ಮತ್ತೆ ಪೆಪ್ಪರ್ಮಿಂಟ್ ಚಪ್ಪರಿಸುವ ಮನಸು
ಆರೋಗ್ಯಪೂರ್ಣ ದೇಹಕ್ಕೆ ಪೂರಕವಾದ ಮಸಾಲೆಯ ಮೆಣಸು (Peppe) ಹಾಗೂ ಪುದೀನಾ (Mint) ಗಳ ಹೆಸರು ಹೊತ್ತು ಮಕ್ಕಳ ಮನಕ್ಕೆ ಮುದ ನೀಡುವ ಅವರ ಮನೋವಿಕಾಸಕ್ಕೆ ಪೂರಕವಾದ ಪೆಪ್ಪರ್ಮಿಂಟ್ ಅಂಕಣ ಬೈಟು ಕಾಫಿಯ ಭಾಗವಾಗಿ 15 ದಿನಕ್ಕೊಮ್ಮೆ ಬರುತ್ತಿತ್ತು. ಅದರಲ್ಲಿ ಮಕ್ಕಳ ಬರಹಗಳು, ಮಕ್ಕಳ ಮೆದುಳಿಗೆ ಕಸರತ್ತು ನೀಡುವ ಲೇಖನಗಳು ಪ್ರಕಟವಾಗುವ ಮೂಲಕ ಮನೆಯ ಮಕ್ಕಳೊಂದಿಗೆ ಅವರ ಪಾಲಕರು ಕೂಡ ಖುಷಿಪಡುವಂತಾಗಿತ್ತು. ಆದರೆ ಇತ್ತೀಚಿಗೆ ಬೈಟು ಕಾಫಿ ಪುರವಣಿ ವಾರ್ಷಿಕೋತ್ಸವದ ನಂತರ ಪೆಪ್ಪರ್ಮಿಂಟ್ ಅಂಕಣ ಕಣ್ಮರೆಯಾಗಿದೆ. ಮಕ್ಕಳ ಬುದ್ಧಿಗೆ ಬಲ ನೀಡುವ, ಅವರ ತರ್ಕದ ಶಕ್ತಿ ಬೆಳೆಸುವ ಪೆಪ್ಪರ್ಮಿಂಟ್ ಅಂಕಣವನ್ನು ಪ್ರತಿ ಶನಿವಾರ ಪ್ರಕಟಿಸಲು ಕ್ರಮ ಜರುಗಿಸಲು ಈ ಮೂಲಕ ಕೋರುತ್ತೇನೆ.
-ಬಸವರಾಜ ಹುಡೇದಗಡ್ಡಿ, ನಂದಿನಿ ಬಡಾವಣೆ,
ಬೆಂಗಳೂರು, ಮೊ. 99160 56303
ಯಾಕ್ ಸ್ವಾಮಿ ಅ.2ರ ಕಸರಸದಲ್ಲಿ ವಿರೋಧಾಭಾಸವಾಗಿ ಸೇಬಿನ ಬಗ್ಗೆ ಬರೆದಿದ್ದೀರಿ. ಅಲ್ಯೂಮಿನಿಯಂ ಪಾತ್ರೆ ಜಿಡ್ಡು ಹೋಗುತ್ತಿಲ್ಲವೇ? ಆ ಪಾತ್ರೆಗೆ ಸೇಬಿನ ಸಿಪ್ಪೆ ಹಾಕಿ ನೀರು ಸುರಿದು ಅರ್ಧ ತಾಸು ಕಾಯಿರಿ. ಆನಂತರ ತೊಳೆಯಿರಿ. ಇದು ನಿಮ್ಮ ದೃಷ್ಟಿಯಲ್ಲಿ ಕಸಕ್ಕೆ ಸಮನಾದ ಸೇಬು. ಅಲ್ಯೂಮಿನಿಯಂ ಪಾತ್ರೆ ಈ ಕಾಲದಲ್ಲಿ ಯಾರು ಉಪಯೋಗಿಸುತ್ತಾರೆ ಹೇಳಿ. ಆಯ್ತು ಬಡವರು, ರೈತರು, ಬಯಲಲ್ಲಿ ಠಿಕಾಣಿ ಹೂಡುವ ಅಲೆಮಾರಿಗಳು ಇವರು ತಾನೆ ಅಲ್ಯೂಮಿನಿಯಂ ಬಳಸೋದು. ನ್ಯಾಯಬೆಲೆ ಅಂಗಡಿ ಮುಂದೆ ಅನ್ನಭಾಗ್ಯಕ್ಕೆ ಕೈಯೊಡ್ಡುವ ಬಡವರು ಸೇಬು ತಿನ್ನೋ ಅಷ್ಟು ಶ್ರೀಮಂತರ ಸ್ವಾಮಿ? ತಲೆ ತುಂಬಾ ಮೈ ತುಂಬ ಅರ್ಧ ಕೆಜಿ ಹರಳೆಣ್ಣೆ ಹಚ್ಚಿ ಮೈಸೋಪು ಬಟ್ಟೆ ಸ್ವಲ್ಪವೇ ಉಪಯೋಗಿಸಿ ಮೈ ಮೇಲಿನ ಅಷ್ಟೂ ಹರಳೆಣ್ಣೆ ಜಿಡ್ಡನ್ನು ಕ್ಷಣಮಾತ್ರದಲ್ಲಿ ಇಲ್ಲವಾಗಿಸಬಹುದಾದಷ್ಟು ಸ್ಟ್ರಾಂಗ್ ಆಗಿವೆ ಇಂದಿನ ಸೋಪುಗಳು. ಬೇಡ ಪಾತ್ರೆ ತೊಳೆಯಲು ಸೋಪಿಲ್ಲವಾ? ಸೀಗೇಪುಡಿ ಹಾಕಿ ಕಾಯಿ ಜುಂಗಿನಲ್ಲಿ ನಾಲ್ಕು ಬಾರಿ ಉಜ್ಜಿದರೆ ಮುಗೀತು ನಿಮ್ಮ ಜಿಡ್ಡಿನ ಕಥೆ. ಅಲ್ಲ ಸ್ವಾಮಿ ಬೆಲೆ ಬಾಳುವ ಸೇಬಿನ ಮೇಲ್ಭಾಗ ಗುಂಡಿಯಂತೆ ಮಾಡಿ ಅದಕ್ಕೆ ಕ್ಯಾಂಡಲ್ ಸಿಕ್ಕಿಸಿ ಆ್ಯಪಲ್ ಸ್ಟಾಚ್ಮಾಡಲು ಹೇಳುತ್ತೀರಲ್ಲ. ಇದು ಶ್ರೀಮಂತರಿಗೆ ನಿಮ್ಮ ಕಸದಿಂದ ರಸದ ಮಾರ್ಗ ದರ್ಶನವಾ?
-ಜಾವಗಲ್ ಕೃಷ್ಣಶರ್ಮ
ದಿ. 11.10.2013ರ ಕ.ಪ್ರ.ದಲ್ಲಿ ಸಚಿನ್ ಸಂಪನ್ನ ಸಚಿತ್ರ ಮುಖಪುಟ ಲೇಖನ ತುಂಬಾ ಇಷ್ಟವಾಯಿತು. ಅಲ್ಲದೇ ಪುಟ 11ರಲ್ಲಿ 'ದೇವರ ಹೆಜ್ಜೆ ಗುರುತು' ಲೇಖನ ನಿಜಕ್ಕೂ ಸಂದರ್ಭೋಚಿತ ಹಾಗೂ ಔಚಿತ್ಯ ಪೂರ್ಣವಾಗಿದ್ದು ಈ ಎರಡೂ ಲೇಖನಗಳು ಸಂಗ್ರಹ ಯೋಗ್ಯವಾಗಿವೆ.
-ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ,
ಮೊ. 94491-30531
ಪ್ರತಿ ಶನಿವಾರ ಬೈಟು ಕಾಫಿ ಪುರವಣಿಯಲ್ಲಿ ನಿಶ್ಯಬ್ದ ಅಂಕಣದಲ್ಲಿ ಪ್ರಕಟವಾಗುತ್ತಿರುವ ಅಶ್ವತ್ಥ್ ನಾರಾಯಣ್ ಎಲ್.ರವರ ಲೇಖನಗಳು ಕುತೂಹಲದಿಂದ ಓದಿಸಿಕೊಳ್ಳುತ್ತಿದ್ದು ಅಂಕಣ ನಿಶ್ಯಬ್ದವಾದರೂ ಲೇಖನಗಳು ಶಬ್ದ ಮಾಡುತ್ತಿವೆ. ಪ್ರತಿಯೊಂದು ಘಟನೆಯು ವಿಭಿನ್ನ, ವಿನೂತನವಾಗಿದ್ದು ನೈಜತೆ ಅಡಗಿದೆ.
-ವಿ. ಹೇಮಂತಕುಮಾರ್, ಜೆ.ಪಿ.ನಗರ, ಬೆಂಗಳೂರು, ಮೊ. 9035 992900
ತಾ. 12.10.ರ ಕ.ಪ್ರ.ದಲ್ಲಿ ಪ್ರಕಟವಾದ ಚಂದ್ರ ಬಾರ್ಕೂರರವರ 'ಆಚರಣೆಗೂ ಶೋಷಣೆಗೂ ವ್ಯತ್ಯಾಸವಿಲ್ಲವೇ?' ಪ್ರತಿ ವಾದ ಲೇಖನ ಸಕಾಲಿಕವಾಗಿದೆ. ಅವರ ಅಭಿಪ್ರಾಯಕ್ಕೆ ನನ್ನ ಕೆಲವು ಪೂರಕ ಅಂಶಗಳು. ಅದೇ ದಿನ ಪತ್ರಿಕೆಯಲ್ಲಿ ಪುಟ 10ರಲ್ಲಿ ಅಚ್ಚರಿಯಲ್ಲಿ ಹೆಂಡತಿಯನ್ನು ಹೊತ್ತುಕೊಂಡು ಹೋಗುವ ಸ್ಪರ್ಧೆಯೂ ಮಾನವ ಹಕ್ಕು ಉಲ್ಲಂಘನೆಯಲ್ಲವೇ? ವಿದೇಶದಲ್ಲಿ ನಡೆಯುವುದಾದರೂ ಭಾರತದಲ್ಲಿ ಕೆಲವೆಡೆ ನಡೆಯುತ್ತಿದೆಯಲ್ಲ?
-ಎಸ್.ಎ. ಭಟ್ ಕೆಕ್ಕಾರ್. 581338
ಕುಮಟ (ಉ.ಕ.) ಮೊ. 9483 809197
ದಿ. 8.10.13 ಪುಟ 6ರಲ್ಲಿ ಕೆ.ಎಸ್. ಜಗನ್ನಾಥ್ ಅವರ ಲೇಖನ ದ್ರಾವಿಡ್ ಇನ್ನು ಆಡಲ್ಲ, ನೆನಪು ಕಾಡದೆ ಬಿಡಲ್ಲ! ಬಗ್ಗೆ ಮನೋಜ್ಞವಾಗಿತ್ತು. ಕ್ರಿಕೆಟ್ ಹುಟ್ಟಿ ಈಗಾಗಲೇ ಶತಮಾನ ಕಳೆದಿದೆ. ಸಹಸ್ರ-ಸಹಸ್ರ ಕ್ರಿಕೆಟ್ ಆಟಗಾರರು ಭಾರತದಲ್ಲೇ ಅಲ್ಲದೇ ಇಡೀ ವಿಶ್ವ ಕ್ರಿಕೆಟ್ನಲ್ಲಿ ಆಡಿದ್ದಾರೆ. ಆದರೆ ಭಾರತದ ಕ್ರಿಕೆಟ್ನಲ್ಲಿ ರಾಹುಲ್ ದ್ರಾವಿಡ್ ಮಾತ್ರ ಅಜರಾಮರವಾಗಿದ್ದಾರೆ.
-ಕುರೂಡಿ ರಾಘವೇಂದ್ರ, ಟುಡಾ ಬಡಾವಣೆ,
ಶೆಟ್ಟಿಹಳ್ಳಿ ರಿಂಗ್ ರಸ್ತೆ, ತುಮಕೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

