ಮೇಲಿನ ಚಿತ್ರವೇ ಹಲವು ಕತೆಗಳನ್ನು ಉಸುರುತ್ತದೆ. ವರ್ಷಗಳಿಂದ ದಿನಪತ್ರಿಕೆಗಳು ಪ್ರಕಟಿಸಿದ ಅನೇಕ ವರದಿಗಳನ್ನು ಆಧಾರವಾಗಿಟ್ಟುಕೊಂಡಿದ್ದೇ ಆದಲ್ಲಿ ಈ ಚಿತ್ರಕ್ಕೆ ಅರ್ಥವೂ ಲಭಿಸುತ್ತದೆ. ಪ್ರತಿಭಾ ಪಾಟೀಲರು ಸೋನಿಯಾ ಗಾಂಧಿಯವರಿಗೆ ಉಪಕೃತರಾಗಿರುವುದಕ್ಕೆ ಹಲವು ಕಾರಣಗಳಿವೆ.
ಪುಣೆಯ ಪಶಾನ್ ರಸ್ತೆಯ 2906 ಚದರ ಅಡಿಗಳ ನಿವೃತ್ತಿ ಕಾಲದ ಬಂಗಲೆ ಈಗ 'ನವೀಕರಣ' ಪ್ರಕ್ರಿಯೆಗೆ ಸಿಲುಕಿ 6000 ಚದರ ಅಡಿಗೆ ವಿಸ್ತರಣೆ ಆಗಿದೆ. ಹೀಗಾಗಿ ಮೇಡಂ ಜೀ ಗೆ ಧನ್ಯವಾದ.
1962ರ ರಾಷ್ಟ್ರಪತಿಗಳ ಪಿಂಚಣಿ ಕಾಯಿದೆ ಹೇಳುವುದೇನೆಂದರೆ ಮಾಜಿ ರಾಷ್ಟ್ರಪತಿಗಳೇನಾದರೂ ಲೀಸ್ಡ್ ಆಸ್ತಿಯಲ್ಲಿ ವಾಸಿಸುತ್ತಿದ್ದರೆ ಅದರ ವ್ಯಾಪ್ತಿ 2000 ಚದರ ಅಡಿಗಳನ್ನು ಮೀರುವಂತಿಲ್ಲ. ಇದಕ್ಕೊಂದು ಅಪವಾದ ಎಂಬಂತೆ ಕಾಂಗ್ರೆಸ್ನ ವಂಶವಾಹಿ ಆಡಳಿತವು ನಿಯಮವನ್ನು ಕಡೆಗಣಿಸಿದ್ದಕ್ಕೆ ಮೇಡಂ ಜೀ ಅವರಿಗೆ ಥ್ಯಾಂಕ್ಸ್.
ಬಂಗಲೆಯನ್ನು ಹೊಂದಿರುವ 56239 ಚದರ ಅಡಿ ವ್ಯಾಪ್ತಿಯ ಆಸ್ತಿಗೆ ವಾರ್ಷಿಕ ಬಾಡಿಗೆ ಕೇವಲ 1 ರುಪಾಯಿ. ಥ್ಯಾಂಕ್ಸ್ ಮೇಡಂ ಜೀ, ಮಹಾರಾಷ್ಟ್ರದ ಕಾಂಗ್ರೆಸ್ ಸರ್ಕಾರ ಇಂಥ ಔದಾರ್ಯವನ್ನು ತೋರಿಸುವಂತೆ ನೋಡಿಕೊಂಡಿದ್ದಕ್ಕೆ.
ಹುಲ್ಲುಹಾಸು ಮತ್ತು ಉದ್ಯಾನಗಳ ಉಸ್ತುವಾರಿ ಸೇರಿದಂತೆ ನವೀಕರಣಕ್ಕೆ ವ್ಯಯಿಸಲಾದ ಮೊತ್ತ 1,10,00,000 ರುಪಾಯಿಗಳು.
ಪ್ರತಿಭಾ ಪಾಟೀಲರ 22 ದೇಶಗಳ ವಿದೇಶ ಪ್ರವಾಸಕ್ಕೆ ತೆರಿಗೆದಾರನ ಜೇಬಿನಿಂದ ಸಂದಾಯವಾದ ಮೊತ್ತ 205,00,00,000 ರುಪಾಯಿಗಳು. ಇದು ಯಾವುದೇ ರಾಷ್ಟ್ರಪತಿಗಳಿಗೆ ಹೋಲಿಸಿದಾಗ ಮಾಡಿದ ಅತಿ ಹೆಚ್ಚಿನ ಖರ್ಚು. ಔದಾರ್ಯಕ್ಕೆ ಕಾರಣರಾದ ಮೇಡಂ ಜೀಗೆ ನಮನಗಳು.
ಪ್ರತಿಭಾ ಪಾಟೀಲರ ಕುಟುಂಬ ಸದಸ್ಯರು ಹಾಗೂ ಸಂಬಂಧಿಕರಿಗೆ ಸಾಲಮನ್ನಾ ಮಾಡುತ್ತಲೇ ಮಹಾರಾಷ್ಟ್ರದ ಮಹಿಳಾ ಸಹಕಾರಿ ಬ್ಯಾಂಕ್ ಒಂದು ಹೈರಾಣಾಗಿಹೋಯಿತು. ಇದನ್ನು ಉಪೇಕ್ಷಿಸಿದ್ದಕ್ಕೆ ಮೇಡಂ ಜೀಗೆ ನಮನಗಳು.
ಅಪಹರಣಕಾರರು, ಅತ್ಯಾಚಾರಿಗಳು ಹಾಗೂ ಮಕ್ಕಳನ್ನು ಕೊಂದವರೂ ಸೇರಿದಂತೆ 35 ಅಪರಾಧಿಗಳಿಗೆ ಪ್ರತಿಭಾ ಪಾಟೀಲರು ರಾಷ್ಟ್ರಪತಿಗಳಾಗಿದ್ದ ಅವಧಿಯಲ್ಲಿ ಕ್ಷಮಾದಾನ ಲಭಿಸಿತು. ಆಗ ಆ ಬಗ್ಗೆ ಯಾವ ಕಳವಳವನ್ನೂ ವ್ಯಕ್ತಪಡಿಸದೇ ಮುಗುಮ್ಮಾಗಿ ಇದ್ದಿದ್ದಕ್ಕೆ ಮೇಡಂ ಜೀ ಅವರಿಗೆ ಥ್ಯಾಂಕ್ಸ್.
ನಿಯಮಗಳನ್ನು ಗಾಳಿಗೆ ತೂರಿ ಪ್ರತಿಭಾ ಪಾಟೀಲರು ರಾಷ್ಟ್ರಪತಿ ಪದವಿಗೆ ಸಂದಾಯವಾಗಿದ್ದ 155 ಕೊಡುಗೆಗಳನ್ನು 40 ಟ್ರಕ್ಗಳಲ್ಲಿ ಒಯ್ದರು. ಅವುಗಳನ್ನೆಲ್ಲ ಹಿಂತಿರುಗಿಸಿ ಎಂದು ಕೇಳಿಕೊಂಡಿದ್ದು ಹೌದಾದರೂ ಆ ನಿಟ್ಟಿನಲ್ಲಿ ಯಾವುದೇ ಕ್ರಮಕ್ಕೆ ಮುಂದಾಗದೇ ಇದ್ದಿದ್ದಕ್ಕೆ ಮೇಡಮ್ ಜೀ ಗೆ ಥ್ಯಾಂಕ್ಸ್.