ನಂಬಿಕೆಗಳನ್ನು ತಿರುವು ಮಾಡಿದ ನಮ್ಮ ರಾಷ್ಟ್ರಗೀತೆಗಳ ಇತಿಹಾಸ
ವಂದೇ ಮಾತರಂ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಾಷ್ಟ್ರಾಭಿಮಾನದ ಕಿಚ್ಚು ಹೊತ್ತಿಸಿ ಮಿಂಚಿನ ಸಂಚಲನ ಮೂಡಿಸಿದ ರಾಷ್ಟ್ರೀಯ ಮಹಾಮಂತ್ರ. ಈ ಗೀತೆಯನ್ನು ರಚಿಸಿದ್ದು ಖ್ಯಾತ ಕಾದಂಬರಿಕಾರ ಪಶ್ಚಿಮ ಬಂಗಾಳದ ಬಂಕಿಮಚಂದ್ರ ಚಟ್ಟೋಪಾಧ್ಯಾಯ. ಇದು ಸ್ವಾತಂತ್ರ್ಯ ಹೋರಾಟಗಾರರ ರಣಮಂತ್ರ, ರಾಷ್ಟ್ರದ ಒಗ್ಗಟ್ಟಿನ ಮಹಾಮಂತ್ರ.
1923ರಲ್ಲಿ ಆಂಧ್ರಪ್ರದೇಶದ ಕಾಕಿನಾಡದಲ್ಲಿ ಜರುಗಿದ ರಾಷ್ಟ್ರೀಯ ಕಾಂಗ್ರೆಸ್ ಮಹಾ ಅಧಿವೇಶನದಲ್ಲಿ ವಂದೇ ಮಾತರಂ ಗೀತೆ ಹಾಡಲು ಮಹಾರಾಷ್ಟ್ರದಿಂದ ಪಂಡಿತ ವಿಷ್ಣು ದಿಗಂಬರ ಪುಲಸ್ಕರ್ ಅವರನ್ನು ್ನ ಆಹ್ವಾನಿಸಲಾಗಿತ್ತು. ಆ ಗೀತೆಗೆ ರಾಗ ಸಂಯೋಜನೆ ಮಾಡಿದ್ದು ಜಾಧುನಾಥ ಭಟ್ಟಾಚಾರ್ಯ. 1870ರ ದಶಕದಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿ 'ಗಾಡ್ ಸೇವ್ ದಿ ಕಿಂಗ್' ಎಂಬ ಹಾಡನ್ನ್ನು ಹಾಡುವುದು ಕಡ್ಡಾಯವಾಗಿತ್ತು. ಈ ಹಾಡಿಗೆ ಸೆಡ್ಡು ಹೊಡೆದು ಬಂಕಿಮಚಂದ್ರರು ವಂದೇ ಮಾತರಂ ರಚಿಸಿದರು. 'ಆನಂದ ಮಠ' ಕಾದಂಬರಿಯಲ್ಲಿ ಈ ಗೀತೆ ಸೇರಿಸಲಾಗಿದೆ. ಅಲ್ಲದೇ 1907ರಲ್ಲಿ ಭಾರತದ ಪ್ರಪ್ರಥಮ ಧ್ವಜ ವಿನ್ಯಾಸವಾದಾಗ ಆ ಧ್ವಜದಲ್ಲಿ ವಂದೇ ಮಾತರಂ ಎಂದೇ ಬರೆಯಲಾಗಿತ್ತು. ವಂದೇ ಮಾತರಂ ಎಂದರೆ 'ತಾಯೆ ವಂದಿಸುವೆ' ಎಂದರ್ಥ. 1907ರಲ್ಲಿ ಮೇಡಂ ಕಾಮಾ ಅವರು ಫ್ರಾನ್ಸ್, ಜರ್ಮನಿಯಲ್ಲಿ ಈ ಧ್ವಜ್ನ ಹಾರಿಸಿದ್ದರು.
1919ರಲ್ಲಿ ಜಲಿಯನ್ ವಾಲಾಬಾಗ್ನ ಶಿಲಾನ್ಯಾಸದ ಮೇಲೂ ವಂದೇ ಮಾತರಂ ಎಂದು ಕೆತ್ತನೆ ಮಾಡಲಾಗಿದೆ. ಮುಸ್ಲಿಮರು ಈ ಗೀತೆಯನ್ನ್ನು ತಪ್ಪಾಗಿ ಅರ್ಥೈಸಿ ವಿರೋಧಿಸಿದ್ದರು. ಆದರೆ, ಖ್ಯಾತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್, ಸುನ್ನಿಉಲೆಮಾ ಮಂಡಳಿಯ ಅಧ್ಯಕ್ಷರಾಗಿದ್ದ ಮೌಲಾನಾ ಮುಫ್ತಿ ಸೈಯದ ಶಾ ಬದ್ರೂದ್ದೀನ್ ಅವರು 'ಇದನ್ನ್ನು ಗೌರವಿಸಿ. ನಮ್ಮ ತಾಯಿಯ ಪಾದಕ್ಕೆ ವಂದಿಸಿದರೆ ಅದು ನಿಶ್ಚಿತವಾಗಿಯೂ ಅಪಚಾರವಲ್ಲ. ಅದು ತಾಯಿಗೆ ಸಲ್ಲಬೇಕಾದ ಗೌರವ. ಹಾಗೆ ಮಾತೃಭೂಮಿಯೂ ತಾಯಿಯ ಸಮಾನವೆಂದೇ ಜಗತ್ತಿನ ಎಲ್ಲ ರಾಷ್ಟ್ರಗಳೂ ಭಾವಿಸುತ್ತವೆ' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 2003ರಲ್ಲಿ ಪ್ರಪಂಚದ 10ಕ್ಕೂ ಹೆಚ್ಚಿನ ಶ್ರೇಷ್ಠ ಹಾಗೂ ಜನಪ್ರಿಯ ಗೀತೆಗಳ ಅಯ್ಕೆಗೆ ನಡೆದ ಸಮೀಕ್ಷೆಯಲ್ಲಿ ವಂದೇ ಮಾತರಂ ಎರಡನೆಯ ಅತ್ಯುತ್ತಮ ಹಾಗೂ ಜನಪ್ರಿಯ ಗೀತೆ ಎಂದು ಆಯ್ಕೆಯಾಗಿರುವುದು ಭಾರತೀಯರಿಗೆ ಹೆಮ್ಮೆಯ ಸಂಗತಿ. ಮುಸ್ಲಿಮರಿಂದ ವಿರೋಧ ವ್ಯಕ್ತವಾಯಿತು ಎನ್ನುವ ಒಂದೇ ಕಾರಣಕ್ಕೆಅದನ್ನು ರಾಷ್ಟ್ರಗೀತೆಯನ್ನಾಗಿ ಮಾಡಲು ನಮ್ಮ ನೇತಾರರು ಹಿಂಜರಿದದ್ದು ದುರ್ದೈವದ ಸಂಗತಿ.
ಪ್ರಸ್ತುತ ಇರುವ ರಾಷ್ಟ್ರಗೀತೆ ಜನ-ಗಣ-ಮನ ರಚಿಸಿದ್ದು ರವೀಂದ್ರನಾಥ ಟಾಗೋರರು. ಅವರೇ ರಚಿಸಿದ 'ಅಮೋರ ಸೋನಾರ ಬಾಂಗ್ಲಾ' ಎಂಬ ಗೀತೆ ಇಂದು ಬಾಂಗ್ಲಾದೇಶದ ರಾಷ್ಟ್ರಗೀತೆಯಾಗಿದೆ.
----
ಜನ-ಗಣ-ಮನಕ್ಕೂ ಅನೇಕ ಬಗೆಯ ಅನೇಕ ಅಪಸ್ವರಗಳೆದ್ದವು. ಬ್ರಿಟಿಷ್ ರಾಜ್ 5ನೇ ಜಾರ್ಜ್ 1911ರಲ್ಲಿ ಭಾರತಕ್ಕೆ ಆಗಮಿಸಿದಾಗ ಅವರ್ನ ಸ್ತುತಿಗೆ ರಚಿಸಿದ ಗೀತೆ ಇದು ಎಂಬ ಆರೋಪ ಇದೆ. ಜನ-ಗಣ-ಮನ ಮೊದಲನೇ ಬಾರಿ ಹಾಡಿದ್ದು ಡಿಸೆಂಬರ್ 27, 1911ರಂದು ಮತ್ತೆ ಅದೇ ದಿನ 5ನೇ ಜಾರ್ಜ್ ಭಾರತಕ್ಕೆ ಆಗಮಿಸಿದ್ದು ಕಾಕತಾಳೀಯವಿರಬಹುದು. ಆದರ್ನೆ ಟಾಗೋರರು ಇದನ್ನು ಸ್ಪಷ್ಟವಾಗಿ ಅಲ್ಲಗಳೆದಿದ್ದರು. ಎಲ್ಲ ಗಣ್ಯರೂ ಸಮ್ಮತಿ ಸೂಚಿಸಿದ ಮೇಲೆ ಜನ ಗಣ ಮನ ರಾಷ್ಟ್ರಗೀತೆಯಾಯಿತು.
ಅತ್ಯಂತ ಶ್ರೇಷ್ಠ ಹಾಗೂ ಸುಂದರವಾಗಿ ಸಂಯೋಜನೆಗೊಂಡ ರಾಷ್ಟ್ರಗೀತೆ ಇದು. ಜಗತ್ತಿನ 5 ಶ್ರೇಷ್ಠ ರಾಷ್ಟ್ರಗೀತೆಗಳಲ್ಲಿ ಒಂದು ಎಂದು ಪ್ರಶಂಸಿಲ್ಪಟ್ಟಿದೆ. ಈ ರಾಷ್ಟ್ರಗೀತೆಯ ಸ್ವರ ಸಂಯೋಜಕ ರಾಮಸಿಂಗ ಠಾಕೂರ್, ಗೂರ್ಖಾ ರೈಫಲ್ಸ್ ನಲ್ಲಿ ಸೇವೆ ಸಲ್ಲಿಸಿ ನಂತರ ಸುಭಾಷಚಂದ್ರ ಭೋಸರ ಆಝಾದ್ ಹಿಂದ್ ಫೌಜ್ನ ಸಂಸ್ಥಾಪಕ ಸದಸ್ಯರಾಗಿದ್ದರು.
ಜನ ಗಣ ಮನಕ್ಕೆ ಭಾರತ 'ಭಾಗ್ಯವಿದಾತಾ' ಎಂಬ ಹೆಸರಿತ್ತು. ಜನವರಿ 24, 1950ರಂದು ಕೇಂದ್ರ ಸರ್ಕಾರ ಇದನ್ನು ರಾಷ್ಟ್ರಗೀತೆಯನ್ನ್ನಾಗಿ ಅಧಿಕೃತವಾಗಿ ಸ್ವೀಕರಿಸಿತು. ರಾಷ್ಟ್ರಗೀತೆ ಹಾಡಲು ಬೇಕಾದ ಅವಧಿ ಕೇವಲ 52 ಸೆಕೆಂಡುಗಳು. ಆದರೆ ಕೆಲವು ವಿಶಿಷ್ಟ ಹಾಗೂ ನಿಗದಿತ ಸಂದರ್ಭಗಳಲ್ಲಿ ಮಾತ್ರ ಈ ಗೀತೆಯನ್ನು ಸಂಕ್ಷಿಪ್ತಗೊಳಿಸಿ ಮೊದಲು ಹಾಗೂ ಕೊನೆಯ ಕೆಲವು ಸಾಲುಗಳನ್ನ್ನು 20 ಸೆಕೆಂಡುಗಳಲ್ಲಿ ಹಾಡಲು ಅವಕಾಶ ಕಲ್ಪಿಸಲಾಗಿದೆ. ರಾಷ್ಟ್ರಗೀತೆಯನ್ನು ಸಂಕ್ಷಿಪ್ತಗೊಳಿಸುವ ವಿಧಾನ ಯಾವುದೇ ರಾಷ್ಟ್ರದಲ್ಲಿಲ್ಲ. ಜನ ಗಣ ಮನವನ್ನು ಸಂಸ್ಕೃತ ಮತ್ತು ಬಂಗಾಲಿ ಮಿಶ್ರಿತ ಭಾಷೆಯಲ್ಲಿ ರಚಿಸಲಾಗಿದ್ದು, 1919ರಲ್ಲಿ ಈ ಗೀತೆಯನ್ನು ಟಾಗೋರ್ ಅವರು ಐರಿಷ್ ಕವಿ ಜೇಮ್ಸ್ ಎಸ್. ಕ್ಯೂಸಿನ್ಸ್ ನೆರವಿನೊಂದಿಗೆ ಇಂಗ್ಲಿಷ್ಗೆ ಅನುವಾದಿಸಿದರು. ಮಾರ್ಗರೇಟ್ ಕ್ಯೂಸಿನ್ಸ್ ಇಂಗ್ಲಿಷ್ ಗೀತೆಗೆ ರಾಗ ಸಂಯೋಜನೆ ಮಾಡಿದ್ದರು. ಜನ ಗಣ ಮನದ ಇಂಗ್ಲಿಷ್ ಅವತರಣಿಕೆ 'ಮಾರ್ನಿಂಗ್ ಸಾಂಗ್ ಆಫ್ ಇಂಡಿಯಾ' ಎಂದು ಪ್ರಸಿದ್ಧವಾಗಿತ್ತು.
ಆಂಧ್ರಪ್ರದೇಶದ ಚಿತ್ತೂರಿನ ಬೆಸೆಂಟ್ ಥಿಯಾಸಫಿಕಲ್ ಕಾಲೇಜಿನವರು ರವೀಂದ್ರನಾಥ ಟಾಗೋರ ಹಾಗೂ ಜೇಮ್ಸ್ ಕ್ಯೂಸಿನ್ಸ ಹಾಗೂ ಅವರ ಪತ್ನ್ನಿ ಮಾರ್ಗರೇಟ್ ಅವರನ್ನ್ನು ಆಹ್ವಾನಿಸಿ ಕಾಲೇಜಿನ ವಿದ್ಯಾರ್ಥಿಗಳಿಂದ ಪ್ರಥಮ ಬಾರಿಗೆ ಜನ ಗಣ ಮನ ಹಾಡಿಸಿದ್ದರು.
----
'ಸಾರೆ ಜಹಾಂ ಸೆ ಅಚ್ಛಾ' ಕವಿತೆಯನ್ನು ರಚಿಸಿದ್ದು ಸರ್ ಮಹ್ಮದ್ ಇಕ್ಬಾಲ್. ಅವರ ಮೂಲ ಹೆಸರು ರಾಮಚಂದ್ರ ಬಾರಾಯಾನ ಜೀ ದ್ವಿವೇದಿ. ಅವರು ಹುಟ್ಟಿದ್ದು ಸಿಯಾಲಕೋಟ್ನಲ್ಲಿ. ಅವರ ತಂದೆ ಕಾಶ್ಮೀರಿ ಬ್ರಾಹ್ಮಣ. ಸಾರೇ ಜಹಾಂ ಸೆ ಅಚ್ಛಾ ಹಿಂದೂಸ್ತಾನ್ ಹಮಾರಾ ಎಂಬ ಸುಂದರ ರಾಷ್ಟ್ರಭಕ್ತಿ ಹಾಗೂ 'ಜಾಗೃತಿ' ಎಂಬ ಸುಂದರ ಮಕ್ಕಳ ಚಲನಚಿತ್ರಕ್ಕಾಗಿ ಬರೆದ 'ಆವೋ ಬಚ್ಚೋ ತುಮ್ಹೆ ದಿಖಾಯೆ ಝೂಕಿ ಹಿಂದೂಸ್ತಾನ್ ಕೀ, ಇಸ್ ಮಿಟ್ಟಿ ಸೆ ತಿಲಕ ಭರೋ ಏ ಧರತೀ ಹೈ ಬಲಿದಾನ ಕಿ, ವಂದೇ ಮಾತರಂ' - ವಂದೇ ಮಾತರಂ ಈ ಗೀತೆಗಳು ಸ್ವಾತಂತ್ರ್ಯ ಪ್ರೇಮಿಗಳ ಸ್ಫೂರ್ತಿಯ ನೆಲೆಯಾಗಿದ್ದವು. ಈ ಕವಿ ಇಕ್ಬಾಲ್ ಭಾರತದ ಕಣ್ಮಣಿಯಾಗಿದ್ದ. ಕವಿ ಇಕ್ಬಾಲ್ ಗೀತೆಗಳನ್ನ್ನು ರಚಿಸಿದ್ದು ಹಣದ ಲಾಲಸೆಯಿಂದ. ಆದರೆ, ಇಕ್ಬಾಲ್ ಅವರೇ ಮುಸ್ಲಿಮರಿಗಾಗಿ ಒಂದು ಪ್ರತ್ಯೇಕ ರಾಷ್ಟ್ರಬೇಕೆಂದು ಪಾಕಿಸ್ತಾನ ರಚನೆಗೆ ಬೀಜ ಬಿತ್ತಿದವರು. ಪಂಜಾಬ್, ಅಪಘಾನಿಸ್ತಾನ್, ಕಾಶ್ಮೀರ ಈ ಮೂರು ಪ್ರಾಂತ್ಯಗಳ ಮೊದಲಕ್ಷರಗಳನ್ನ್ನು ಎತ್ತಿಕೊಂಡು ಪಾಕ್ ಶಬ್ದ ನೀಡಿದವರು ಕವಿ ಇಕ್ಬಾಲ್.
ಇದಕ್ಕೆ ಪ್ರತಿಯಾಗಿ ಪಂಜಾಬಿನ ಪ್ರಖ್ಯಾತ ತ್ರಿಲೋಕ ಚಂದ್ರರು, 'ಭಾರತ ಎಂದಿಗೂ ನಿನ್ನದಾಗುವುದಿಲ್ಲ. ಈ ರಾಷ್ಟ್ರ ಎಂದೆಂದಿಗೂ ನಮ್ಮದೇ' ಎಂದು ಸಿಡಿಲು ಹೊಡೆದಂತೆ ಇಕ್ಬಾಲರಿಗೆ ಮರ್ಮಾಘಾತವಾಗುವಂತೆ ಉತ್ತರಿಸಿದರು. ಹಿಂದೂ ಧರ್ಮವನ್ನು ಅಳಿಸಿ ಹಾಕುವ, ಇಡೀ ಭಾರತವನ್ನೇ ಇಸ್ಲಾಮೀಕರಣಗೊಳಿಸಲು ಉದ್ದೇಶಿಸಿದ ಮಹ್ಮದ್ ಇಕ್ಬಾಲ್ ರಾಷ್ಟ್ರದ್ರೋಹಿ ಎಂದು ಹೇಳಲು ಅಂಗೈ ಹುಣ್ಣಿಗೆ ಕನ್ನ್ನಡಿ ಬೇಕೆ? ಮುಂದೆ ಇದೇ ಮಹ್ಮದ್ ಇಕ್ಬಾಲರೇ 'ತರಾನಾ-ಎ-ಮಿಲಿ ಪಾಕಿಸ್ತಾನ' ರಾಷ್ಟ್ರಗೀತೆಯನ್ನ್ನು ಬರೆದರು.
ಕೆ.ಟಿ. ಪಾಟೀಲ
ಹುಬ್ಬಳ್ಳಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

