ನಿಜ ಜೀವನದಲ್ಲಿ ರೈತ ಹುಡುಗ ಸಿಕ್ಕರೆ ಮದುವೆ ಆಗ್ತೀರಾ? ಪ್ರೇಮದ ಊರಲಿ ನಟಿ ರಮಿಕಾ ಶಿವು ಮಾತು ಕೇಳಿ ಫ್ಯಾನ್ಸ್‌ ಫಿದಾ!

ಪ್ರೇಮದ ಊರಲ್ಲಿ ಸಿನಿಮಾದ 50 ದಿನಗಳ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ನಿರೂಪಕಿ ಆ್ಯಂಕರ್ ಅನುಶ್ರೀ ಕೇಳಿದ, "ನಿಜ ಜೀವನದಲ್ಲಿ ರೈತ ಹುಡುಗ ಸಿಕ್ಕರೆ ಮದುವೆಯಾಗಲು ಓಕೆನಾ" ಎಂಬ ಪ್ರಶ್ನೆಗೆ ನಟಿ ರಮಿಕಾ ಶಿವು ನೀಡಿದ ಉತ್ತರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಹಾಗಾದ್ರೆ, ನಟಿ ಹೇಳಿದ್ದಾರು ಏನು?
Actress Ramika Shivu
ನಟಿ ರಮಿಕಾ ಶಿವುOnline Desk
Updated on: 

ಬೆಂಗಳೂರು: ಸಿನಿಮಾಗಳಲ್ಲಿ ಕಮರ್ಷಿಯಲ್ ಕಥೆಗಳೇ ತುಂಬಿರುವ ಈ ಕಾಲದಲ್ಲಿ, ರೈತರ ನೈಜ ಬದುಕಿನ ಕಥೆಯೊಂದಿಗೆ ಬಂದ 'ಪ್ರೇಮದ ಊರಲಿ' ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ 50 ದಿನಗಳನ್ನು ಪೂರೈಸಿ ಸಂಚಲನ ಸೃಷ್ಟಿಸಿದೆ. ಈ ಚಿತ್ರದ ಯಶಸ್ಸಿನ ಸಂಭ್ರಮದ ನಡುವೆ, ನಾಯಕಿ ರಮಿಕಾ ಶಿವು ಅವರಿಗೆ ಕಾರ್ಯಕ್ರಮದಲ್ಲಿ "ನಿಜ ಜೀವನದ ಹುಡುಗ ರೈತ ಆಗಿದ್ರೆ ಓಕೆನಾ?" ಎಂಬ ಕುತೂಹಲಕಾರಿ ಪ್ರಶ್ನೆ ಎದುರಾಗಿದೆ. ಇದಕ್ಕೆ ನಟಿ ನೀಡಿದ ದಿಟ್ಟ ಹಾಗೂ ಸರಳವಾದ ಉತ್ತರವು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರತಿಯೊಬ್ಬರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಆ ಕುರಿತ ವರದಿ ಇಲ್ಲಿದೆ:

ರೈತ ಹುಡುಗ ಓಕೆನಾ?

ಪ್ರೇಮದ ಊರಲ್ಲಿ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ವಿಶೇಷ ಸಂಭ್ರಮಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಆ್ಯಂಕರ್ ಅನುಶ್ರೀ ನಿರೂಪಣೆ ಮಾಡುತ್ತಾ, ಕಲಾವಿದರೊಂದಿಗೆ ತಮಾಷೆಯ ಮಾತುಕತೆ ನಡೆಸುವ ವೇಳೆ ನಾಯಕಿ ರಮಿಕಾ ಶಿವು ಅವರಿಗೆ, "ನಿಮ್ಮ ಹುಡುಗ ರೈತನಾಗಿದ್ದರೆ ಮದುವೆಯಾಗಲು ಓಕೆನಾ?" ಎಂದು ಪ್ರಶ್ನಿಸಿದರು. ಇದಕ್ಕೆ ಕೊಂಚವೂ ಯೋಚಿಸದೆ ರಮಿಕಾ "ಓಕೆ" ಎಂದು ಉತ್ತರಿಸಿದರು. ಇದನ್ನು ಕೇಳಿದ ಅನುಶ್ರೀ "ಮಾತಂದ್ರೆ ಇದಪ್ಪಾ" ಎಂದು ಮೆಚ್ಚುಗೆ ಸೂಚಿಸಿದರು.

Actress Ramika Shivu
ಕೇವಲ ₹2 ಕೋಟಿ ಬಜೆಟ್, 26 ದಿನಕ್ಕೆ ₹100 ಕೋಟಿ ಕ್ಲಬ್: ಕೆಜಿಎಫ್, ಕಾಂತಾರ ಸಾಲಿಗೆ ಸೇರಿದ 'ಪ್ರೇಮದ ಊರಲಿ' ಹೊಸ ಇತಿಹಾಸ!

ಏತನ್ಮಧ್ಯೆ, ರಮಿಕಾ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ನೀನಾದೆ ನಾ ಧಾರಾವಾಹಿಯ ನಟ ದಿಲೀಪ್ ಶೆಟ್ಟಿ ಅವರೊಂದಿಗೆ ರಮಿಕಾ ರಿಲೇಶನ್‌ಶಿಪ್‌ನಲ್ಲಿದ್ದಾರೆ ಎಂಬ ಸುದ್ದಿ ಕಿರುತೆರೆ ವಲಯದಲ್ಲಿ ಹರಿದಾಡುತ್ತಿದೆ. ಇವರಿಬ್ಬರೂ ಸೇರಿ 2026ರ ಜನವರಿಯಲ್ಲಿ ದೊಡ್ಮನೆ ಊಟ ಎಂಬ ಹೋಟೆಲ್ ಉದ್ಯಮವನ್ನೂ ಆರಂಭಿಸಿದ್ದಾರೆ. ಇದೇ ಕಾರಣಕ್ಕೆ ರಮಿಕಾ "ರೈತನನ್ನು ಮದುವೆಯಾಗಲು ಓಕೆ" ಎಂದಾಗ ಅಭಿಮಾನಿಗಳು ದಿಲೀಪ್ ಶೆಟ್ಟಿ ಹೆಸರನ್ನು ಉಲ್ಲೇಖಿಸಿ ತಮಾಷೆ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X