ನಿರ್ದೇಶಕರ ಸೂಚನೆ ಪಾಲಿಸಿದ್ದಾಳೆ, ಚಿತ್ರವನ್ನು ಟೀಕಿಸಿ, ನಟಿಯನ್ನಲ್ಲ: ಜಾನ್ವಿ ಕಪೂರ್ ಬೆನ್ನಿಗೆ ನಿಂತ ನಟ ಜಗಪತಿ ಬಾಬು

'ಪೆದ್ದಿ' ಚಿತ್ರದಲ್ಲಿ ಜಾನ್ವಿ ಕಪೂರ್ ಅವರ ಪಾತ್ರ ‘ಅಚಿಯಮ್ಮ’ವನ್ನು ಅತಿಯಾದ ಗ್ಲಾಮರಸ್ ಆಗಿ ಪ್ರದರ್ಶಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಚಿತ್ರದ ಕೆಲವು ದೃಶ್ಯಗಳು ಮತ್ತು ಹಾಡುಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆದಿದ್ದು, ಅನೇಕರು ನಟಿಯನ್ನು ಟೀಕಿಸಿದ್ದರು.
File photo
ಸಂಗ್ರಹ ಚಿತ್ರ
Updated on

ಹೈದರಾಬಾದ್: ನಟಿ ಜಾನ್ವಿ ಕಪೂರ್ ಅಭಿನಯಿಸಿರುವ ಪೆದ್ದಿ ಚಿತ್ರದ ಪಾತ್ರದ ಚಿತ್ರಣದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗುತ್ತಿರುವ ನಡುವೆಯೇ, ಹಿರಿಯ ನಟ ಜಗಪತಿ ಬಾಬು ಅವರು ನಟಿಯ ಪರವಾಗಿ ಧ್ವನಿಯೆತ್ತಿದ್ದಾರೆ. ನಿರ್ದೇಶಕರ ಸೃಜನಾತ್ಮಕ ನಿರ್ಧಾರಗಳಿಗೆ ನಟಿಯನ್ನು ಹೊಣೆಗಾರರನ್ನಾಗಿ ಮಾಡಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

'ಪೆದ್ದಿ' ಚಿತ್ರದಲ್ಲಿ ಜಾನ್ವಿ ಕಪೂರ್ ಅವರ ಪಾತ್ರ ‘ಅಚಿಯಮ್ಮ’ವನ್ನು ಅತಿಯಾದ ಗ್ಲಾಮರಸ್ ಆಗಿ ಪ್ರದರ್ಶಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಚಿತ್ರದ ಕೆಲವು ದೃಶ್ಯಗಳು ಮತ್ತು ಹಾಡುಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆದಿದ್ದು, ಅನೇಕರು ನಟಿಯನ್ನು ಟೀಕಿಸಿದ್ದರು.

ಈ ವಿವಾದದ ಕುರಿತು ಪ್ರತಿಕ್ರಿಯಿಸಿರುವ ಜಗಪತಿ ಬಾಬು, “ದಯವಿಟ್ಟು ನಟಿಯನ್ನು ವೈಯಕ್ತಿಕವಾಗಿ ಗುರಿಯಾಗಿಸಬೇಡಿ. ಆ ಹುಡುಗಿಯ ಮೇಲೆ ಆರೋಪ ಮಾಡುವುದು ಸರಿಯಲ್ಲ. ಆಕೆಯ ವೈಯಕ್ತಿಕ ಅಭಿಪ್ರಾಯ ಏನಿತ್ತು ಅಥವಾ ಚಿತ್ರದ ಪ್ರತಿಯೊಂದು ಸೃಜನಾತ್ಮಕ ನಿರ್ಧಾರಕ್ಕೂ ಆಕೆ ಒಪ್ಪಿದ್ದಳಾ ಎಂಬುದು ನಮಗೆ ತಿಳಿದಿಲ್ಲ” ಎಂದು ಹೇಳಿದ್ದಾರೆ.

ನಿರ್ದೇಶಕರ ದೃಷ್ಟಿಕೋನದ ಮೇಲೆ ನಂಬಿಕೆ ಇಟ್ಟುಕೊಂಡು ನಟರು ಕೆಲಸ ಮಾಡುತ್ತಾರೆ, “ಅವಳು ಸ್ವತಃ ಆ ರೀತಿಯ ಚಿತ್ರಣಕ್ಕಾಗಿ ಒತ್ತಾಯ ಮಾಡಿಲ್ಲ. ನಿರ್ದೇಶಕರು ಹೇಳಿದ್ದನ್ನು ಅವಳು ಮಾಡಿದ್ದಾರೆ. ಒಬ್ಬ ನಟ ಅಥವಾ ನಟಿ ಚಿತ್ರಕ್ಕೆ ಸಹಿ ಹಾಕಿದ ಬಳಿಕ ನಿರ್ದೇಶಕರ ದೃಷ್ಟಿಕೋನವನ್ನು ಅನುಸರಿಸುತ್ತಾರೆ. ನಾವು ನಿರ್ದೇಶಕರು ಹೇಳಿದಂತೆ ಕೆಲಸ ಮಾಡುತ್ತೇವೆ. ಕೆಲವೊಮ್ಮೆ ಅದು ಯಶಸ್ವಿಯಾಗುತ್ತದೆ, ಕೆಲವೊಮ್ಮೆ ಆಗುವುದಿಲ್ಲ. ಈ ವಿಷಯದಲ್ಲಿ ನಾನು ಜಾನ್ವಿಗೆ ಬೆಂಬಲವಾಗಿ ನಿಲ್ಲುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಚಿತ್ರವನ್ನು ಇಷ್ಟಪಟ್ಟರೆ ಅಥವಾ ಇಷ್ಟಪಡದಿದ್ದರೆ ಚಿತ್ರದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ, ಆದರೆ, ಒಬ್ಬ ಕಲಾವಿದನನ್ನು ಪ್ರತ್ಯೇಕವಾಗಿ ಗುರಿಯಾಗಿಸಿ ಟ್ರೋಲ್ ಮಾಡುವುದು ಅಥವಾ ಮಾನಸಿಕ ಒತ್ತಡಕ್ಕೆ ಒಳಪಡಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

File photo
ನಟಿಯನ್ನು ಯಾಕೆ ದೂಷಿಸುತ್ತೀರಾ? Peddi ಚಿತ್ರದಲ್ಲಿನ ಜಾಹ್ನವಿ ಉಡುಪು ವಿವಾದಕ್ಕೆ ನಟಿ ಆಶಿಕಾ ರಂಗನಾಥ್ ಗರಂ

ಇದಕ್ಕೂ ಮೊದಲು ಚಿತ್ರದ ನಿರ್ದೇಶಕ ಬುಚಿ ಬಾಬು ಸನಾ ಕೂಡ ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿ, ಕೆಲವರಿಗೆ ಅಸಮಾಧಾನ ಉಂಟುಮಾಡಿದ ದೃಶ್ಯಗಳಿಗಾಗಿ ಕ್ಷಮೆಯಾಚಿಸಿದ್ದರು. ಜೊತೆಗೆ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ ಆವೃತ್ತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಟೀಕೆಗೆ ಗುರಿಯಾಗಿದ್ದ ಕೆಲವು ದೃಶ್ಯಗಳು ಇನ್ನೂ ಚಿತ್ರದಲ್ಲಿ ಮುಂದುವರಿದಿವೆ ಎಂದು ಹೇಳಲಾಗುತ್ತಿದೆ.

ವಿವಾದದ ನಡುವೆಯೂ 'ಪೆದ್ದಿ' ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಜೂನ್ 4ರಂದು ಬಿಡುಗಡೆಯಾದ ಈ ಚಿತ್ರ ಈಗಾಗಲೇ ಜಾಗತಿಕ ಮಟ್ಟದಲ್ಲಿ ರೂ.248 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ.

ಚಿತ್ರದಲ್ಲಿ ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದು, ಶಿವ ರಾಜಕುಮಾರ್, ಜಗಪತಿ ಬಾಬು, ದಿವ್ಯೆಂದು ಮತ್ತು ಬೊಮನ್ ಇರಾನಿ ಪ್ರಮುಖ ಪೋಷಕ ಪಾತ್ರಗಳಲ್ಲಿ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com