

ಖ್ಯಾತ ನಟ ಆರ್. ಮಾಧವನ್ ಅವರು ಪತ್ನಿ ಸರಿತಾ ಅವರೊಂದಿಗಿನ 27 ವರ್ಷಗಳ ಸುದೀರ್ಘ ದಾಂಪತ್ಯ ಜೀವನದ ಯಶಸ್ಸಿನ ರಹಸ್ಯವನ್ನು ಬಿಚ್ಚಿಟ್ಟಿದ್ದು, ಚಿತ್ರರಂಗದಲ್ಲಿ ದಶಕಗಳನ್ನು ಕಳೆದ ನಂತರವೂ ಲಾಯಲಿಟಿ(ನಿಷ್ಠೆ) ತನಗೆ ಎಂದಿಗೂ ಸವಾಲಾಗಿಲ್ಲ ಎಂದು ಹೇಳಿಕೊಂಡಿದ್ದಾರೆ.
ಜೂನ್ 6 ರಂದು ಸರಿತಾ ಅವರೊಂದಿಗೆ 27ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ನಟ ಮಾಧವನ್ ಅವರು, ತಮ್ಮ ವೈವಾಹಿಕ ಜೀವನ ಮತ್ತು ಖ್ಯಾತಿಯನ್ನು ನ್ಯಾವಿಗೇಟ್ ಮಾಡಲು ಸಹಾಯ ಮಾಡಿದ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಪತ್ನಿ ಸರಿತಾ ಅವರಿಗೆ ಎಂದಿಗೂ ಮೋಸ ಮಾಡಿಲ್ಲ ಎಂದು ಮಾಧವನ್ ಹೇಳಿದ್ದಾರೆ.
“ನಿಷ್ಠೆ ಎಂಬುದು ನಮ್ಮ ಕುಟುಂಬದಿಂದ ಬಂದ ಮೌಲ್ಯ. ನಾನು ಅತ್ಯಂತ ಆಕರ್ಷಕ ನಟಿಯರ ಜೊತೆ ಕೆಲಸ ಮಾಡಿದ್ದೇನೆ. ಅಟ್ರಾಕ್ಟಿವ್ ಹುಡುಗಿಯರ ಕಡೆಗೆ ಆಕರ್ಷಿತನಾಗಿದ್ದೇನೆ. ಆದರೆ ದಿನದ ಕೊನೆಯಲ್ಲಿ ಮನೆಗೆ ಹೋಗಿ ನನ್ನ ಪತ್ನಿಯೊಂದಿಗೆ ಸಮಯ ಕಳೆಯುವುದನ್ನೇ ಆಯ್ಕೆ ಮಾಡುತ್ತೇನೆ” ಎಂದು ಮಾಧವನ್ ತಿಳಿಸಿದ್ದಾರೆ.
ತಮ್ಮ ಫೋನ್ ಹಾಗೂ ಹಣಕಾಸಿನ ವ್ಯವಹಾರಗಳ ಬಗ್ಗೆ ಪತ್ನಿಗೆ ಸಂಪೂರ್ಣ ಮಾಹಿತಿ ಇದೆ ಎಂದೂ ಅವರು ತಿಳಿಸಿದ್ದಾರೆ.
ಮಾಧವನ್ ಮತ್ತು ಸರಿತಾ 1999ರಲ್ಲಿ ವಿವಾಹವಾಗಿದ್ದು, ಈ ದಂಪತಿಗೆ ವೇದಾಂತ್ ಮಾಧವನ್ ಎಂಬ ಪುತ್ರನಿದ್ದಾರೆ. ನಟನ ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದು, ಅವರ ದಾಂಪತ್ಯ ಜೀವನದ ಬಗ್ಗೆ ಅಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
Advertisement