'ಹಲ್ಕಾ ಡಾನ್' ಚಿತ್ರತಂಡಕ್ಕೆ ರೂಪೇಶ್ ಶೆಟ್ಟಿ ಸೇರ್ಪಡೆ; ಪ್ರಮೋದ್, ಅಮೃತಾ ಅಯ್ಯಂಗಾರ್ ಜೊತೆ ನಟನೆ

ಟಗರು ಮತ್ತು ಸಲಗದಂತಹ ಯಶಸ್ವಿ ಚಿತ್ರಗಳಿಗೆ ಹೆಸರುವಾಸಿಯಾದ ಶ್ರೀಕಾಂತ್‌ ಅವರಿಗೆ ಈ ಚಿತ್ರವು ಮತ್ತೊಂದು ಪ್ರಮುಖ ಯೋಜನೆಯಾಗಿದೆ. ರೂಪೇಶ್ ಪಾತ್ರದ ಬಗ್ಗೆ ಸದ್ಯ ನಿರ್ಮಾಪಕರು ಯಾವುದೇ ಮಾಹಿತಿ ನೀಡಿಲ್ಲ.
Roopesh Shetty
ರೂಪೇಶ್ ಶೆಟ್ಟಿ
Updated on

ವೀನಸ್ ಎಂಟರ್‌ಟೈನರ್ಸ್ ಬ್ಯಾನರ್ ಅಡಿಯಲ್ಲಿ ಕೆಪಿ ಶ್ರೀಕಾಂತ್ ನಿರ್ಮಿಸಿ, ಛಲ ನಿರ್ದೇಶಿಸಿದ 'ಹಲ್ಕಾ ಡಾನ್' ಚಿತ್ರತಂಡಕ್ಕೆ ನಟ-ನಿರ್ದೇಶಕ ರೂಪೇಶ್ ಶೆಟ್ಟಿ ಸೇರ್ಪಡೆಗೊಂಡಿದ್ದಾರೆ. ನಟ ಪ್ರಮೋದ್ ಮತ್ತು ನಟಿ ಅಮೃತ ಅಯ್ಯಂಗಾರ್ ಅವರೊಂದಿಗೆ ನಟಿಸಲಿದ್ದಾರೆ.

ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ನಿರ್ಮಿಸಲಾದ ಕಮರ್ಷಿಯಲ್ ಎಂಟರ್‌ಟೈನ್‌ಮೆಂಟ್ ಆಗಿದೆ. ಟಗರು ಮತ್ತು ಸಲಗದಂತಹ ಯಶಸ್ವಿ ಚಿತ್ರಗಳಿಗೆ ಹೆಸರುವಾಸಿಯಾದ ಶ್ರೀಕಾಂತ್‌ ಅವರಿಗೆ ಈ ಚಿತ್ರವು ಮತ್ತೊಂದು ಪ್ರಮುಖ ಯೋಜನೆಯಾಗಿದೆ.

ಕನ್ನಡ, ತುಳು ಮತ್ತು ತಮಿಳು ಮನರಂಜನಾ ಉದ್ಯಮಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿಕೊಂಡಿರುವ ರೂಪೇಶ್ ಶೆಟ್ಟಿ, ವಿಶೇಷವಾಗಿ ಕರಾವಳಿ ಕರ್ನಾಟಕದಲ್ಲಿ ನಿಷ್ಠಾವಂತ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ, ಅವರು ದೂರದರ್ಶನ ಮತ್ತು ಸ್ವತಂತ್ರ ಕಾರ್ಯಕ್ರಮಗಳಿಂದ ಮುಖ್ಯವಾಹಿನಿಯ ಸಿನಿಮಾಗಳಿಗೆ ತಮ್ಮ ಅಸ್ತಿತ್ವವನ್ನು ಸ್ಥಿರವಾಗಿ ವಿಸ್ತರಿಸಿದ್ದಾರೆ. ಈ ಪ್ರದೇಶದ ಅತ್ಯಂತ ಗುರುತಿಸಬಹುದಾದ ಯುವ ಪ್ರತಿಭೆಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ.

Roopesh Shetty
ಕನ್ನಡಕ್ಕೆ ತಮಿಳು ನಟಿ ಐಶ್ವರ್ಯಾ ರಾಜೇಶ್ ಪದಾರ್ಪಣೆ

ರೂಪೇಶ್ ಪಾತ್ರದ ಬಗ್ಗೆ ಸದ್ಯ ನಿರ್ಮಾಪಕರು ಯಾವುದೇ ಮಾಹಿತಿ ನೀಡಿಲ್ಲ. ಆದರೆ, ಮೂಲಗಳು ಸೂಚಿಸುವಂತೆ ಅವರು ನಿರೂಪಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ.

ಹಲ್ಕಾ ಡಾನ್ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದು, ಸತ್ಯ ಹೆಗ್ಡೆ ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com