20 ವರ್ಷಗಳ ದಾಂಪತ್ಯ ಜೀವನದ ಬಳಿಕ ಮರು ಮದುವೆಯಾದ ಸ್ಟಾರ್ ಜೋಡಿ! ಮಕ್ಕಳ ಸಮ್ಮುಖದಲ್ಲಿ ಸೂರ್ಯ-ಜ್ಯೋತಿಕಾ ವಿವಾಹ

ದಕ್ಷಿಣ ಭಾರತದ ಖ್ಯಾತ ತಾರಾ ದಂಪತಿ ಸೂರ್ಯ ಮತ್ತು ಜ್ಯೋತಿಕಾ ತಮ್ಮ 20 ವರ್ಷಗಳ ಯಶಸ್ವಿ ದಾಂಪತ್ಯ ಜೀವನದ ಮೈಲಿಗಲ್ಲನ್ನು ಸಂಭ್ರಮಿಸಲು ವಿದೇಶದಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಮರು ಮದುವೆಯಾಗಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
Suriya And Jyotika Renew Wedding Vows Celebrating 20 Years Of Marriage
ಮಕ್ಕಳ ಸಮ್ಮುಖದಲ್ಲಿ ಸೂರ್ಯ-ಜ್ಯೋತಿಕಾ ಮದುವೆOnline Desk
Updated on

ಸ್ಕಾಟ್‌ಲ್ಯಾಂಡ್‌: ದಕ್ಷಿಣ ಭಾರತದ ಖ್ಯಾತ ತಾರಾದಂಪತಿ ಸೂರ್ಯ ಮತ್ತು ಜ್ಯೋತಿಕಾ ತಮ್ಮ 20 ವರ್ಷಗಳ ಯಶಸ್ವಿ ದಾಂಪತ್ಯ ಜೀವನದ ಮೈಲಿಗಲ್ಲನ್ನು ಸಂಭ್ರಮಿಸಲು ವಿದೇಶದಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಮರು ಮದುವೆಯಾಗಿದ್ದಾರೆ. 2006ರ ಸೆಪ್ಟೆಂಬರ್ 11 ರಂದು ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದ ಈ ಜೋಡಿ, ಈಗ ಎರಡು ದಶಕಗಳ ಪ್ರೀತಿಯ ನೆನಪಿಗಾಗಿ ಸ್ಕಾಟ್‌ಲ್ಯಾಂಡ್‌ನ ಸುಂದರ ಚರ್ಚ್ ಒಂದರಲ್ಲಿ ಪರಸ್ಪರ ಮತ್ತೆ ವಿವಾಹದ ಪ್ರತಿಜ್ಞೆಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಮರು ಮದುವೆಗೆ ಮಕ್ಕಳೇ ಸಾಕ್ಷಿ....

ಈ ಮರು ಮದುವೆಯ ಅತ್ಯಂತ ವಿಶೇಷ ಕ್ಷಣವೆಂದರೆ, ದಂಪತಿಯ ಮಕ್ಕಳಾದ ಮಗಳು ದಿಯಾ ಮತ್ತು ಮಗ ದೇವ್ ತಂದೆ-ತಾಯಿಯ ಮದುವೆಗೆ ಸಾಕ್ಷಿಯಾಗಿರುವುದು. ಹೌದು, ಮಗ ದೇವ್ ತಾಯಿ ಜ್ಯೋತಿಕಾರನ್ನು ಕೈಹಿಡಿದು ಮಂಟಪದತ್ತ ಕರೆತಂದರೆ, ಮಗಳು ದಿಯಾ ತಂದೆಯ ಪಕ್ಕ ನಿಂತು ಸಂಭ್ರಮಿಸಿದ್ದಾಳೆ. ಇನ್ನು, ಈ ಆಪ್ತ ಸಮಾರಂಭದಲ್ಲಿ ಸೂರ್ಯ ಅವರ ಸಹೋದರ, ನಟ ಕಾರ್ತಿ ಹಾಗೂ ತೀರ ಆಪ್ತ ಸ್ನೇಹಿತರು ಮತ್ತು ಕುಟುಂಬಸ್ಥರು ಮಾತ್ರ ಭಾಗವಹಿಸಿದ್ದರು.

ಮುಂದುವರೆದು, ಈ ಸುಂದರ ಕ್ಷಣಗಳ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಜ್ಯೋತಿಕಾ, ಇದನ್ನು ದಿ ಸೀಕ್ವೆಲ್ ಎಂದು ಕರೆದಿದ್ದು, "ಇದು ಪರಿಪೂರ್ಣ ಮದುವೆಯ ಆಚರಣೆಯಲ್ಲ. ಇದು ನಮ್ಮ ಅಪರಿಪೂರ್ಣತೆಗಳು, ಹೊಂದಾಣಿಕೆಗಳು, ತ್ಯಾಗಗಳು ಮತ್ತು ನಿಸ್ವಾರ್ಥ ಪ್ರೀತಿಯ ಆಚರಣೆ. ನನ್ನ ಸೂರ್ಯನಿಗಾಗಿ ನಾನು ಯಾವಾಗಲೂ ಆ ಅಪರಿಪೂರ್ಣ ಪತ್ನಿಯಾಗಿಯೇ ಇರಲು ಬಯಸುತ್ತೇನೆ. ಜಗಳವಾಡಿ, ಮತ್ತೆ ಒಂದಾಗುತ್ತಾ ನಿನ್ನೊಂದಿಗೆ ಇನ್ನಷ್ಟು ಹತ್ತಿರವಾಗುತ್ತೇನೆ. ನಮ್ಮ ಮುಂದಿನ 20 ವರ್ಷಗಳ ಪಯಣಕ್ಕೆ ಶುಭವಾಗಲಿ" ಎಂದು ಬರೆದುಕೊಂಡಿದ್ದಾರೆ.

ಏತನ್ಮಧ್ಯೆ, 1999 ರ ಪೂವೆಲ್ಲಾಂ ಕೇಟ್ಟುಪ್ಪಾರ್ ಚಿತ್ರದ ಮೂಲಕ ಮೊದಲ ಬಾರಿಗೆ ತೆರೆ ಹಂಚಿಕೊಂಡ ಈ ಜೋಡಿ ನಂತರ ಕಾದಲ್, ಕಾಖ ಕಾಖ, ಮಾಯಾವಿ ಮುಂತಾದ ಹಿಟ್ ಚಿತ್ರಗಳಲ್ಲಿ ನಟಿಸಿ 2006 ರಲ್ಲಿ ಹಸೆಮಣೆ ಏರಿತ್ತು. ಇದೀಗ ಇವರ ಈ ನವೀಕೃತ ಪ್ರತಿಜ್ಞೆ ಅಭಿಮಾನಿಗಳ ಮನಗೆದ್ದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com