರೆ.

Mammootty Reveals He Lost Sense Of Smell And Taste
ನಟ ಸಲ್ಮಾನ್ ಖಾನ್ ತಂದೆ ಆರೋಗ್ಯ ಏರುಪೇರು: Brain Haemorrhage, ಮುಂಬೈ ಆಸ್ಪತ್ರೆಗೆ ದಾಖಲು!

ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ದಿ ಕ್ಯೂ ಸ್ಟುಡಿಯೋ ಹಂಚಿಕೊಂಡ ವೀಡಿಯೊದಲ್ಲಿ ಮಮ್ಮುಟ್ಟಿ ಈ ಹೇಳಿಕೆ ನೀಡಿದ್ದು, "ದೃಷ್ಟಿ ಮತ್ತು ಶ್ರವಣವು ಮಾನವ ಜೀವನದ ಬಹಳ ಮುಖ್ಯವಾದ ಅಂಗಗಳಾಗಿವೆ. ಉಸಿರಾಡುವಾಗಲೂ, ಕೆಲವರು ಏನನ್ನೂ ವಾಸನೆ ಮಾಡಲು ಸಾಧ್ಯವಾಗುವುದಿಲ್ಲ. ನನಗೆ ದೀರ್ಘಕಾಲದವರೆಗೆ ಏನನ್ನೂ ವಾಸನೆ ಮಾಡಲು ಅಥವಾ ರುಚಿ ನೋಡಲು ಸಾಧ್ಯವಾಗಿರಲಿಲ್ಲ. ಈಗ, ನಾನು ಅದನ್ನು ನಿಧಾನವಾಗಿ ಮರಳಿ ಪಡೆಯುತ್ತಿದ್ದೇನೆ. ನಾವು ಅವುಗಳನ್ನು ಕಳೆದುಕೊಂಡಾಗ ಮಾತ್ರ ಅಂತಹ ಸಾಮರ್ಥ್ಯಗಳ ಮೌಲ್ಯವನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ' ಎಂದು ಹೇಳಿದರು.

ಸಂವೇದನಾ ಗ್ರಹಿಕೆಯ ಸವಲತ್ತು ಮತ್ತು ಅದನ್ನು ಹೆಚ್ಚಾಗಿ ಹೇಗೆ ಲಘುವಾಗಿ ತೆಗೆದುಕೊಳ್ಳಲಾಗುತ್ತದೆ. ಸಾಮಾನ್ಯವಾಗಿ ನಾವು ಯಾರನ್ನಾದರೂ ಜೋರು ದನಿ ಕಡಿಮೆ ಮಾಡಲು ಅಥವಾ ಮೃದುವಾದ ಧ್ವನಿಯಲ್ಲಿ ಮಾತನಾಡಲು ಕೇಳುತ್ತೇವೆ. ಅದು ನಮಗೆ ಕೇಳಲು ಸಾಧ್ಯವಾಗುತ್ತದೆ ಎಂಬ ಕಾರಣದಿಂದಾಗಿ ನಾವು ಆ ರೀತಿ ಕೇಳುತ್ತೇವೆ.

ಆದರೆ ಕೇಳಲು ಸಾಧ್ಯವಾಗದ ಮೂಕ ಕಿವುಡ ಜನರು ಎಂದಿಗೂ ಅಂತಹ ವಿಷಯಗಳನ್ನು ಹೇಳುವುದಿಲ್ಲ. ಕೆಲವರು ಹಾಡನ್ನು ಇಷ್ಟಪಡುವ ಅಥವಾ ಇಷ್ಟಪಡದಿರುವ ಸವಲತ್ತನ್ನು ಅರಿತುಕೊಳ್ಳುವುದಿಲ್ಲ, ಆದರೆ ಇತರರು ತಮ್ಮ ಜೀವನದಲ್ಲಿ ಏನನ್ನಾದರೂ ಕೇಳಲು ಬಯಸುತ್ತಾರೆ. ಕೇಳುವ ಶಕ್ತಿ ದೇವರ ಆಶೀರ್ವಾದ" ಎಂದು ಮಮ್ಮುಟ್ಟಿ ಹೇಳಿದರು.

ನಟನಿಗೆ ಕ್ಯಾನ್ಸರ್ ವದಂತಿ

2025ರಲ್ಲಿ ನಟ ಮಮ್ಮುಟ್ಟಿ ಚಿತ್ರಗಳಿಂದ ವಿರಾಮ ತೆಗೆದುಕೊಂಡಿದ್ದಾಗ ಅವರ ಆರೋಗ್ಯದ ಕುರಿತು ಸಾಕಷ್ಟು ಊಹಾಪೋಹಗಳು ಹರಿದಾಡಿದ್ದವು. ಅವರು ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿರಬಹುದು ಎಂದು ವದಂತಿಗಳ ಹರಿದಾಡಿದ್ದವು. ಆದರೆ ಈ ಆರೋಪಗಳನ್ನು ಮಮ್ಮುಟ್ಟಿ ಅವರ ತಂಡ ಈ ಆರೋಪಗಳನ್ನು ನಿರಾಕರಿಸಿದ್ದವು.

ಪೇಟ್ರಿಯಾಟ್‌ ಚಿತ್ರ

ನಟ ಮಮ್ಮುಟ್ಟಿ ಪ್ರಸ್ತುತ ಈಗ ತಮ್ಮ ಮುಂಬರುವ ಚಿತ್ರ 'ಪೇಟ್ರಿಯಾಟ್‌'ನ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದು, ಮಹೇಶ್ ನಾರಾಯಣನ್ ನಿರ್ದೇಶನದ ಈ ಬಹು ನಿರೀಕ್ಷಿತ ಚಿತ್ರದಲ್ಲಿ ಮೋಹನ್ ಲಾಲ್, ಕುಂಚಾಕೊ ಬೋಬನ್, ಫಹದ್ ಫಾಸಿಲ್, ನಟಿ ನಯನತಾರಾ, ರಾಜೀವ್ ಮೆನನ್ ಮತ್ತು ರೇವತಿ ಸೇರಿದಂತೆ ಹಲವು ತಾರಾ ನಟ-ನಟಿಯರಿದ್ದಾರೆ. ಈ ಪತ್ತೇದಾರಿ ಆಕ್ಷನ್ ಡ್ರಾಮಾ ಏಪ್ರಿಲ್ 23 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com