ಅಂಕಣಗಳು

ಚರ್ಚಿಲ್ ಕುಟಿಲ ತಂತ್ರ ಪಟೇಲರಿಂದ ಭಗ್ನ

ಚರ್ಚಿಲ್ ಕುಟಿಲ ತಂತ್ರ ಪಟೇಲರಿಂದ ಭಗ್ನ
Published On :

1945ರಲ್ಲಿ, ಭಾರತವನ್ನು ವಿಭಜಿಸಿ ಪಾಕಿಸ್ತಾನವನ್ನು ಸೃಷ್ಟಿಸಬೇಕು ಎಂದು ಮುಸ್ಲೀಂಲೀಗ್ ಆಂದೋಲನ ಶುರುಮಾಡುತ್ತಲೇ ಆಗ ಬ್ರಿಟನ್‌ನ ಪ್ರಧಾನಿಯಾಗಿದ್ದ ವಿನ್‌ಸ್ಟನ್ ಚರ್ಚಿಲ್ ಅವರು ತಾವು ಭಾರತವನ್ನು ಪಾಕಿಸ್ತಾನ, ಹಿಂದುಸ್ತಾನ ಹಾಗೂ ಪ್ರಿನ್ಸೆಸ್ತಾನ್‌ಗಳನ್ನಾಗಿ ವಿಭಜಿಸುವುದಕ್ಕೆ ಸಿದ್ಧರಿರುವುದಾಗಿ ಹೇಳಿದ್ದರು.
ಈ ಹಿಂದಿನ ಬ್ಲಾಗ್ ಬರೆಹದಲ್ಲಿ ನಾನು ಉಲ್ಲೇಖಿಸಿದ್ದ, ಸರ್ದಾರ್ ಪಟೇಲರ ಕುರಿತ ಬಲರಾಜ್ ಕೃಷ್ಣ ಅವರ ಪುಸ್ತಕದಲ್ಲಿ 'ಎ ಚರ್ಚಿಲಿಯನ್ ಪ್ಲಾನ್‌' ಎಂಬ ಪ್ರತ್ಯೇಕ ಅಧ್ಯಾಯವೇ ಇದೆ.
'ಚರ್ಚಿಲ್ ಯುದ್ಧ ಗೆದ್ದರಾದರೂ ಸಾಮ್ರಾಜ್ಯ ಕಳೆದುಕೊಂಡರು' ಎಂಬುದಾಗಿ ವೈಸ್‌ರಾಯ್ ವೇವೆಲ್ ಅವರು ವೈಸ್‌ರಾಯ್ಸ್ ಜರ್ನಲ್‌ನಲ್ಲಿ ಹೇಳಿದ್ದನ್ನು ಪುಸ್ತಕವು ಉಲ್ಲೇಖಿಸುತ್ತದೆ. ಮುಂದುವರಿದು ವೈಸ್‌ರಾಯ್ ಹೇಳುವ ಮಾತು- ಆಕ್ರೋಶವೆದ್ದ ಭಾರತವನ್ನು ಆಳುವ ಹಣಬಲ ಇಲ್ಲವೇ ತೋಳ್ಬಲಗಳ್ಯಾವವೂ ಬ್ರಿಟನ್ ಬಳಿ ಇರಲಿಲ್ಲ. ಅಲ್ಲಿಂದ ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವುದೆಂದರೆ ಬ್ರಿಟನ್, ಮಧ್ಯಪ್ರಾಚ್ಯ ಹಾಗೂ ಆಗ್ನೇಯ ಏಷ್ಯಗಳೊಂದಿಗೆ ಹೊಂದಿದ್ದ ಸಂಪರ್ಕಕ್ಕೆ ಹಾನಿಯಾಗಲಿದೆ ಎಂಬುದನ್ನು ಚರ್ಚಿಲ್ ಅರಿತಿದ್ದರು. ಹೀಗಾಗಿಯೇ ಭಾರತವನ್ನು ಮೂರು ತುಂಡುಗಳಾಗಿಸಿ ಅದರ ಮೇಲೆ ಹಿಡಿತವನ್ನು ಹೊಂದುವ ಸನ್ನಾಹದಲ್ಲಿ ಅವರಿದ್ದರು. ಇದು ಚರ್ಚಿಲ್‌ರವರ ಸಾಮ್ರಾಜ್ಯಶಾಹಿ ಕಾರ್ಯತಂತ್ರದ ಭಾಗವಾಗಿತ್ತು. ಚರ್ಚಿಲ್ ನಂತರದಲ್ಲಿ ಚುನಾವಣೆಯಲ್ಲಿ ಸೋತು ಕ್ಲೆಮೆಂಟ್ ಆಟ್ಲಿ ನೇತೃತ್ವದ ಲೇಬರ್ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಭಾರತವನ್ನು ಪ್ರಭಾವಿಸುವುದಕ್ಕೆ ಬ್ರಿಟನ್ ನಿರಂತರ ಯತ್ನಿಸುತ್ತಲೇ ಇತ್ತು.
1947ರ ಫೆಬ್ರವರಿ 20ರಂದು ಪ್ರಧಾನಿ ಆಟ್ಲಿ ಬ್ರಿಟಿಷ್ ಸಂಸತ್ತಿನಲ್ಲಿ ನೀಡಿದ ಹೇಳಿಕೆಯ ಪ್ರಮುಖ ಎರಡಂಶಗಳು ಹೀಗಿದ್ದವು.

  1. ಬ್ರಿಟಿಷ್ ಸರ್ಕಾರವು ಜೂನ್ 1948ರ ಒಳಗೆ ಸಂಪೂರ್ಣ ಸ್ವಯಮಾಡಳಿತಕ್ಕೆ ಅನುವು ಮಾಡಿಕೊಡಲಿದೆ.
  2. ಅಧಿಕಾರ ಹಸ್ತಾಂತರದ ಅಂತಿಮ ಪ್ರಕ್ರಿಯೆಗಳೆಲ್ಲ ಮುಕ್ತಾಯವಾದಾಗ ರಾಜಾಡಳಿತದ ರಾಜ್ಯಗಳ ಬಗ್ಗೆ ಆಲೋಚಿಸಲಾಗುವುದು.
  1. ದೇಶ ವಿಭಜನೆ ತತ್ವವನ್ನು ಬ್ರಿಟಿಷ್ ಸರ್ಕಾರ ಒಪ್ಪಿಕೊಂಡಿದೆ.
  2. ಆಡಳಿತ ವಹಿಸಿಕೊಳ್ಳುವ ಸರ್ಕಾರಕ್ಕೆ ಡೊಮಿನಿಯನ್ ಸ್ಟೇಟಸ್ ನೀಡಲಾಗುವುದು.
  3. ಬ್ರಿಟಿಷ್ ಕಾಮನ್‌ವೆಲ್ತ್‌ನಿಂದ ಬೇರ್ಪಡುವ ಹಕ್ಕು ಅವುಗಳಿಗೆ ಇರುತ್ತದೆ.
- ಎಲ್.ಕೆ. ಆಡ್ವಾಣಿ
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.