ಎರಡು ದಿನದ ಹಿಂದೆ ನನ್ನ ಎಂಗೇಜ್ ಮೆಂಟ್ ಆಯ್ತು; ತಕ್ಷಣವೇ ಮದುವೆ ಮಾಡಬೇಡಿ: ನಟಿ ಅನುಪಮಾ ಗೌಡ

ಬೆಳಗ್ಗೆಯಿಂದಲೂ ಶೂಟಿಂಗ್‌ ಸೆಟ್‌ನಲ್ಲೂ ಎಲ್ಲರೂ ಕಂಗ್ರ್ಯಾಜುಲೇಷನ್ಸ್‌ ಹೇಳೋಕೆ ಶುರು ಮಾಡಿದ್ದಾರೆ. ಒಂದೆರಡು ದಿನದಿಂದ ಒಂದಷ್ಟು ಜನ ಮೆಸೇಜ್‌ನಲ್ಲೂ ಕಂಗ್ರ್ಯಾಜುಲೇಷನ್ಸ್‌ ಹೇಳ್ತಾ ಇದ್ದಾರೆ.
Anupamagowda
ಅನುಪಮಾಗೌಡ
Updated on

ಬೆಂಗಳೂರು: ನಿರೂಪಕಿ ಅನುಪಮಾ ಗೌಡ ಅವರು ಬಹುಕಾಲದ ಗೆಳೆಯ ರಾಘವ್‌ ಅನು ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ. ಈ ಕುರಿತು ಹರಿದಾಡುತ್ತಿದ್ದ ಎಲ್ಲಾ ಗಾಸಿಪ್‌ಗಳಿಗೆ ಸ್ವತಃ ಅನುಪಮಾ ಅವರೇ ಈಗ ತೆರೆ ಎಳೆದಿದ್ದಾರೆ.

ಹಾಯ್..‌ ಒಂದು ಸೀಕ್ರೆಟ್‌ನ ಶೇರ್‌ ಮಾಡಬೇಕಿತ್ತು. ಹಾಗಾಗಿ, ಈ ವಿಡಿಯೋವನ್ನ ಮಾಡ್ತಾ ಇದ್ದೀನಿ. ಸಾಮಾನ್ಯವಾಗಿ ನಾನು ರಿಯಾಕ್ಟ್‌ ಮಾಡಲ್ಲ. ಬೆಳಗ್ಗೆಯಿಂದಲೂ ಶೂಟಿಂಗ್‌ ಸೆಟ್‌ನಲ್ಲೂ ಎಲ್ಲರೂ ಕಂಗ್ರ್ಯಾಜುಲೇಷನ್ಸ್‌ ಹೇಳೋಕೆ ಶುರು ಮಾಡಿದ್ದಾರೆ. ಒಂದೆರಡು ದಿನದಿಂದ ಒಂದಷ್ಟು ಜನ ಮೆಸೇಜ್‌ನಲ್ಲೂ ಕಂಗ್ರ್ಯಾಜುಲೇಷನ್ಸ್‌ ಹೇಳ್ತಾ ಇದ್ದಾರೆ.

ಏನು ಅಂತಂದರೆ, ಎರಡು ದಿನದ ಹಿಂದೆ ನನ್ನ ಎಂಗೇಜ್‌ಮೆಂಟ್‌ ಆಯ್ತು. ನನ್ನ ಬೆಸ್ಟ್‌ಫ್ರೆಂಡ್‌ ರಾಘವ್‌ ಅವರ ಜೊತೆಗೆ. ಅನ್‌ಫಾರ್ಚುನೇಟ್ಲಿ ನಮ್ಮ ಎಂಗೇಜ್‌ಮೆಂಟ್‌ಗೆ ನಾವು ಅಟೆಂಡ್‌ ಮಾಡೋಕಾಗಲಿಲ್ಲ. ಯಾಕೆಂದರೆ, ನಮಗೆ ಯಾರೂ ಕೂಡ ಇನ್ಪಾರ್ಮ್‌ ಮಾಡಲಿಲ್ಲ ನಮ್ಮ ಎಂಗೇಜ್‌ಮೆಂಟ್‌ ಅಂತ ಎಂದು ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ಒಂದಷ್ಟು ಸೋಶಿಯಲ್‌ ಮೀಡಿಯಾ ಪೇಜ್‌ಗಳಲ್ಲಿ ನನ್ನ ಬರ್ತ್‌ಡೇಗೆ ಅಂತ ಪೋಸ್ಟ್‌ ಮಾಡಿದ್ದ ಫೋಟೋಗಳನ್ನ ತಗೊಂಡು ಇವರಿಬ್ಬರದ್ದು ಎಂಗೇಜ್‌ಮೆಂಟ್‌ ಆಯ್ತು. ಅನುಪಮಾ ಬಾಯ್‌ಫ್ರೆಂಡ್‌ ಹಾ ಇವರು? ಅನುಶ್ರೀ ಅವರ ಮದುವೆಯಾಯ್ತು, ಈಗ ಅನುಪಮಾ ಎಂಗೇಜ್‌ಮೆಂಟ್‌ ಆಗಿದೆ ಅಂತ ಪೋಸ್ಟ್‌ ಮಾಡುತ್ತಿದ್ದಾರೆ.

ಆದರೆ, ನನಗೆ ಬೇಜಾರಾಗಿದ್ದು ಏನಂತಂದರೆ, ಇಷ್ಟೆಲ್ಲಾ ಇರ್ಬೇಕಾದರೆ ಅಂದರೆ, AI ಎಲ್ಲಾ ಇರ್ಬೇಕಾದರೆ, ನಾವು ಇಷ್ಟೆಲ್ಲಾ ಮುಂದುವರೆದಿರಬೇಕಾದರೆ, ಅಟ್‌ಲೀಸ್ಟ್‌ ಒಂದೊಳ್ಳೆ ಫೋಟೋವನ್ನ ಕ್ರಿಯೇಟ್‌ ಮಾಡಿ, ರಿಂಗ್‌ ಹಾಕೋ ತರಹ ಫೋಟೋವನ್ನ ಎಡಿಟ್‌ ಮಾಡಿ, ನಮಗೆ ಕಂಗ್ರ್ಯಾಜುಲೇಷನ್ಸ್‌ ಅಂತ ವಿಷಸ್‌ ಕಳಿಸಿದ್ರೆ ನಮಗೆ ಇನ್ನೂ ಖುಷಿಯಾಗುತ್ತಿತ್ತು. ಆದರೆ, ಇನ್ನೂ ಟೈಮ್‌ ಇದೆ ಎಂದು ಕೌಂಟರ್‌ ನೀಡಿದ್ದಾರೆ ಅನುಪಮಾ.

ಎರಡು ದಿನದ ಹಿಂದೆ ಎಂಗೇಜ್‌ಮೆಂಟ್‌ ಆಗಿದೆ. ಇಮ್ಮಿಡಿಯೇಟ್‌ ಮದುವೆ ಮಾಡಿಸೋದಕ್ಕೆ ಹೋಗಬೇಡಿ. ಯಾಕೆಂದರೆ, ಸ್ವಲ್ಪ ಡೌಟ್‌ ಆಗುತ್ತೆ. ಒಂದಷ್ಟು ಲೈಕ್‌, ಕಾಮೆಂಟ್‌ ಎಲ್ಲಾ ನಿಮಗೆ ಸಿಕ್ಕಿರುತ್ತೆ. ಇಮ್ಮಿಡಿಯೇಟ್‌ ಆಗಿ ಪೋಸ್ಟ್‌ ಮಾಡಿದ್ರೆ, ಅದು ಚೆನ್ನಾಗಿ ಅನಿಸಲ್ಲ. ಒಂದೆರಡು ತಿಂಗಳು ಬಿಟ್ಟು ಪೋಸ್ಟ್‌ ಮಾಡಿ. ಮತ್ತೆ ನಿಮಗೆ ಒಳ್ಳೆಯ ಟ್ರಾಕ್ಷನ್‌ ಸಿಗುತ್ತೆ. ಜನ ಎಲ್ಲಾ ನೋಡ್ತಾರೆ.

ಶೇರ್ ಜಾಸ್ತಿ ಆಗುತ್ತೆ. ಆದರೆ, ನನಗೆ ಬೇಜಾರಾಗಿದ್ದು ಅದೇ. ಮದುವೆ ಇನ್ನೆರಡು ತಿಂಗಳು ಬಿಟ್ಟು ಮಾಡಿ. ನಮಗೆ ಟ್ರೆಡಿಷನಲ್‌ ಔಟ್‌ಫಿಟ್‌ ಎಲ್ಲಾ ಹಾಕಿ, ಮದುವೆ ಪೋಸ್ಟ್‌ನ ಕ್ರಿಯೇಟ್‌ ಮಾಡಿ, ಆಮೇಲೆ ನೀವು ಎರಡು ತಿಂಗಳಾದ್ಮೇಲೆ ಎಲ್ಲಾ ಕಡೆ ಪೋಸ್ಟ್‌ ಮಾಡಬಹುದು.

ಸಾಧ್ಯವಾದರೆ, ನನ್ನ ಮತ್ತು ರಾಘವ್‌ನ ಮದುವೆಗೆ ಕರೀರಿ. ಖಂಡಿತವಾಗಿಯೂ ಬಂದು ನಾವು ಬರ್ತೀವಿ. ಖುಷಿಯಾಗುತ್ತೆ ನಮಗೆ. ಇಷ್ಟೆಲ್ಲಾ ಇಂಟ್ರೆಸ್ಟ್‌ ತೋರಿಸ್ತೀರ ಅಲ್ವಾ ಲೈಕ್ಸ್‌, ಕಾಮೆಂಟ್ಸ್‌ ಮತ್ತು ಪೇಜ್‌ ರೀಚ್‌ ಆಗಲಿ ಅನ್ನೋ ಕಾರಣಕ್ಕೆ ಇಷ್ಟೆಲ್ಲಾ ಬೇರೆಯವರ ಪರ್ಸನಲ್‌ ಲೈಫ್‌ನಲ್ಲಿ ಇಂಟ್ರೆಸ್ಟ್‌ ತೋರಿಸ್ತೀರ. ನನ್ನ ಮದುವೆಯಲ್ಲಿ ಎಷ್ಟು ಇಂಟ್ರೆಸ್ಟ್‌ ತೋರಿಸ್ತೀರ ಅಂತ ನೋಡೋದಕ್ಕೆ ಆಸೆ. ದಯಮಾಡಿ ನಮ್ಮನ್ನ ಇನ್ವೈಟ್‌ ಮಾಡಿ ಎಂದು ಅನುಪಮಾ ಗೌಡ ವ್ಯಂಗ್ಯವಾಡಿದ್ದಾರೆ.

Anupamagowda
ಭಾವನಾ ರಾಮಣ್ಣ ಮಗಳ ನಾಮಕರಣ: ಮಗಳಿಗೆ ಅಜ್ಜಿಯ ಹೆಸರಿಟ್ಟ ನಟಿ!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com