ಬೌದ್ಧರ ರಕ್ಷಣೆಗಾಗಿ ಬರ್ಮಾದಲ್ಲಿ ಹೋರಾಟ

46 ವರ್ಷದ ಬೌದ್ಧ ಭಿಕ್ಕು 'ವಿರಾಥು' ಅವರ ಹೆಸರು ಮ್ಯಾನ್ಮಾರ್ನಲ್ಲಿ ಚಿರಪರಿಚಿತ. ಬರ್ಮಾದಲ್ಲಿ ಬೆಳೆಯುತ್ತಿರುವ ಇಸ್ಲಾಂ ಧರ್ಮದಿಂದ ಬೌದ್ಧ ಧರ್ಮೀಯರನ್ನು ರಕ್ಷಿಸುವುದಕ್ಕಾಗಿ ನಡೆದ '969 ಚಳವಳಿಯ' ನೇತೃತ್ವ ವಹಿಸಿದವರಿವರು.
ಆದರೆ ಬಹುತೇಕರು ಈ ಚಳವಳಿಯಿಂದ ಸ್ಫೂರ್ತಿ ಪಡೆದೇ ಆ ದೇಶದಲ್ಲಿ ಮುಸ್ಲಿಮರ ಮೇಲೆ ಹಲ್ಲೆಗಳಾದವು ಎಂದು ಭಾವಿಸುತ್ತಾರೆ. ಹಾಗಾಗೇ ವಿರಾಥು ಅವರನ್ನು ಬರ್ಮಾದ ಬಿನ್ ಲಾಡೆನ್ ಎಂಬ ಹೆಸರಿನಿಂದಲೂ ಕರೆಯಲಾಗುತ್ತಿದೆ! ಅಲ್ಲಿ ನಿಜಕ್ಕೂ ನಡೆಯುತ್ತಿರುವುದೇನು ಎಂಬ ಬಗ್ಗೆ 'ಔಟ್ಲುಕ್' ನಿಯತಕಾಲಿಕಕ್ಕೆ ಈ ಬಗ್ಗೆ ಭಿಕ್ಕು ಮಿರಾಥು ನೀಡಿದ ಸಂದರ್ಶನದ ಆಯ್ದ ಭಾಗ:
- ನಿಮ್ಮ 969 ಚಳವಳಿಯ ಬಗ್ಗೆ ಹೇಳಿ..
ಇದೆಲ್ಲ ನಡೆದದ್ದು ನಮ್ಮ ಧರ್ಮ, ಜನಾಂಗವನ್ನು ರಕ್ಷಿಸುವುದಕ್ಕಾಗಿ.
- ಮ್ಯಾನ್ಮಾರ್ನಲ್ಲಿ ಮುಸಲ್ಮಾನರಿಗೆ ಜಾಗವಿರಬಾರದು ಎನ್ನುವುದು ಈ ಹೋರಾಟದ ಉದ್ದೇಶ?
ಇಲ್ಲ. ನೀವು ಆ ದೃಷ್ಟಿಯಿಂದ ನೋಡಬಾರದು. ಈ ಚಳವಳಿಯೇನಿದ್ದರೂ ಹೊರಗಿನವರಿಂದ ನಮ್ಮವರನ್ನು, ನಮ್ಮ ಧರ್ಮವನ್ನು ರಕ್ಷಿಸುವುದಕ್ಕಾಗಿ ರೂಪುಗೊಂಡಿದ್ದು. ಗಾಂಧೀಜಿಯವರು ವಿದೇಶಿ ಉತ್ಪನ್ನಗಳನ್ನು ಬಹಿಷ್ಕರಿಸಲು ಕರೆ ಕೊಟ್ಟರಲ್ಲ? ಇದೂ ಕೂಡ ಹಾಗೆಯೇ...
- ಬೌದ್ಧರು ಮತ್ತು ಮುಸಲ್ಮಾನರ ನಡುವಿನ ಸಂಘರ್ಷಕ್ಕೆ ಕಾರಣವೇನು?
ಮುಸ್ಲಿಮರು ಬೌದ್ಧರನ್ನು ಬೆದರಿಸಿ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ. ಅವರ ದಾಳಿಯನ್ನು ಬೌದ್ಧರೀಗ ವಿರೋಧಿಸುತ್ತಿದ್ದಾರಷ್ಟೆ.
- ಹಾಗಿದ್ದರೆ ಅವರು ದೇಶದ ಭದ್ರತೆಗೆ, ಸಮಗ್ರತೆಗೆ ಅಪಾಯಕಾರಿಗಳೇ? ؔಅವರು ಬೌದ್ಧ ಧರ್ಮೀಯರ ಹಕ್ಕನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆಯೇ?
ವಿದೇಶಿ ಮುಸಲ್ಮಾನರಿಂದ ಪ್ರೇರಣೆ ಪಡೆದು ಜಿಹಾದ್ನಲ್ಲಿ ನಂಬಿಕೆ ಬೆಳಸಿಕೊಂಡವರು ದೇಶಕ್ಕೆ ಮಾರಕವಲ್ಲವೇ? ನಮ್ಮ ಧರ್ಮವನ್ನು ಅವರು ನಾಶಮಾಡುತ್ತಿದ್ದಾರೆ. ಅಂತಧರ್ಮೀಯ ಮದುವೆಗಳ ಮೂಲಕ ನಮ್ಮ ಜನಾಂಗವನ್ನು ಇಲ್ಲವಾಗಿಸುತ್ತಿದ್ದಾರೆ. ನಮ್ಮ ದೇಶದಲ್ಲೇ ಇದ್ದರೂ, ಅವರಿಂದ ನಮ್ಮ ದೇಶಕ್ಕೆ ಒಂದಿಷ್ಟೂ ಒಳಿತಾಗಿಲ್ಲ.
- ನಿಮ್ಮ 969 ಚಳವಳಿಯಿಂದ ಮ್ಯಾನ್ಮಾರ್ನಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಹೇಗೆ ಕೊನೆಗಾಣಿಸುತ್ತೀರಿ?
ಮೊದಲು ನಮ್ಮ ಬೇಲಿಯನ್ನು ನಾವು ಭದ್ರಪಡಿಸಿಕೊಳ್ಳುತ್ತೇವೆ. ಆಗ ಅವರು ನಮ್ಮ ಮೇಲೆ ದಾಳಿ ಮಾಡಲಾರರು. ಇನ್ನು ನಮ್ಮವರು ಕೂಡ ಹಿಂಸಾಚಾರಕ್ಕೆ ಇಳಿಯಬಾರದು ಎಂದೇ ನಾವು ಭಾವಿಸುತ್ತೇವೆ.
- ಮ್ಯಾನ್ಮಾರ್ನಲ್ಲಿ ರೊಹಿಂಗ್ಯಾ ಮುಸಲ್ಮಾನರನ್ನು ನಡೆಸಿಕೊಳ್ಳುತ್ತಿರುವ ರೀತಿಯಿಂದ ಕೋಪಗೊಂಡಿರುವ ಉಗ್ರರು, ಬೊಧಗಯಾದ ಮೇಲೆ ದಾಳಿ ಮಾಡಿದರು ಎನ್ನಲಾಗುತ್ತಿದೆ...
ನಿಸ್ಸಂಶಯವಾಗಿಯೂ ಅದೇ ಕಾರಣಕ್ಕಾಗಿ ದಾಳಿ ಮಾಡಿರುತ್ತಾರೆ ಎಂದು ನನಗನ್ನಿಸುತ್ತದೆ. ದಕ್ಷಿಣ ಥಾಯ್ಲ್ಯಾಂಡ್ನಲ್ಲಿ ಮಾಡಿದಂತೆ ಮ್ಯಾನ್ಮಾರ್ನಲ್ಲೂ ಕೂಡ ಹಿಂಸೆಯ ಮೂಲಕ ತಮ್ಮ ಅಧಿಪತ್ಯ ಸಾಧಿಸಬೇಕೆಂದು ಮುಸಲ್ಮಾನರು ಪ್ರಯತ್ನಿಸುತ್ತಿದ್ದಾರೆ. ಮ್ಯಾನ್ಮಾರ್ನಲ್ಲಿನ ಸಂಘರ್ಷ ಆಗಲೇ ಮುಗಿದಿದೆ. ಆದರೆ ಇದನ್ನೇ ನೆಪವಾಗಿಟ್ಟುಕೊಂಡಿರುವ ತೀವ್ರಗಾಮಿಗಳು ಇನ್ನುಳಿದ ಭಾಗದಲ್ಲಿ ಹಿಂಸಾಚಾರಕ್ಕೆ ಮುಂದಾಗುತ್ತಿದ್ದಾರೆ.
- ಶ್ರೀಲಂಕಾ, ಥಾಯ್ಲ್ಯಾಂಡ್, ಬಾಂಗ್ಲಾದೇಶಗಳಲ್ಲೂ ಕೂಡ ಬೌದ್ಧರು-ಮುಸಲ್ಮಾನರ ನಡುವೆ ಸಂಘರ್ಷಗಳಾಗುತ್ತಿವೆ. ಭಾರತದ ಬೌದ್ಧರು ಈ ಬಗ್ಗೆ ಜಾಗ್ರತೆ ವಹಿಸಬೇಕು ಎಂದು ನೀವು ಭಾವಿಸುತ್ತೀರಾ?
ಖಂಡಿತ. ಕೇವಲ ಬೌದ್ಧರಷ್ಟೇ ಅಲ್ಲ, ಎಲ್ಲಾ ಧರ್ಮಗಳೂ ಇಂದು ಅಪಾಯದಲ್ಲಿವೆ. ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ರಕ್ತ ಮತ್ತು ಸೇಡಿನ ದಾಹಕ್ಕೆ ಹಾತೊರೆಯುತ್ತಿರುವವರೇ ಈ ಹಿಂಸಾಚಾರಕ್ಕೆ ಮೂಲಕಾರಣ. ಇಂಥವರು ತಮ್ಮ ನಿಜರೂಪವನ್ನು, ಕೃತ್ಯಗಳನ್ನು ಮುಚ್ಚಿಡಲು ಮ್ಯಾನ್ಮಾರ್ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


