ಬಾಕ್ಸ್ ಆಫೀಸ್‌ನಲ್ಲಿ ಮುಂದುವರಿದ ಅಬ್ಬರ: ರಜನಿಕಾಂತ್- ಅಕ್ಷಯ್ ಕುಮಾರ್ ನಟಿಸಿದ್ದ '2.0' ಚಿತ್ರ ಹಿಂದಿಕ್ಕಿ ಇತಿಹಾಸ ನಿರ್ಮಿಸಿದ 'ಜೈಲರ್ 2'!

ಜೈಲರ್ 2 ಚಿತ್ರವು ಅಕ್ಟೋಬರ್ 15 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಬಿಡುಗಡೆಯಾದ ಕೇವಲ 12 ದಿನಗಳಲ್ಲಿಯೇ ಈ ಹೊಸ ಮೈಲಿಗಲ್ಲನ್ನು ಚಿತ್ರವು ಸಾಧಿಸಿದೆ.
Jailer 2 Still
ಜೈಲರ್ 2 ಸ್ಟಿಲ್
Updated on: 

ನವದೆಹಲಿ: ರಜನಿಕಾಂತ್ ನಟನೆಯ 'ಜೈಲರ್ 2' ಚಿತ್ರವು ವಿಶ್ವದಾದ್ಯಂತ ಅತಿ ಹೆಚ್ಚು ಗಳಿಕೆ ಕಂಡ ತಮಿಳು ಚಲನಚಿತ್ರವಾಗಿ ಹೊರಹೊಮ್ಮುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಇತಿಹಾಸ ಸೃಷ್ಟಿಸಿದೆ.

ಈ ಚಿತ್ರವು, ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ನಟಿಸಿದ್ದ '2.0' ಚಿತ್ರದ ಒಟ್ಟು ಜಾಗತಿಕ ಗಳಿಕೆಯನ್ನು ಹಿಂದಿಕ್ಕಿದೆ. '2.0' ಚಿತ್ರವು ಸುಮಾರು ₹691 ಕೋಟಿ ಗಳಿಸಿತ್ತು.

ಫಿಲ್ಮ್ ಟ್ರೇಡ್ ಪೋರ್ಟರ್ 'Sacnilk' ಪ್ರಕಾರ, ಅಕ್ಟೋಬರ್ 26ರಂದು 'ಜೈಲರ್ 2' ಚಿತ್ರವು ಜಾಗತಿಕವಾಗಿ ಒಟ್ಟು ₹733.35 ಕೋಟಿ ಗಳಿಕೆ ಕಂಡಿದೆ.

ಜೈಲರ್ 2 ಚಿತ್ರವು ಅಕ್ಟೋಬರ್ 15 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಬಿಡುಗಡೆಯಾದ ಕೇವಲ 12 ದಿನಗಳಲ್ಲಿಯೇ ಈ ಹೊಸ ಮೈಲಿಗಲ್ಲನ್ನು ಚಿತ್ರವು ಸಾಧಿಸಿದೆ. ಈ ಸಾಧನೆಯೊಂದಿಗೆ, 'ಜೈಲರ್ 2' ಚಿತ್ರವು 2026ನೇ ಸಾಲಿನಲ್ಲಿ ಅತಿ ಹೆಚ್ಚು ಗಳಿಕೆ ಕಂಡ ತಮಿಳು ಚಿತ್ರವಾಗಿಯೂ ಹೊರಹೊಮ್ಮಿದೆ.

ದೇಶೀಯ ಗಲ್ಲಾ ಪೆಟ್ಟಿಗೆಯಲ್ಲಿ, 'ಜೈಲರ್ 2' ಸೋಮವಾರದಂದು ₹9.45 ಕೋಟಿ ಗಳಿಕೆ ಕಂಡಿದೆ. ಇದರೊಂದಿಗೆ ಭಾರತದಲ್ಲಿನ ಒಟ್ಟು ಗಳಿಕೆಯು ₹477.85 ಕೋಟಿಗೆ ತಲುಪಿದ್ದರೆ, ನಿವ್ವಳ ಗಳಿಕೆಯು (nett collection) ₹408.15 ಕೋಟಿ ತಲುಪಿದೆ.

ವರದಿ ಪ್ರಕಾರ, 12ನೇ ದಿನದಂದು ತಮಿಳು ಆವೃತ್ತಿಯು 4,518 ಪ್ರದರ್ಶನಗಳಿಂದ ₹5.65 ಕೋಟಿ ಗಳಿಸಿದೆ. ತೆಲುಗು ಆವೃತ್ತಿಯು 1,771 ಪ್ರದರ್ಶನಗಳಿಂದ ₹2.00 ಕೋಟಿ ಹಾಗೂ ಹಿಂದಿ ಆವೃತ್ತಿಯು 3,949 ಪ್ರದರ್ಶನಗಳಿಂದ ₹1.40 ಕೋಟಿ ಸಂಗ್ರಹಿಸಿವೆ. ಕನ್ನಡ ಆವೃತ್ತಿಯು 212 ಪ್ರದರ್ಶನಗಳಿಂದ 40 ಲಕ್ಷ ಗಳಿಸಿದೆ.

Jailer 2 Still
ರಜನಿಕಾಂತ್ ನಟನೆಯ 'ಜೈಲರ್ 2' ಚಿತ್ರ ವೀಕ್ಷಿಸಲು ಇಡೀ ಚಿತ್ರಮಂದಿರವನ್ನೇ ಬುಕ್ ಮಾಡಿದ ಸಂಜು ಸ್ಯಾಮ್ಸನ್!

ಈ ಚಿತ್ರವು ವಿವಿಧ ಭಾಷಾ ಆವೃತ್ತಿಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ, ಬಾಕ್ಸ್ ಆಫೀಸ್‌ನಲ್ಲಿ ತನ್ನ ವೇಗವನ್ನು ಕಾಯ್ದುಕೊಳ್ಳಲು ಮತ್ತು ಜಾಗತಿಕ ದಾಖಲೆಯನ್ನು ನಿರ್ಮಿಸಲು ಸಾಧ್ಯವಾಗಿಸಿಕೊಂಡಿದೆ.

ಜಾಗತಿಕ ಮಟ್ಟದಲ್ಲಿ ತಮಿಳು ಚಲನಚಿತ್ರಗಳ ಪೈಕಿ '2.0' ಚಿತ್ರವನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದಿರುವುದರ ಜೊತೆಗೆ, 'ಜೈಲರ್ 2' ತನ್ನ ಬಿಡುಗಡೆಯ ಆರಂಭಿಕ ದಿನಗಳಲ್ಲಿಯೇ ಹಲವು ಮೈಲಿಗಲ್ಲುಗಳನ್ನು ಸ್ಥಾಪಿಸಿತ್ತು. ಜಾಗತಿಕ ಗಳಿಕೆಯಲ್ಲಿ ₹300 ಕೋಟಿ ಮತ್ತು ₹400 ಕೋಟಿ ಗಡಿಯನ್ನು ಅತಿ ವೇಗವಾಗಿ ದಾಟಿದ ತಮಿಳು ಚಿತ್ರವಾಗಿ ಹೊರಹೊಮ್ಮಿತು; ಕೇವಲ ಮೂರು ದಿನಗಳಲ್ಲಿ ₹300 ಕೋಟಿ ಗಡಿಯನ್ನು ಮತ್ತು ನಾಲ್ಕನೇ ದಿನದಂದು ₹400 ಕೋಟಿ ಗಡಿಯನ್ನು ಈ ಚಿತ್ರ ತಲುಪಿತು.

ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಗೊಳ್ಳುತ್ತಿರುವ ರೀತಿಯ ಬಗ್ಗೆ ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಕೂಡ ಪ್ರತಿಕ್ರಿಯಿಸಿದ್ದಾರೆ. 'ಎಕ್ಸ್'ನಲ್ಲಿ, 'ಚಿತ್ರಮಂದಿರಗಳಲ್ಲಿ ಭರ್ಜರಿ ಸಂಭ್ರಮ! 'ತಲೈವರ್' (ರಜನಿಕಾಂತ್) ಅವರ ಮ್ಯಾಜಿಕ್ಕೇ ಬೇರೆ. ಜೈಲರ್ 2 ಚಿತ್ರಕ್ಕೆ ನೀವು ನೀಡಿದ ಅದ್ಭುತ ಪ್ರೀತಿ ಮತ್ತು ಸ್ವಾಗತಕ್ಕೆ ಧನ್ಯವಾದಗಳು, ಪ್ರಿಯ ಪ್ರೇಕ್ಷಕರೇ! ಪ್ರೇಕ್ಷಕರು ಈ ರೀತಿ ಸಂಭ್ರಮಿಸುವುದನ್ನು ನೋಡುವುದಕ್ಕಿಂತ ಮಿಗಿಲಾದ ಸಂತೋಷ ಬೇರೊಂದಿಲ್ಲ! ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು' ಎಂದು ಬರೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com