ಕೊಳಕು ಕೆಲಸ ಮಾಡ್ತಾನೆ, ಮಕ್ಕಳನ್ನೂ ಬಿಡಲ್ಲ; ನನ್ನ ಜೊತೆಗೂ ಅನುಚಿತ ವರ್ತನೆ: ನಿರ್ದೇಶಕ ಸನೋಜ್ ಮಿಶ್ರಾ ವಿರುದ್ಧ ಮೋನಾಲಿಸಾ ಆರೋಪ; Video

ಇದೇ ವೇಳೆ ಮೊನಾಲಿಸಾ ಅವರ ಚೊಚ್ಚಲ ಚಿತ್ರ ‘ದಿ ಡೈರಿ ಆಫ್ ಮಣಿಪುರ’ದ ನಿರ್ದೇಶಕ ಸನೋಜ್ ಮಿಶ್ರಾ ಗಂಭೀರ ಆರೋಪ ಮಾಡಿದ್ದರು. ಇದು ಲವ್ ಜಿಹಾದ್ ಎಂದಿದ್ದರು. ಈ ಬಗ್ಗೆ ಮೊನಾಲಿಸಾ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ ನಿರ್ದೇಶಕನ ಮೇಲೆ ಗಂಭೀರ ಆರೋಪ ಮಾಡಿದ್ದಾರೆ
ಮೊನಾಲಿಸಾ ಮತ್ತು ಸನೋಜ್ ಮಿಶ್ರಾ
ಮೊನಾಲಿಸಾ ಮತ್ತು ಸನೋಜ್ ಮಿಶ್ರಾ
Updated on

ಪ್ರಯಾಗ್ ರಾಜ್ ಕುಂಭಮೇಳದಿಂದ ರಾತ್ರೋರಾತ್ರಿ ಖ್ಯಾತಿ ಪಡೆದ ಮೊನಾಲಿಸಾ ಭೋಸ್ಲೆ ಇತ್ತೀಚೆಗೆ ತಮ್ಮ ಮುಸ್ಲಿಂ ಗೆಳೆಯ ಫರ್ಮಾನ್ ಖಾನ್ ಜೊತೆ ಮದುವೆ ಆದರು. ಇದರಿಂದಾಗಿ ಮೊನಾಲಿಸಾ ವಿವಾದದ ಸುಳಿಯಲ್ಲಿ ಸಿಲುಕಿದ್ದರು.

ಇದೇ ವೇಳೆ ಮೊನಾಲಿಸಾ ಅವರ ಚೊಚ್ಚಲ ಚಿತ್ರ ‘ದಿ ಡೈರಿ ಆಫ್ ಮಣಿಪುರ’ದ ನಿರ್ದೇಶಕ ಸನೋಜ್ ಮಿಶ್ರಾ ಗಂಭೀರ ಆರೋಪ ಮಾಡಿದ್ದರು. ಇದು ಲವ್ ಜಿಹಾದ್ ಎಂದಿದ್ದರು. ಈ ಬಗ್ಗೆ ಮೊನಾಲಿಸಾ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ ನಿರ್ದೇಶಕನ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಸನೋಜ್ ಮಿಶ್ರಾ ಚಲನಚಿತ್ರಗಳ ಹೆಸರಿನಲ್ಲಿ ಅಪ್ರಾಪ್ತ ಹುಡುಗಿಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ನನಗೆ ಮತ್ತು ನನ್ನ ಪತಿಗೆ ಜೀವ ಬೆದರಿಕೆ ಇದೆ’ ಎಂದು ಆರೋಪಿಸಿರುವ ಮೊನಾಲಿಸಾ ಕೇಂದ್ರ, ಕೇರಳ ಮತ್ತು ಮಧ್ಯಪ್ರದೇಶ ರಾಜ್ಯ ಸರ್ಕಾರಗಳಿಂದ ಸಹಾಯವನ್ನು ಕೋರಿದ್ದಾರೆ. ನಿರ್ದೇಶಕರು ತಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಮತ್ತು ಅವರ ಚಲನಚಿತ್ರಗಳಲ್ಲಿ ಅವಕಾಶ ನೀಡುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಅವರು ತುಂಬಾ ಕೆಟ್ಟ ಮತ್ತು ಅಸಹ್ಯಕರ ವ್ಯಕ್ತಿ. ಅವರು ಚಲನಚಿತ್ರಗಳ ಹೆಸರಿನಲ್ಲಿ ಅಪ್ರಾಪ್ತ ಹುಡುಗಿಯರೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ. ಅವರ ಹೆಸರನ್ನು ಹೇಳಲು ನನಗೆ ನಾಚಿಕೆಯಾಗುತ್ತದೆ’ ಎಂದು ಹೇಳಿದರು.

ಶೂಟಿಂಗ್ ಸಮಯದಲ್ಲಿ ಸನೋಜ್ ಮಿಶ್ರಾ ಹಲವಾರು ಬಾರಿ ಅವರ ದೇಹದ ಭಾಗಗಳನ್ನು ಸ್ಪರ್ಶಿಸುವ ಮೂಲಕ ಲೈಂಗಿಕ ಕಿರುಕುಳ ನೀಡಿದರು. ಮನೆಯಲ್ಲಿ ಆ ಕಹಿ ಅನುಭವದ ಬಗ್ಗೆ ನಾನು ಅವರಿಗೆ ಹೇಳಿದಾಗ ಬೆಂಬಲ ಸಿಗಲಿಲ್ಲ. ಅದು ನನ್ನ ಮೊದಲ ಚಿತ್ರ ಮತ್ತು ನಾನು ಹೊಂದಿಕೊಳ್ಳಬೇಕಾಯಿತು. ನಾನು ಯಾರಿಗೂ ಹೇಳಲು ಸಾಧ್ಯವಾಗಲಿಲ್ಲ ಮತ್ತು ಆದ್ದರಿಂದ ನಾನು ಮೌನವಾಗಿದ್ದೆ’ ಎಂದು ಅವರು ಹೇಳಿದರು.

ಸನೋಜ್​ ಮಿಶ್ರಾ ವಿರುದ್ಧ ಈಗಾಗಲೇ ಅತ್ಯಾಚಾರದಂತಹ ಗಂಭೀರ ಆರೋಪಗಳಿವೆ. ಕೆಲ ದಿನಗಳ ಹಿಂದೆ ಅವರನ್ನು ಪೊಲೀಸರು ಬಂಧಿಸಿದ್ದರು. ಇದರ ನಡುವೆಯೇ ಮೊನಾಲಿಸಾ ಸಂದರ್ಶನವೊಂದರಲ್ಲಿ ಆಘಾತಕಾರಿ ಹೇಳಿಕೆ ನೀಡಿದ್ದರು. ಸನೋಜ್ ಮಿಶ್ರಾ ಅವರೊಂದಿಗೆ ಹೋಟೆಲ್‌ನಲ್ಲಿ ತಂಗಿದ್ದಾಗಿ ಒಪ್ಪಿಕೊಂಡಿದ್ದರು. ಆಗ ಮೊನಾಲಿಸಾ ಸನೋಜ್ ಸರ್ ತುಂಬಾ ಒಳ್ಳೆಯ ವ್ಯಕ್ತಿ. ಅವರಿಗೆ ಕೆಟ್ಟದಾಗುತ್ತಿದೆ.. ನನಗೆ ಅವರು ಯಾವುದೇ ಕೆಟ್ಟದ್ದನ್ನು ಮಾಡಿಲ್ಲ ಎಂದು ಹೊಗಳಿದ್ದರು.

ಮೊನಾಲಿಸಾ ಮತ್ತು ಸನೋಜ್ ಮಿಶ್ರಾ
ಮಗಳನ್ನು ವಾಪಸ್ ಮನೆಗೆ ಕರೆತರಲು ಸಹಾಯ ಮಾಡಿ: ಮಧ್ಯ ಪ್ರದೇಶ CMಗೆ ಮೊನಾಲಿಸಾ ತಂದೆ ಮನವಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com