ನಟಿಯನ್ನು ಯಾಕೆ ದೂಷಿಸುತ್ತೀರಾ? Peddi ಚಿತ್ರದಲ್ಲಿನ ಜಾಹ್ನವಿ ಉಡುಪು ವಿವಾದಕ್ಕೆ ನಟಿ ಆಶಿಕಾ ರಂಗನಾಥ್ ಗರಂ

ನಿರ್ದೇಶಕ ಬುಚಿ ಬಾಬು ಅವರ ಕ್ರೀಡಾ ಆಕ್ಷನ್ ನಾಟಕ 'ಪೆದ್ದಿ'ಯಲ್ಲಿ ಜಾಹ್ನವಿ ಕಪೂರ್ ಅವರ ಉಡುಪು ಈಗ ತೀವ್ರ ಚರ್ಚೆಗೆ ಕಾರಣವಾಗಿದೆ. ನಟಿಯನ್ನು ಹೆಚ್ಚಾಗಿ ಹಸಿಬಿಸಿ ದೃಶ್ಯಗಳಲ್ಲಿ ತೋರಿಸಲಾಗಿದೆ. ನಟಿಯ ದೇಹವನ್ನು ಹೆಚ್ಚು ಜೂಮ್ ಹಾಕಿ ತೋರಿಸುವುದನ್ನು ಹಲವರು ಪ್ರಶ್ನಿಸಿದ್ದಾರೆ.
Janhvi Kapoor, Ashika Ranganath
ಜಾಹ್ನವಿ ಕಪೂರ್, ಆಶಿಕಾ ರಂಗನಾಥ್
Updated on

ನಿರ್ದೇಶಕ ಬುಚಿ ಬಾಬು ಅವರ ಕ್ರೀಡಾ ಆಕ್ಷನ್ ನಾಟಕ 'ಪೆದ್ದಿ'ಯಲ್ಲಿ ಜಾಹ್ನವಿ ಕಪೂರ್ ಅವರ ಉಡುಪು ಈಗ ತೀವ್ರ ಚರ್ಚೆಗೆ ಕಾರಣವಾಗಿದೆ. ನಟಿಯನ್ನು ಹೆಚ್ಚಾಗಿ ಹಸಿಬಿಸಿ ದೃಶ್ಯಗಳಲ್ಲಿ ತೋರಿಸಲಾಗಿದೆ. ನಟಿಯ ದೇಹವನ್ನು ಹೆಚ್ಚು ಜೂಮ್ ಹಾಕಿ ತೋರಿಸುವುದನ್ನು ಹಲವರು ಪ್ರಶ್ನಿಸಿದ್ದಾರೆ. ಇದೇ ವೇಳೆ ಕನ್ನಡ, ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿರುವ ನಟಿ ಆಶಿಕಾ ರಂಗನಾಥ್, ಜಾಹ್ನವಿ ಅವರ ಬೆಂಬಲಕ್ಕೆ ನಿಂತಿದ್ದು ನೀವು ಚಿತ್ರತಂಡವನ್ನು ಪ್ರಶ್ನಿಸಬೇಕು ಎಂದು ಒತ್ತಾಯಿಸಿದ್ದಾರೆ.

ಆಶಿಕಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ, ಕಮರ್ಷಿಯಲ್ ಸಿನಿಮಾಗಳಲ್ಲಿ ಹೆಚ್ಚಾಗಿ ನಾಯಕಿಯನ್ನು ಗ್ಲಾಮರಸ್ ಆಗಿ ತೋರಿಸಲಾಗುತ್ತದೆ. ನಾಯಕನನ್ನು ನಾಯಕಿ ಹೇಗೆ ಆಕರ್ಷಿಸುತ್ತಾಳೆ ಎಂಬುದೇ ಆಗಿರುತ್ತದೆ. ಇದಕ್ಕೆ ನೀವು ನಟಿಯನ್ನು ದೂಷಿಸಬೇಡಿ. ಹಸಿಬಿಸಿ ದೃಶ್ಯಗಳಿರುವ ಚಿತ್ರಗಳನ್ನು ನಿರ್ಮಿಸುವ ವ್ಯವಸ್ಥೆ ಮತ್ತು ನಿರ್ಮಾಪಕರನ್ನು ದೂಷಿಸಿ. ನಟರು ದೊಡ್ಡ ಚಿತ್ರಗಳ ಭಾಗವಾಗುತ್ತಾರೆ. ಹೆಚ್ಚಿನ ಪ್ರೇಕ್ಷಕರನ್ನು ತಲುಪುತ್ತಾರೆ ಎಂಬ ಭರವಸೆಯೊಂದಿಗೆ ಕೆಲಸ ಮಾಡುತ್ತಾರೆ. ಮಹಿಳಾ ಪಾತ್ರಗಳನ್ನು ಚೆನ್ನಾಗಿ ತೋರಿಸದಿದ್ದರೆ, ಜವಾಬ್ದಾರಿ ಬರವಣಿಗೆ ಮತ್ತು ಚಲನಚಿತ್ರ ನಿರ್ಮಾಣ ನಿರ್ಧಾರಗಳ ಮೇಲಿರುತ್ತದೆ ಎಂದು ಹೇಳಿದರು.

Janhvi Kapoor, Ashika Ranganath
Peddi: ಪಾತ್ರಕ್ಕೆ ತಕ್ಕಂತೆ ಜಾನ್ವಿ ಕಪೂರ್ ನಟಿಸಿದ್ರೂ ಎಡಿಟರ್ ಕಣ್ಣು ಮಾತ್ರ ಎದೆ, ಸೊಂಟದ ಮೇಲೆ ಯಾಕೆ? ನೆಟ್ಟಿಗರ ತರಾಟೆ!

ಒಂದು ದೃಶ್ಯದಲ್ಲಿ ನಾಯಕ ರಾಮ್ ಚರಣ್ ನಾಯಕಿ ಅಚಿಯಮ್ಮಗೆ ಆಸಕ್ತಿ ಇಲ್ಲದಿದ್ದರೂ ಅವರೊಂದಿಗೆ ಇರಬೇಕೆಂಬ ಬಯಕೆಯನ್ನು ವ್ಯಕ್ತಪಡಿಸುತ್ತಾನೆ. ನಂತರ, ವಿದ್ಯುತ್ ಕಡಿತದ ಸಮಯದಲ್ಲಿ, ಅವನು ಅವಳ ಒಪ್ಪಿಗೆಯಿಲ್ಲದೆ ಅವಳನ್ನು ಚುಂಬಿಸುತ್ತಾನೆ. ಈ ದೃಶ್ಯವು ಆನ್‌ಲೈನ್‌ನಲ್ಲಿ ಚರ್ಚೆಗೆ ನಾಂದಿ ಹಾಡಿದೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಇದನ್ನು "ದಾಳಿ" ಎಂದು ಕರೆದರು. ನಿರ್ದೇಶಕ ಬುಚಿ ಬಾಬು ಸನಾ ಪೆದ್ದಿ ಸುತ್ತಲಿನ ವಿವಾದದ ಬಗ್ಗೆ ಹೇಳಿಕೆ ನೀಡಿದರು. ಒಬ್ಬ ಚಲನಚಿತ್ರ ನಿರ್ದೇಶಕನಾಗಿ ಸಿನಿಮಾ ಪ್ರೇಕ್ಷಕರನ್ನು ರಂಜಿಸಬೇಕು, ಪ್ರೇರೇಪಿಸಬೇಕು ಮತ್ತು ಸಮನ್ವಯ ಸಾಧಿಸಬೇಕು ಎಂದು ನಾನು ನಂಬುತ್ತೇನೆ. ಅದು ಯಾರಿಗೂ ಅನಾನುಕೂಲ ಅಥವಾ ಅವಮಾನವನ್ನುಂಟು ಮಾಡಬಾರದು. ಅವರು ಚಿತ್ರದ ಕೆಲವು ಭಾಗಗಳ ಟೀಕೆಯನ್ನು ಒಪ್ಪಿಕೊಂಡರು. ಅನಾನುಕೂಲತೆಯನ್ನು ಅನುಭವಿಸಿದ ವೀಕ್ಷಕರಿಗೆ ಕ್ಷಮೆಯಾಚಿಸಿದರು. ಅಲ್ಲದೆ ಕೆಲ ದೃಶ್ಯಗಳಿಗೆ ಕತ್ತರಿ ಹಾಕುವುದಾಗಿಯೂ ಹೇಳಿದ್ದಾರೆ.

ರಾಮ್ ಚರಣ್, ಜಾಹ್ನವಿ ಕಪೂರ್, ಶಿವ ರಾಜ್‌ಕುಮಾರ್, ದಿವ್ಯೆಂದು ಮತ್ತು ಬೋಮನ್ ಇರಾನಿ ನಟಿಸಿರುವ ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡುತ್ತಿದೆ. ವಿಶ್ವಾದ್ಯಂತ 234 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com