'ಅತೀವ ನೋವಿದೆ ಆದರೆ, ಹಾಡುವುದು ನಿಲ್ಲಿಸಲ್ಲ'; ಆರೋಗ್ಯ ಸಮಸ್ಯೆ ಬಹಿರಂಗಪಡಿಸಿದ ಗಾಯಕ ಸೋನು ನಿಗಮ್

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ತಮ್ಮ ಪ್ರಸ್ತುತ ಆರೋಗ್ಯ ಸ್ಥಿತಿ ಮತ್ತು ಚಿಕಿತ್ಸೆಯ ವಿವರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
Sonu Nigam
ಗಾಯಕ ಸೋನು ನಿಗಮ್
Updated on

ಖ್ಯಾತ ಗಾಯಕ ಸೋನು ನಿಗಮ್ ಅವರಿಗೆ ತೀವ್ರ ಆರೋಗ್ಯ ಸಮಸ್ಯೆ ಎದುರಾಗಿದ್ದು, ನರಗಳ ಸಮಸ್ಯೆಯಿಂದ ಬಳಲುತ್ತಿದ್ದರೂ ತಮ್ಮ ಮುಂಬರುವ ಲೈವ್ ಶೋಗಳನ್ನು ರದ್ದುಗೊಳಿಸದಿರಲು ನಿರ್ಧರಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ತಮ್ಮ ಪ್ರಸ್ತುತ ಆರೋಗ್ಯ ಸ್ಥಿತಿ ಮತ್ತು ಚಿಕಿತ್ಸೆಯ ವಿವರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ವೈದ್ಯರು ನನ್ನ ಆರೋಗ್ಯ ಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದಾರೆ. “ನನ್ನ ನರಗಳು ಒತ್ತಡಕ್ಕೆ ಸಿಲುಕಿವೆ (Pinched Nerves). ಕಳೆದ ಒಂದು ವಾರದಿಂದ MRI ಮತ್ತು CT ಸ್ಕ್ಯಾನ್‌ಗಳನ್ನು ಮಾಡಿಸಿಕೊಳ್ಳುತ್ತಿದ್ದೇನೆ. ಸಾಕಷ್ಟು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.

ಇದೇ ವೇಳೆ ಚಿಕಿತ್ಸೆಯ ಭಾಗವಾಗಿ ಫಿಸಿಯೋಥೆರಪಿಯನ್ನೂ ಪಡೆಯುತ್ತಿರುವುದಾಗಿ ಹೇಳಿದ ಗಾಯಕ, ಆ ಪ್ರಕ್ರಿಯೆ ತುಂಬಾ ನೋವಿನಿಂದ ಕೂಡಿದೆ ಎಂದು ವಿವರಿಸಿದ್ದಾರೆ.

Sonu Nigam
ಹುಬ್ಬಳ್ಳಿ: ಕನ್ನಡ, ಕನ್ನಡ ವಿವಾದದ ಬಳಿಕ ಸಿದ್ದಾರೂಢ ಮಠಕ್ಕೆ ಬಾಲಿವುಡ್ ಗಾಯಕ ಸೋನು ನಿಗಮ್ ಭೇಟಿ

“ಫಿಸಿಯೋಥೆರಪಿ ಬಹಳ ನೋವಿನ ಅನುಭವವಾಗಿದೆ. ಈಗ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೇನೆ,” ಎಂದು ತಿಳಿಸಿದ್ದಾರೆ.

ನನ್ನ ಧ್ವನಿಯ ಮೇಲೂ ಚಿಕಿತ್ಸೆಯ ಪರಿಣಾಮ ಬಿದ್ದಿದೆ. ಸ್ನಾಯುಗಳನ್ನು ಸಡಿಲಗೊಳಿಸಲು ನೀಡಲಾಗುತ್ತಿರುವ ಔಷಧಿಗಳಿಂದ ಗಂಟಲು ಭಾರವಾದಂತಾಗಿದೆ ಎಂದು ಹೇಳಿದ್ದಾರೆ.

ಆರೋಗ್ಯ ಸಮಸ್ಯೆಯ ನಡುವೆಯೂ ಕಾರ್ಯಕ್ರಮಕ್ಕೆ ಸಜ್ಜು

ಈ ನಡುವೆ ತಮ್ಮ ಆರೋಗ್ಯ ಸ್ಥಿತಿ ಸಂಪೂರ್ಣವಾಗಿ ಸುಧಾರಿಸದಿದ್ದರೂ, ಅಭಿಮಾನಿಗಳ ನಿರೀಕ್ಷೆಯನ್ನು ನಿರಾಸೆಗೊಳಿಸಲು ಇಷ್ಟವಿಲ್ಲ ಎಂದಿರುವ ಗಾಯಕ, ದೀರ್ಘ ವಿರಾಮದ ಬಳಿಕ ಮುಂಬೈನಲ್ಲಿ ಕಾರ್ಯಕ್ರಮ ನೀಡುತ್ತಿರುವುದರಿಂದ ಅದನ್ನು ರದ್ದುಪಡಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

“ಈ ಪರಿಸ್ಥಿತಿಯಿಂದ ನನ್ನ ಆತ್ಮವಿಶ್ವಾಸ ಸ್ವಲ್ಪ ಕುಂದಿದೆ. ಆದರೂ ಕಾರ್ಯಕ್ರಮ ನಡೆಸಲು ನಾನು ಸಂಪೂರ್ಣ ಸಿದ್ಧನಿದ್ದೇನೆ,” ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com