ಅಂಕಣಗಳು

ಮೋದಿಯವರು ಮುಂದಿನ ಪ್ರಧಾನಿಯಾಗಬಾರದೇಕೆ?

Published On :

ಭಾರತೀಯ ಜನತಾಪಕ್ಷದ ಕೇಂದ್ರೀಯ ಸಂಸದೀಯ ಮಂಡಳಿಗೆ ನರೇಂದ್ರ ಮೋದಿ ಮರುನೇಮಕಗೊಂಡಿದ್ದಾರೆ. ತಮ್ಮ ಪರಮಾಪ್ತ ಅಮಿತ್ ಶಾ ಅವರಿಗೆ ಅದೇ ಸಂಸದೀಯ ಮಂಡಳಿಯ ಪ್ರಧಾನ ಕಾರ್ಯದರ್ಶಿ ಹುದ್ದೆ ಕೊಡಿಸುವಲ್ಲಿಯೂ ಅವರು ಯಶಸ್ವಿಯಾಗಿದ್ದಾರೆ. ಆ ಮೂಲಕ, ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಪಾತ್ರ ವಹಿಸಲು ವೇದಿಕೆಯೊಂದು ಸಜ್ಜುಗೊಂಡಂತಾಗಿದೆ. ನರೇಂದ್ರ ಮೋದಿಯವರೇ ಮುಂದಿನ ಪ್ರಧಾನ ಮಂತ್ರಿ ಎಂದು ಈ ಹಿಂದೆ ಕೇಳಿಬರುತ್ತಿದ್ದ ಮಾತುಗಳಿಗೆ ಈಗ ಮತ್ತಷ್ಟು ಬಲ ಬಂದಿದೆ. ಬಿಜೆಪಿಯ ಕೇಂದ್ರೀಯ ಸಂಸದೀಯ ಮಂಡಳಿಗೆ ಸೇರ್ಪಡೆಗೊಂಡಿರುವ ಏಕೈಕ  ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಹೊಂದಿರುವ ಮೋದಿ, ಪಕ್ಷದ ಕೇಂದ್ರ ಚುನಾವಣಾ ಸಮಿತಿಯ ಸದಸ್ಯರಾಗಿಯೂ ಆಯ್ಕೆಯಾಗಿದ್ದಾರೆ. ಮುಂಬರುವ ಚುನಾವಣೆಗಳಲ್ಲಿ ಟಿಕೆಟ್ ಹಂಚಿಕೆಯ ವಿಷಯವಾಗಿ ಅವರು ಮಹತ್ವದ ಪಾತ್ರ ವಹಿಸಲಿದ್ದಾರೆ.
ಬಿಜೆಪಿಯ ಕೇಂದ್ರ ಸಂಸದೀಯ ಮಂಡಳಿಗೆ ಮೋದಿ ಮರುನೇಮಕವಾಗಿದ್ದಾರೆ ಎಂಬ ಸುದ್ದಿಯನ್ನು ಸಕಾರಾತ್ಮಕವಾಗಿ ಸ್ವೀಕರಿಸಲು ಅವರ ಟೀಕಾಕಾರರು ಹಾಗೂ ಕಾಂಗ್ರೆಸ್ ನಾಯಕರಿಗೆ ಸಾಧ್ಯವಾಗಲೇ ಇಲ್ಲ. ದೂರಸಂಪರ್ಕ ಸಚಿವ ಕಪಿಲ್ ಸಿಬಲ್ ಅವರಂತೂ ಸುದ್ದಿ ಕೇಳಿದ ತಕ್ಷಣವೇ-'ಕೇಂದ್ರಿಯ ಸಂಸದೀಯ ಮಂಡಳಿಗೆ ಮೋದಿಯವರನ್ನು ನೇಮಕ ಮಾಡಿಕೊಂಡ ಕಾರಣಕ್ಕಾಗಿಯೇ ಮುಂದಿನ ದಿನಗಳಲ್ಲಿ ಬಿಜೆಪಿ ತಾನಾಗಿಯೇ ಪತನವಾಗುತ್ತದೆ ಎಂದುಬಿಟ್ಟರು. ಈಗಲೂ ನರೇಂದ್ರ ಮೋದಿ ಎಂಬ ಹೆಸರು ಕೇಳಿದಾಕ್ಷಣ ಹಿಂದೆ ಮುಂದೆ ಯೋಚಿಸದೆ ಅವರನ್ನು ಟೀಕಿಸಲು ಮುಂದಾಗುವ ಜನರಿದ್ದಾರೆ. ಆದರೆ ಬಹುಸಂಸ್ಕೃತಿಯ ನಾಡು, ಸರ್ವಧರ್ಮ ಸಮನ್ವಯದ ನೆಲೆವೀಡು ಎಂದೇ ಹೆಸರಾಗಿರುವ ಭಾರತದಂಥ ಪ್ರಜಾಸತ್ತಾತ್ಮಕ ರಾಷ್ಟ್ರದಲ್ಲಿ ನರೇಂದ್ರ ಮೋದಿಯಂಥ ದೂರದೃಷ್ಟಿ ಹೊಂದಿದ ನಾಯಕರು ಏಕೆ ಪ್ರಧಾನಿಯಾಗಬಾರದು ಎಂಬುದು ಲಕ್ಷ ಲಕ್ಷ ಮಂದಿಯ ಮನದಾಳದ ಪ್ರಶ್ನೆ. ಈ ಸಂಬಂಧವಾಗಿ ಇನ್ನಾದರೂ ಪ್ರಮುಖ ಪತ್ರಿಕೆಗಳಲ್ಲಿ/ ಚಾನೆಲ್‌ಗಳಲ್ಲಿ ಮುಕ್ತವಾಗಿ ಚರ್ಚೆಗಳಾಗಬೇಕಾದ ಅಗತ್ಯವಿದೆ. ಪೂರ್ವಾಗ್ರಹಗಳನ್ನು ಬದಿಗಿಟ್ಟು ಮಾತಾಡಬೇಕಾದ ರಾಜಕೀಯ ಚಿಂತಕರ ಅಗತ್ಯವೂ ಇದೆ.
ಮೋದಿಯವರು ಪ್ರಧಾನಿಯಾಗಲೇಬಾರದು ಎಂದು ವಾದಿಸುವ ಹಲವು ಪತ್ರಿಕೆಗಳು ಹಾಗೂ ಕೆಲವು ಸ್ವಘೋಷಿತ ಚಿಂತಕರು ಅದಕ್ಕೆ ನೀಡುವ ಕಾರಣಗಳು ಇಲ್ಲಿವೆ. ಅವುಗಳಿಗೆ ತಕ್ಕ ಉತ್ತರ ನೀಡಿ ಮೋದಿಯವರಿಗೆ ಪ್ರಧಾನಿಯಾಗುವ ಎಲ್ಲ ಗುಣಗಳೂ ಇವೆಯಲ್ಲ ಎಂದು ದಿಟ್ಟವಾಗಿ ಹೇಳುವ ಪ್ರಯತ್ನವೊಂದು ಇಲ್ಲಿದೆ.

  •    ಮೋದಿಯವರ ಖ್ಯಾತಿ ಮತ್ತು ದೂರದೃಷ್ಟಿ ಗುಜರಾತ್‌ಗೆ ಮಾತ್ರ ಸೀಮಿತ. ಭಾರತ ಎಂದರೆ ಕೇವಲ ಗುಜರಾತ್ ಅಲ್ಲ.
  •    ಮೋದಿಯವರ ಸಾಧನೆ ಕಾಗದಗಳಲ್ಲಿ ಮಾತ್ರ. ಅವರು ಕೆಲವರಿಗೆ ಮಾತ್ರ ನಾಯಕ.
  •    ಗುಜರಾತಿ ಹಿಂದೂಗಳು ಕೋಮುವಾದಿಗಳು. ಮೋದಿಯವರು ಪ್ರತಿಪಾದಿಸಿದ ಹಿಂದುತ್ವ ವಾದದಿಂದ ದೇಶಕ್ಕೇ ಕೆಟ್ಟ ಹೆಸರು ಬಂತು.
  •    ಅವರ ಕೈಗಳಿಗೆ ಅಂಟಿರುವ ರಕ್ತದ ಕಲೆ ಇನ್ನೂ ಹಾಗೇ ಇದೆ. ಹಾಗಿದ್ದರೂ ಇನ್ನೂ ಕ್ಷಮಾಪಣೆ ಕೇಳಿಲ್ಲ. ಅವರಿಗೆ ಮಿಸ್ಟರ್ ಕ್ಲೀನ್ ಎಂಬ ಇಮೇಜ್ ಇಲ್ಲ.
  •     ಮೋದಿಯವರ ನಾಯಕತ್ವವನ್ನು ಅಮೆರಿಕ ಒಪು ್ಪವುದಿಲ್ಲ. ಅವರಿಗೆ ಅಮೆರಿಕದ ವೀಸಾ ಸಿಕ್ಕಿಲ್ಲ.
  •     ಮೋದಿಯವರಲ್ಲಿ ಟೀಮ್ ಲೀಡರ್‌ಗೆ ಇರಬೇಕಾದ ಅರ್ಹತೆಗಳಿಲ್ಲ...
  •     ಮೋದಿಯವರು ಒಬ್ಬ ನಿರಂಕುಶಾಧಿಕಾರಿ.
  •   ಮೋದಿಯವರು ಪ್ರಧಾನಿಯಾದರೆ ಬಿಜೆಪಿ ಹೋಳಾಗುತ್ತದೆ.
- ಸೆಮು ಭಟ್
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.