Bigg Bossನಲ್ಲಿ ದಾದಾಗಿರಿ: 6 ಭಾಷೆಗಳಲ್ಲಿ ಏಕಕಾಲಕ್ಕೆ ಶೋ; ಈ ಬಾರಿ ಸೌರವ್ ಗಂಗೂಲಿ ಹೊಸ ಎಂಟ್ರಿ

ಭಾರತದಲ್ಲಿ ಬಿಗ್ ಬಾಸ್ ಶೋ ಪ್ರಾರಂಭವಾಗಿ 20 ವರ್ಷಗಳಾಗಿದೆ. ಹಾಗಾಗಿ, ಸಂಸ್ಥೆಯು ಇಂಡಿಯಾಸ್ ಬಿಗ್ ರಿಯಾಲಿಟಿ ಎಂಬ ವಿಶೇಷ ಕಾಫಿ ಟೇಬಲ್ ಪುಸ್ತಕವನ್ನು ಬಿಡುಗಡೆ ಮಾಡಿ 6 ವಿಭಿನ್ನ ಭಾಷೆಗಳ ಆವೃತ್ತಿಗಳು ಏಕಕಾಲದಲ್ಲಿ ಪ್ರಾರಂಭವಾಗಲಿದೆ ಎಂದು ಘೋಷಿಸಿದೆ.
Bigg Boss
ಬಿಗ್ ಬಾಸ್Online Desk
Updated on

Bigg Boss: ಕನ್ನಡ ಕಿರುತೆರೆಯಲ್ಲಿ ಒಂದು ಹೆಸರನ್ನು ಹೇಳಿದರೆ ಸಾಕು, ಟಿಆರ್‌ಪಿ ಗ್ಯಾರಂಟಿ.! ಅದುವೇ ಬಿಗ್ ಬಾಸ್. ಇನ್ನು ಈ ರಿಯಾಲಿಟಿ ಶೋ ಅತ್ಯಂತ ಜನಪ್ರಿಯ ಮತ್ತು ಯಶಸ್ವಿ ರಿಯಾಲಿಟಿ ಶೋ ಆಗಲು ಪ್ರಮುಖ ಕಾರಣ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. ಮೊದಲ ಸೀಸನ್‌ನಿಂದ ಕಳೆದ 12ನೇ ಸೀಸನ್‌ವರೆಗೆ ತಮ್ಮದೇ ಆದ ಸ್ಟೈಲ್ ನಿಂದ ಕೋಟ್ಯಂತರ ಮನೆಗಳಲ್ಲಿ ಮನೆಮಾತಾಗಿದ್ದಾರೆ. ಇದೀಗ ಹೊಸ ಆವೃತ್ತಿಯೊಂದಿಗೆ ಮತ್ತೆ ಬಿಗ್ ಬಾಸ್ ಮನೆಗೆ ಕಿಚ್ಚ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ.

ಮುಂದುವರೆದು, ರಿಯಾಲಿಟಿ ಶೋ ಪ್ರಿಯರಿಗೆ ಜಿಯೋಸ್ಟಾರ್ ನೆಟ್‌ವರ್ಕ್ ಬಿಗ್ ಸರ್ಪ್ರೈಸ್ ನೀಡಿದೆ. ಅದುವೇ, ಮುಂಬರುವ ಹಬ್ಬದ ಸೀಸನ್ ಅನ್ನು ಗಮನದಲ್ಲಿಟ್ಟುಕೊಂಡು ಒಟ್ಟು 6 ಪ್ರಾದೇಶಿಕ ಭಾಷೆಗಳಲ್ಲಿ ಬಿಗ್ ಬಾಸ್ ಕಾರ್ಯಕ್ರಮವನ್ನು ಏಕಕಾಲದಲ್ಲಿ ಸೆಪ್ಟೆಂಬರ್ ತಿಂಗಳಿನಿಂದ ಪ್ರಸಾರ ಮಾಡುವುದಾಗಿ ಜಿಯೋಸ್ಟಾರ್ ಘೋಷಿಸಿದೆ. ಅದರಂತೆ, ಕಳೆದ ಹತ್ತು ವರ್ಷಕ್ಕೂ ಹೆಚ್ಚು ಕಾಲದಿಂದ ನಿರಂತರವಾಗಿ ಕನ್ನಡ ಬಿಗ್ ಬಾಸ್ ನಡೆಸಿಕೊಡುತ್ತಿರುವ ಸುದೀಪ್ ಅವರೇ ಮುಂದುವರೆಯಲಿದ್ದಾರೆ.

Bigg Boss
ಅಪಘಾತದ ನಂತರ ಪಟಾಕಿ ಪಾರ್ವತಿ ಭರ್ಜರಿ ಕಮ್ ಬ್ಯಾಕ್; ನಾಗಬಂಧಂ ಯಶಸ್ಸಿನಲ್ಲಿ ನಭಾ ನಟೇಶ್

Bigg Bossನಲ್ಲಿ ದಾದಾಗಿರಿ

ಭಾರತದಲ್ಲಿ ಬಿಗ್ ಬಾಸ್ ಶೋ ಪ್ರಾರಂಭವಾಗಿ 20 ವರ್ಷಗಳಾಗಿದೆ. ಹಾಗಾಗಿ, ಸಂಸ್ಥೆಯು ಇಂಡಿಯಾಸ್ ಬಿಗ್ ರಿಯಾಲಿಟಿ ಎಂಬ ವಿಶೇಷ ಕಾಫಿ ಟೇಬಲ್ ಪುಸ್ತಕವನ್ನು ಬಿಡುಗಡೆ ಮಾಡಿ 6 ವಿಭಿನ್ನ ಭಾಷೆಗಳ ಆವೃತ್ತಿಗಳು ಏಕಕಾಲದಲ್ಲಿ ಪ್ರಾರಂಭವಾಗಲಿದೆ ಎಂದು ಘೋಷಿಸಿದೆ. ಇದರಲ್ಲಿ ಅಚ್ಚರಿಯಾಗಿ, ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಇದೇ ಮೊದಲ ಬಾರಿಗೆ ಬಿಗ್ ಬಾಸ್ ಬಾಂಗ್ಲಾ ಆವೃತ್ತಿಯ ಮೂಲಕ ನಿರೂಪಕರಾಗಿ ಅಖಾಡಕ್ಕಿಳಿಯುತ್ತಿದ್ದಾರೆ.

ಒಂದು ದಶಕದ ಬಳಿಕ ಕಂಬ್ಯಾಕ್

ಬಂಗಾಳಿ ಭಾಷೆಯ ಬಿಗ್ ಬಾಸ್ ಇತಿಹಾಸದಲ್ಲಿ ಇದು ಬಹುದೊಡ್ಡ ತಿರುವಾಗಿದೆ. 2013ರಲ್ಲಿ ಆರಂಭವಾಗಿದ್ದ ಮೊದಲ ಸೀಸನ್ ಅನ್ನು ಖ್ಯಾತ ನಟ ಮಿಥುನ್ ಚಕ್ರವರ್ತಿ ನಡೆಸಿಕೊಟ್ಟಿದ್ದರು. 2016ರಲ್ಲಿ ಪ್ರಸಾರವಾದ ಎರಡನೇ ಸೀಸನ್‌ಗೆ ನಟ ಜೀತ್ ನಿರೂಪಕರಾಗಿದ್ದರು. ಆ ಬಳಿಕ ಸುಮಾರು 10 ವರ್ಷಗಳ ಕಾಲ ಈ ಶೋ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಇದೀಗ ಬೆಂಗಾಲ್ ಟೈಗರ್ ಸೌರವ್ ಗಂಗೂಲಿ ಸಾರಥಿಯಾಗುವುದರೊಂದಿಗೆ ಬಿಗ್ ಬಾಸ್ ಬಾಂಗ್ಲಾ ಶೋ ಭರ್ಜರಿಯಾಗಿ ಮರುಪ್ರಾರಂಭವಾಗಲಿವೆ.

Bigg Boss
'ಸೀತೆ ಪಾತ್ರಕ್ಕಾಗಿ ನನ್ನ ಆಲೋಚನೆಗಳನ್ನು ಶುದ್ಧವಾಗಿಟ್ಟಿದ್ದೆ': ರಾಮಾಯಣ ಚಿತ್ರದ ಶೂಟಿಂಗ್ ಅನುಭವ ಬಿಚ್ಚಿಟ್ಟ ಸಾಯಿ ಪಲ್ಲವಿ

ಮುಂದುವರೆದು, ಎಂದಿನಂತೆ ಈ ಬಾರಿಯೂ ಹಿಂದಿಯಲ್ಲಿ ಸಲ್ಮಾನ್ ಖಾನ್, ತಮಿಳಿನಲ್ಲಿ ವಿಜಯ್ ಸೇತುಪತಿ, ತೆಲುಗಿನಲ್ಲಿ ಅಕ್ಕಿನೇನಿ ನಾಗಾರ್ಜುನ ಹಾಗೂ ಮಲೆಯಾಳಂನಲ್ಲಿ ಮೋಹನ್‌ಲಾಲ್, ಮರಾಠಿಯಲ್ಲಿ ರಿತೇಶ್ ದೇಶಮುಖ್ ಅವರೇ ನಿರೂಪಣೆ ಮಾಡಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com