ಹೆಂಡ ತೋರಿಸಬೇಡಿ ದೇಶಭಕ್ತರ ಮರೀಬೇಡಿ
ಸಾಪ್ತಾಹಿಕದಲ್ಲಿ 'ನರ್ಸ್ ಅಮ್ಮ', ಸಹಸ್ರ ಮಕ್ಕಳ ತಾಯಿ ನರಸಮ್ಮ ಅಂಜಿನಪ್ಪ ಇವರು 1500ಕ್ಕೂ ಹೆಚ್ಚಿನ ಜೀವಗಳನ್ನು ಈ ಲೋಕಕ್ಕೆ ಕರೆ ತಂದ ಬಗ್ಗೆ ಲೇಖನ ಮನಕಲಕುವಂತಿತ್ತು. ಕೇಂದ್ರ ಸರ್ಕಾರ ನೀಡಿದ 'ವಯೋಶ್ರೇಷ್ಠ ಸಮ್ಮಾನ್' ಸಹ ಸಮಯೋಚಿತವಾಗಿದೆ. ಈ ಮಹಾನ್ ಜೀವವನ್ನು ನೋಡಿಯಾದರೂ ನಮ್ಮ ಸರ್ಕಾರಿ ಆಸ್ಪತ್ರೆಯ ಧನಪಿಶಾಚಿ ವೈದ್ಯರು ಬಡಬಗ್ಗರಿಗೆ ಉಚಿತ ಹೆರಿಗೆಯನ್ನು ಮಾಡಿ, ತಮ್ಮ ಜೀವನವನ್ನು ಸಾರ್ಥಕಗೊಳಿಸಬೇಕು.
- ಕುತ್ಪಾಡಿ ಜಯಪ್ರಕಾಶ್ ಹೆಗ್ಡೆ, ತೀರ್ಥಹಳ್ಳಿ
ಹೆಂಡ, ಖಂಡಗಳ ಬಗ್ಗೆ ನನ್ನ ಮೆಚ್ಚಿನ ಕನ್ನಡಪ್ರಭದಲ್ಲಿ ಲೇಖನಗಳು ಬಂದಾಗಲೆಲ್ಲ ನನ್ನ ಭಂಡ ವಿರೋಧ ಇದ್ದದ್ದೇ. ಈ ಹಿಂದೆ ಅದ್ಯಾವುದೋ ಊರಿನ ಜಾತ್ರೆಯಲ್ಲಿ ಖಂಡ ತಿಂದು ಹೆಂಡ ಕುಡಿಯುವುದೇ ಹಬ್ಬ ಎಂಬ ಲೇಖನ ಬಂದಾಗ ವಿರೋಧಿಸಿ ಬರೆದಿದ್ದೆ. ನನ್ನ ಪತ್ರಕ್ಕೆ ವಿರೋಧಿಸಿ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಗಾಂಧಿ ಜಯಂತಿಯ ಹಿಂದಿನ ದಿನದ ಪತ್ರಿಕೆಯ ಬೈಟೂ ಕಾಫಿಯಲ್ಲಿ ಮದ್ಯಪ್ರದೇಶ ಎಂಬ ಶೀರ್ಷಿಕೆಯಲ್ಲಿ ಕುಡಿತದ ಊರೊಂದನ್ನು ಪರಿಚಯಿಸಿದ್ದೀರಿ. ಗೋವಾಕ್ಕೆ ಪ್ರವಾಸ ಬಂದಾಗ ಇಲ್ಲಿಯೂ ಬಂದು ಹೆಂಡ ಸೇವಿಸಬಹುದೆಂಬ ಅಭಿಪ್ರಾಯದ ಲೇಖನ ಪ್ರಕಟವಾಗಿದೆ. ಈ ಲೇಖನಕ್ಕೂ ನನ್ನ ವಿರೋಧ ಇದೆ. ಕನ್ನಡಪ್ರಭದಲ್ಲಿ ದುಶ್ಚಟಗಳ ಪರವಾಗಿ ಲೇಖನ ಬೇಡ ಎಂದು ನನ್ನ ಅಭಿಪ್ರಾಯ.
- ಜಿ. ಗೋಪಾಲಕೃಷ್ಣ, ಕಂಪ್ಲಿ
ಸರ್ ನನ್ನ ಕಳಕಳಿಯ ಒಂದು ಪ್ರಶ್ನೆ: ಪ್ರತಾಪಸಿಂಹರು ಬರೆಯುವ ಲೇಖನಗಳನ್ನು ಓದಿ ಒಬ್ಬರಾದರೂ ತಮ್ಮ ರಾಜಕೀಯ ನೀತಿಗಳನ್ನು ಬದಲಾಯಿಸಿಕೊಳ್ಳುತ್ತಾರೆಂದು ನೀವು ನಂಬಿದ್ದೀರಾ?
- ಎನ್.ಆರ್. ತಮ್ಮಯ್ಯ ಶೆಟ್ಟಿ, ಹೊಯ್ಸಳನಗರ, ಅರಸೀಕೆರೆ
ಸಂತೋಷ್ಕುಮಾರ್ ಎಲ್.ಎಂ.ರ 'ನ್ಯಾನೋಕಥೆಗಳು' (ಬೈಟು ಕಾಫಿ-ಅ.2) ಸೆಪ್ಟೆಂಬರ್ನಲ್ಲಿ ಕ.ಪ್ರ.ದ ಬೈಟು ಕಾಫಿಯಲ್ಲಿಯೇ ಆಗಾಗ ಪ್ರಕಟವಾದ ನ್ಯಾನೋ ಕಥೆಗಳ ಪುನರಪಿ ಮುದ್ರಣ!
ಏಕೆ ಹೀಗಾಯ್ತೋ-ಯಾರು ಕಾರಣ?
- ಕೆ. ಶ್ರೀನಿವಾಸರಾವ್, ಹರಪನಹಳ್ಳಿ
ಕಳೆದ ವಾರ ನೀವು ಭಗತ್ಸಿಂಗ್ರವರ ಜಯಂತಿಯನ್ನು ಮರೆತಿದ್ದು ಬಹಳ ನೋವು ತಂದಿದೆ. ಪ್ರತಾಪಸಿಂಹ, ವಿನಾಯಕ ಮೂರೂರು ಅಥವಾ ಚೈತನ್ಯ ಹೆಗಡೆಯವರಿಂದ ಲೇಖನ ನಿರೀಕ್ಷಿಸಿದ್ದೆ. ಕಾರ್ಗಿಲ್ ಕಲಿಗಳನ್ನು ನೆನಪಿಸುವ ನೀವು, ಸ್ವಾತಂತ್ರ್ಯ ಪ್ರೇಮಿ ಭಗತ್ಸಿಂಗ್ ಜಯಂತಿಯನ್ನು ಹೇಗೆ ಮರೆತಿದ್ದೀರಿ ಎಂದು ತಿಳಿಯಲಿಲ್ಲ. ಅಥವಾ ಕಾಂಗ್ರೆಸ್ಸಿಗರ ರೀತಿ ನೀವು ದೇಶ ಭಕ್ತರನ್ನು ಮರೆತಿರಾ?
- ಎಸ್.ಎನ್. ಶೆಟ್ಟಿ, ಬೆಳಗಾವಿ.
ಪ್ರತಿ ಸೋಮವಾರ ಬರುವ ರಾಜಕೀಯ ಪಕ್ಷಗಳ ಬಣ್ಣಗಳನ್ನು ಬಯಲು ಮಾಡುವ 'ಒಳಸುರಳಿ' ಅರ್ಥಪೂರ್ಣವಾಗಿರುತ್ತದೆ. ದಿ. 7ನೇ ಅಕ್ಟೋಬರ್ ನ ಕನ್ನಡಪ್ರಭದಲ್ಲಿ ಪಿ. ತ್ಯಾಗರಾಜ್ ಬರೆದ ಲೇಖನ "ಕಾಂಗ್ರೆಸ್ ಕಂಗೆಡಿಸಿರುವ ಸಿದ್ದು-ಪರಮೇಶ್ವರ ಕದನ" ನಿಜಕ್ಕೂ ಕಾಂಗ್ರೆಸ್ ಪಕ್ಷದವರು ಯೋಚಿಸಬೇಕಾದ ವಿಷಯ.
- ರವಿಕುಮಾರ್ ಜಿ.ಬಿ., ಬೆಂಗಳೂರು, ಮೊ. 944 966 9897
ಆಗಸ್ಟ್ 17ರ ಕೆ.ವಿ. ಪ್ರಭಾಕರ್ ಅವರ ಸ್ವರ ಸೇವೆಯ ಮೂಲಕ ದೇವರನ್ನು ಕುಣಿಸುವ ದೇವಾಡಿಗರು ಉತ್ತಮವಾಗಿ ಮೂಡಿ ಬಂದ ಲೇಖನ. ದೇವಾಡಿಗ, ದೇವಡಿಗ ಈ ಶಬ್ದ ಬಗ್ಗೆ ಪಾ.ವೆಂ. ಆಚಾರ್ಯರು ಇವರ್ಯಾರು, ಇವರು ಎಲ್ಲಿಂದ ಬಂದವರು ಎಂದು ಪ್ರಶ್ನೆ ಹಾಕಿಕೊಂಡು ಸ್ವಲ್ಪ ಉತ್ತರವನ್ನು ಕೊಟ್ಟಿದ್ದಾರೆ. ಪದಾರ್ಥ ಚಿಂತಾಮಣಿ, ಮೊದಲ ಮುದ್ರಣ, ಚರಣ್ ಸಿಂಘ್-ಚರಣ (ಪಾದ), ದೇವಡಿಗ, ದೇವರ ಪಾದ ಸೇವಕ ಎಂದು ನಮೂದಿಸಿದ್ದಾರೆ. ದೇವಡಿಗ ಎಂದರೆ ದೇವರ ಅಡಿಯಾಳು ಎಂದು ನಮೂದಿಸಿದ್ದಾರೆ. ಪದಾರ್ಥ ಚಿಂತಾಮಣಿಯಲ್ಲಿ ನಾನು ಓದಿರುವುದು (ಮೊದಲ ಮುದ್ರಣ). ಶ್ರೀಯುತ ವೆಂಕಟಸುಬ್ಬಯ್ಯನವರು ಕೂಡ ದೇವಾಡಿಗ ತಪ್ಪು, ದೇವಡಿಗ ಸರಿಯಾದ ಪದ ಎಂದು ಇಗೋ ಕನ್ನಡದಲ್ಲಿ ಬರೆದಿದ್ದಾರೆ.
- ಕೋಟ ನರಸಿಂಹ ದೇವಡಿಗ
ಮೈಸೂರು ಸಾಂಸ್ಕೃತಿಕ ನಗರಿ ಎಂದೇ ಗುರುತಿಸಿಕೊಂಡಿದೆ. ವಿಶ್ವವಿದ್ಯಾನಿಲಯ, ಸಂಗೀತ ವಿಶ್ವವಿದ್ಯಾನಿಲಯಗಳು, ನೂರಾರು ಕಾಲೇಜುಗಳು ಇವೆ. ಪ್ರತಿ ನಿತ್ಯ ಹತ್ತಾರು ಕಲೆ-ಸಂಸ್ಕೃತಿ ಕುರಿತಾದ ವೈವಿಧ್ಯಮಯ ಕಾರ್ಯಕ್ರಮಗಳು ಜರುಗುತ್ತಲೇ ಇರುತ್ತವೆ. ನೂರಾರು ಸಾಹಿತಿಗಳು, ಬರಹಗಾರರು ಇಲ್ಲಿ ನೆಲೆಸಿದ್ದಾರೆ. ಇದನ್ನೆಲ್ಲಾ ಗಮನಿಸಿದಾಗ ಕನ್ನಡಪ್ರಭ ಮೈಸೂರಿಗಾಗಿಯೇ ನಾಲ್ಕು-ಪುಟಗಳ ಪುರವಣಿಯೊಂದನ್ನು ಕೊಡಬಹುದಲ್ಲ. ಇಲ್ಲಿನ ಸುದ್ದಿಯ ಜೊತೆಗೆ ಸ್ಥಳೀಯ ಬರಹಗಾರರಿಗೆ ಆದ್ಯತೆ ನೀಡುವಂತಹ ಪುರವಣಿ ಶೀಘ್ರವೇ ಬರಲಿ. ಈ ನಿಟ್ಟಿನಲ್ಲಿ ಕನ್ನಡಪ್ರಭ ಚಿಂತಿಸಲಿ. ಮೈಸೂರಿನ ಜನತೆ ಇದಕ್ಕೆ ಖಂಡಿತವಾಗಿಯೂ ಸ್ಪಂದಿಸಿ ಸ್ವಾಗತಿಸುತ್ತಾರೆ.
- ನವಲೂರು ಪ್ರಕಾಶ್, 526, ಅನಿಕೇತನ ರಸ್ತೆ, ಕುವೆಂಪುನಗರ, ಮೈಸೂರು.
ನಿಮ್ಮ ಅನಿಸಿಕೆಗಳನ್ನು ಗೋಡೆಗೆ ಛಾಪಿಸಲು: anisikeprabha@gmail.com
ಗೋಡೆಬರಹ ವಿಭಾಗ, ಕನ್ನಡಪ್ರಭ, ಎಕ್ಸ್ಪ್ರೆಸ್ ಕಟ್ಟಡ, ನಂ.1, ಕ್ವೀನ್ಸ್ ರಸ್ತೆ, ಬೆಂಗಳೂರು -1.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

