ಅಂಕಣಗಳು

ಎನ್‌ಸಿಟಿಸಿ ಇನ್ನೂ ಟೇಕಾಫ್ ಆಗಿಲ್ಲ

Published On :

ಮುಂಬೈ ದಾಳಿ ಬಳಿಕ ದೇಶದಲ್ಲಿ ಕೇಂದ್ರ ಸರ್ಕಾರಕ್ಕೆ ಉಗ್ರರನ್ನು ಮಟ್ಟ ಹಾಕಲು ಏಕೀಕೃತ ಸಂಸ್ಥೆ ಬೇಕೆಂದು ಅನಿಸತೊಡಗಿತು. ಅದಕ್ಕೆ ಮಾದರಿಯನ್ನಾಗಿ ಮಾಡಿಕೊಂಡದ್ದು ಅಮೆರಿಕದಲ್ಲಿರುವ ರಾಷ್ಟ್ರೀಯ ಉಗ್ರ ನಿಗ್ರಹ ಕೇಂದ್ರ (ಎನ್‌ಸಿಸಿ- ನ್ಯಾಷನಲ್ ಕೌಂಟರ್ ಟೆರರಿಸಂ ಸೆಂಟರ್) ಮತ್ತು ಬ್ರಿಟನ್‌ನಲ್ಲಿರುವ ಜಂಟಿ ಭಯೋತ್ಪಾದನಾ ವಿಶ್ಲೇಷಣಾ ಕೇಂದ್ರ (ಜೆಟಿಎಸಿ) ವನ್ನು ಮಾದರಿಯಾಗಿ ತೆಗೆದುಕೊಂಡಿತ್ತು.
ದಾಳಿಯ ಬಗ್ಗೆ ಸೂಕ್ತ ಮುನ್ನೆಚ್ಚರಿಕೆ ಇದ್ದರೂ ಅದನ್ನು ತಡೆಯುವಲ್ಲಿ ವಿಫಲವಾಗಿರುವ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ 'ಅಮೆರಿಕ ಮಾದರಿ' ತನಿಖಾ ಸಂಸ್ಥೆ ಆರಂಭಕ್ಕೆ ಕೇಂದ್ರ ಸರ್ಕಾರ ಮನ ಮಾಡಿತು. ದೇಶದ ಗುಪ್ತಚರ ಇಲಾಖೆಯಲ್ಲಿನ ಲೋಪಗಳನ್ನು ತಿದ್ದಿಕೊಂಡು ಉಗ್ರ ಕೃತ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕುವ ಉದ್ದೇಶ ಹೊಂದಿತ್ತು. ಜತೆಗೆ ಇತರ ತನಿಖಾ ಸಂಸ್ಥೆಗಳೊಂದಿಗೆ ಸಮನ್ವಯ ಸಾಧನೆ ಪ್ರಮುಖ ಗುರಿಯಾಗಿತ್ತು.
1967ರ ಕಾನೂನು ಬಾಹಿರ ತಡೆ ಕಾಯ್ದೆಯನ್ವಯ ಈ ಸಂಸ್ಥೆ ರಚನೆ ಮಾಡಲಾಗಿದೆ. ಇಂಟೆಲಿಜೆನ್ಸ್ ಬ್ಯೂರೋದ ಒಂದು ಅಂಗವಾಗಿ ಕೆಲಸ ಮಾಡುವಂತೆ ಪ್ರಸ್ತಾವನೆಯಲ್ಲಿ ಹೇಳಲಾಗಿದೆ. ಅದಕ್ಕೆ ನಿರ್ದೇಶಕರು ಮುಖ್ಯಸ್ಥರು. ಅವರು ಇಂಟೆಲಿಜೆನ್ಸ್ ಬ್ಯೂರೋದ ಮುಖ್ಯಸ್ಥರು ಮತ್ತು ಕೇಂದ್ರ ಗೃಹ ಖಾತೆ ಕಾರ್ಯದರ್ಶಿಗಳಿಗೆ ನೇರವಾಗಿ ಆಜ್ಞಾನುವರ್ತಿಗಳಾಗಿರಬೇಕು.
ದುರಂತವೆಂದರೆ ಇದು. ಉಗ್ರ ನಿಗ್ರಹಕ್ಕೆಂದು ಪ್ರತ್ಯೇಕ ಸಂಸ್ಥೆ ರಚನೆ ಮಾಡಲು ಮುಂದಾಗಿದ್ದ ಕೇಂದ್ರ ಸರ್ಕಾರ ಪರೋಕ್ಷವಾಗಿ ರಾಜ್ಯಗಳ ಮೇಲೆ ನಿಯಂತ್ರಣ ಸಾಧಿಸಲು ಮುಂದಾಯಿತು. ಅಮೆರಿಕದ ಮಾದರಿಯನ್ನು ಹಾಗೇಯೇ ನಮ್ಮ ದೇಶದ ವ್ಯವಸ್ಥೆಗೆ ಭಟ್ಟಿ ಇಳಿಸಲು ಮುಂದಾದ ಕೇಂದ್ರ ಸರ್ಕಾರ ಉಗ್ರ ನಿಗ್ರಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಆಯಾ ರಾಜ್ಯ ಸರ್ಕಾರಗಳ ಅನುಮತಿಗೆ ಕಾಯದೆ ತನಿಖೆ ನಡೆಸುವ ಮತ್ತು ಸಂಶಯಿತರನ್ನು ಬಂಧಿಸುವ ಕಾರ್ಯಾಚರಣೆಯ ಅಧಿಕಾರವನ್ನು ಎನ್‌ಸಿಟಿಸಿಗೆ ನೀಡಲು ಮುಂದಾಯಿತು. ಈ ಪ್ರಸ್ತಾಪಕ್ಕೆ ಹೆಚ್ಚಿನ ಎಲ್ಲ ರಾಜ್ಯ ಸರ್ಕಾರಗಳು ವಿರೋಧ ವ್ಯಕ್ತಪಡಿಸಿದ್ದರಿಂದ ಕೇಂದ್ರ ಸರ್ಕಾರ ಉಗ್ರ ನಿಗ್ರಹ ಕೇಂದ್ರವನ್ನು ಆರಂಭಿಸುವ ಯತ್ನವನ್ನು ಸದ್ಯಕ್ಕೆ ಕೈಬಿಟ್ಟಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.