ಟಾಲಿವುಡ್‌ನಲ್ಲಿ ಆಶಿಕಾ ರಂಗನಾಥ್ ಹೊಸ ಹವಾ: ತೆಲುಗಿನಲ್ಲಿ ಚುಟು ಚುಟು ಬೆಡಗಿಯ ಮತ್ತೊಂದು ಬಿಗ್ ಪ್ರಾಜೆಕ್ಟ್ ಅನೌನ್ಸ್

ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ ಕನ್ನಡ ಸೇರಿದಂತೆ ತಮಿಳು, ತೆಲುಗು ಚಿತ್ರರಂಗದಲ್ಲೂ ಭರ್ಜರಿಯಾಗಿ ಸದ್ದು ಮಾಡುತ್ತಿದ್ದಾರೆ. ಅದರಂತೆ, ಚಿರಂಜೀವಿ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿದ್ದಾರೆ ಎನ್ನಲಾಗುತ್ತಿರುವ ನಡುವೆಯೇ, ಟಾಲಿವುಡ್‌ನಲ್ಲಿ ಮತ್ತೊಂದು ಸಿನಿಮಾಗೆ ಸಹಿ ಮಾಡಿದ್ದಾರೆ ಗತವೈಭವ ಚಲುವೆ.
Ashika Ranganath
ಆಶಿಕಾ ರಂಗನಾಥ್Online Desk
Updated on

ಬೆಂಗಳೂರು: ಕನ್ನಡದ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ ಕನ್ನಡ ಸೇರಿದಂತೆ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲೂ ಭರ್ಜರಿಯಾಗಿ ಸದ್ದು ಮಾಡುತ್ತಿದ್ದಾರೆ. ಅದರಂತೆ, ಕಾರ್ತಿ ನಾಯಕರಾಗಿ ನಟಿಸುತ್ತಿರುವ ಈ ತಮಿಳು ಸ್ಪೈ ಆಕ್ಷನ್ ಥ್ರಿಲ್ಲರ್ ಸಿನಿಮಾ ಸೆಪ್ಟೆಂಬರ್ 10 ರಂದು ಬಿಡುಗಡೆಯಾಗಲು ಸಜ್ಜಾಗಿದೆ. ಜೊತೆಗೆ, ಮೆಗಾ ಸ್ಟಾರ್ ಚಿರಂಜೀವಿ ನಟನೆಯ ಈ ಬಹುನಿರೀಕ್ಷಿತ ತೆಲುಗು ಫ್ಯಾಂಟಸಿ-ಆಕ್ಷನ್ ಸಿನಿಮಾದಲ್ಲಿಯೂ ಆಶಿಕಾ ಪ್ರಮುಖ ಪಾತ್ರದಲ್ಲಿದ್ದಾರೆ ಎನ್ನಲಾಗುತ್ತಿರುವ ನಡುವೆಯೇ, ಟಾಲಿವುಡ್‌ನಲ್ಲಿ ಮತ್ತೊಂದು ಸಿನಿಮಾಗೆ ಸಹಿ ಮಾಡಿದ್ದಾರೆ ಗತವೈಭವ ಚಲುವೆ. ಆ ಕುರಿತ ವರದಿ ಇಲ್ಲಿದೆ:

ಶ್ರೀವಿಷ್ಣುಗೆ ಜೋಡಿಯಾದ ರಾಂಬೋ ಬೆಡಗಿ

ಆಶಿಕಾ ರಂಗನಾಥ್ ಅವರು ಟಾಲಿವುಡ್‌ನಲ್ಲಿ ಖ್ಯಾತ ನಟ ಶ್ರೀವಿಷ್ಣು ಅವರ ಮುಂಬರುವ ಹೊಸ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇನ್ನು,  ಸದ್ಯಕ್ಕೆ ಈ ಚಿತ್ರವನ್ನು ತಾತ್ಕಾಲಿಕವಾಗಿ ಪ್ರೊಡಕ್ಷನ್ ನಂ. 39 ಎಂದು ಕರೆಯಲಾಗುತ್ತಿದ್ದು, ಚಿತ್ರಕ್ಕೆ 'ಶನಾರ್ತಿ' ಎಂಬ ಶೀರ್ಷಿಕೆ ಇಡುವ ಸಾಧ್ಯತೆ ಇದೆ ಎನ್ನಲಾಗಿದೆ. ಅನಗನಾಗ ಖ್ಯಾತಿಯ ಸನ್ನಿ ಸಂಜಯ್ ಈ ಸಿನಿಮಾವನ್ನು ಬರೆದು ನಿರ್ದೇಶಿಸುತ್ತಿದ್ದು, ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಹಾರಿಕಾ ಸೂರ್ಯದೇವರ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಮುಂದುವರೆದು, ಇದು ಇಂದಿನ ಯುವ ಪೀಳಿಗೆಯ ಜೀವನ ಶೈಲಿ, ಅವರ ಕನಸುಗಳು, ಪ್ರೀತಿ, ಸಂಬಂಧಗಳು ಮತ್ತು ಎದುರಿಸುವ ಭಾವನಾತ್ಮಕ ಹೋರಾಟಗಳನ್ನು ಆಧರಿಸಿದ ಒಂದು ರೋಮಾಂಚಕ ರೋಮ್ಯಾಂಟಿಕ್ ಡ್ರಾಮಾ ಸಿನಿಮಾ ಆಗಿದ್ದು, ಈ ಸಿನಿಮಾದಲ್ಲಿ ಆಶಿಕಾ ರಂಗನಾಥ್ ಅವರು ಶ್ರೀ ವಿಷ್ಣು ಅವರ ಪ್ರೇಯಸಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಫ್ರೆಶ್ ಜೋಡಿ ಬೆಳ್ಳಿ ಪರದೆಯ ಮೇಲೆ ಹೊಸ ಆಕರ್ಷಣೆ ಮೂಡಿಸಲಿದೆ.

Ashika Ranganath
'ಆಶಿಕಾ ರಂಗನಾಥ್ ಕೇವಲ ಗ್ಲಾಮರಸ್ ನಟಿಯಲ್ಲ, ಅದಕ್ಕಿಂತ ಹೆಚ್ಚು': 'ಸರ್ದಾರ್ 2' ಸಹನಟಿ ಬಗ್ಗೆ ತಮಿಳು ನಟ ಕಾರ್ತಿ

ಟಾಲಿವುಡ್‌ನಲ್ಲಿ ಆಶಿಕಾ ಭರ್ಜರಿ ಕ್ರೇಜ್

ಅಮಿಗೋಸ್ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಆಶಿಕಾ, ನಂತರ ಕಿಂಗ್ ನಾಗಾರ್ಜುನ್ ಅಭಿನಯದ 'ನಾ ಸಾಮಿ ರಂಗ' ಚಿತ್ರದ 'ವರಾಲು' ಪಾತ್ರದ ಮೂಲಕ ಅಲ್ಲಿನ ಪ್ರೇಕ್ಷಕರ ಮನ ಗೆದ್ದಿದ್ದರು. ಆ ಬಳಿಕ ರವಿತೇಜ ಅಭಿನಯದ 'ಭರತ ಮಹಾಶಯುಲಕು ವಿಜ್ಞಪ್ತಿ' ಸಿನಿಮಾದಲ್ಲೂ ನಾಯಕಿಯಾಗಿ ಮಿಂಚಿದ್ದರು. ಸದ್ಯ ಮೆಗಾಸ್ಟಾರ್ ಚಿರಂಜೀವಿ ಅವರ ಬಹುನಿರೀಕ್ಷಿತ ಸೋಸಿಯೋ-ಫ್ಯಾಂಟಸಿ ಚಿತ್ರ 'ವಿಶ್ವಂಭರ' ಮತ್ತು ಕಾರ್ತಿ ನಟನೆಯ 'ಸರ್ದಾರ್ 2' ಚಿತ್ರಗಳಲ್ಲೂ ಆಶಿಕಾ ರಂಗನಾಥ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದು, ಟಾಲಿವುಡ್‌ನಲ್ಲಿ ಯುವ ಕ್ರಶ್ ಆಗಿ ಹೊರಹೊಮ್ಮುತ್ತಿದ್ದಾರೆ.

Ashika Ranganath
ನಟಿಯನ್ನು ಯಾಕೆ ದೂಷಿಸುತ್ತೀರಾ? Peddi ಚಿತ್ರದಲ್ಲಿನ ಜಾಹ್ನವಿ ಉಡುಪು ವಿವಾದಕ್ಕೆ ನಟಿ ಆಶಿಕಾ ರಂಗನಾಥ್ ಗರಂ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com