ಬೆಂಗಳೂರು ವಿ.ವಿ.ಯಲ್ಲಿ ನಿಲ್ಲದ ಎಡವಟ್ಟುಗಳು
ಆತನ ಹೆಸರು ವಿನಯ್ ಮದಕವಿ, ಬೆಂಗಳೂರು ವಿಶ್ವವಿದ್ಯಾಲಯದ ಬಿ.ಕಾಂ ವಿದ್ಯಾರ್ಥಿ. 2012 ರ ಫೆಬ್ರವರಿಯಲ್ಲಿ ಎರಡನೆಯ ಸೆಮಿಸ್ಟರ್ ಪರೀಕ್ಷೆ ಬರೆದಿದ್ದ. 2012 ರ ಜೂನ್ 7 ರಂದು ಫಲಿತಾಂಶ ಪ್ರಕಟವಾದಾಗ ವಿನಯ್ಗೆ ಆಘಾತವೇ ಕಾದಿತ್ತು. ಏಕೆಂದರೆ ಒಂದು ವಿಷಯಕ್ಕೆ ಗೈರು ಹಾಜರೆಂದು ಫಲಿತಾಂಶ ಪಟ್ಟಿಯಲ್ಲಿ ನಮೂದಾಗಿತ್ತು. ಕುಲಸಚಿವರಿಗೆ ದೂರು ನೀಡಿದ ಎರಡು ವರ್ಷಗಳ ನಂತರ ಸಿಂಡಿಕೇಟ್ ಸಭೆ ಸರಾಸರಿ ಅಂಕ ನೀಡಲು ನಿರ್ಧರಿಸಿತು. ಕಾರಣವಿಷ್ಟೆ, ಆತ ಬರೆದಿದ್ದ ಉತ್ತರ ಪತ್ರಿಕೆಯೇ ಕಣ್ಮರೆಯಾಗಿತ್ತು. ವಿಶೇಷವೆಂದರೆ ವಿದ್ಯಾರ್ಥಿ ಅಥವಾ ಕಾಲೇಜಿನಿಂದ ಯಾವುದೇ ಎಡವಟ್ಟಾಗಿರಲಿಲ್ಲ. (ಇದನ್ನು ವಿ.ವಿ ಯೇ ಹೇಳಿದೆ). ಹಾಗಾದರೆ ತಪ್ಪು ಸಂಭವಿಸಿದ್ದಾದರೂ ಎಲ್ಲಿ? ಈ ರೀತಿಯ ಎಡವಟ್ಟುಗಳು ನಮ್ಮ ವಿ.ವಿ.ಗೆ ಹೊಸತೇನೂ ಅಲ್ಲ.
2012-13 ನೇ ಸಾಲಿನ ಪರೀಕ್ಷಾ ಫಲಿತಾಂಶಗಳು ಹೊರಬಿದ್ದಾಗ ಬಹುತೇಕ ಬಿ.ಕಾಂ ವಿದ್ಯಾರ್ಥಿಗಳಿಗೆ ಆಕಾಶವೇ ಕಳಚಿ ಬಿದ್ದಂತಾಗಿತ್ತು. ಕಾರಣ ಕೆಲ ಕಾಲೇಜುಗಳ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡದೆಯೇ ಫಲಿತಾಂಶ ಪ್ರಕಟಿಸಿದ್ದರು. ಈ ರೀತಿಯ ಘಟನೆಗೆ ಇಂಬು ನೀಡುವ ಉದಾಹರಣೆ 2012 ರ ನವೆಂಬರ್ನಲ್ಲಿ 11ಶ್ರೀಶ್ರೀಆ40ಶ್ರೀ34, 11ಶ್ರೀಶ್ರೀಆ40ಶ್ರೀ38, 11ಶ್ರೀಶ್ರೀಆ40ಶ್ರೀ42, 11ಶ್ರೀಶ್ರೀಆ40ಶ್ರೀ46, 11ಶ್ರೀಶ್ರೀಆ40ಶ್ರೀ50 ದಾಖಲಾತಿ ಸಂಖ್ಯೆಯ ಐದು ವಿದ್ಯಾರ್ಥಿನಿಯರು ಪರಿಸರ ಅಧ್ಯಯನ ಎಂಬ ಕಡ್ಡಾಯ ಪತ್ರಿಕೆಯ ಪರೀಕ್ಷೆ ಬರೆದಿದ್ದರು. ಕ್ರಮವಾಗಿ 34, 25, 34, 32, 34 ಅಂಕ ಪಡೆದು ಅನುತ್ತೀರ್ಣರಾಗಿದ್ದರು. ಆದರೆ ಮತ್ತೆ ಇದೇ ಪತ್ರಿಕೆಯ ಪರೀಕ್ಷೆಯನ್ನು 2013 ರ ನವೆಂಬರ್ನಲ್ಲಿ ಬರೆದರು. ಅದರ ಫಲಿತಾಂಶ ಬಂದಾಗ ಆದ ಅಚ್ಚರಿಯೆಂದರೆ, ಈ ಹಿಂದೆ ಬಂದಿದ್ದ ಅಷ್ಟೇ ಅಂಕಗಳು ಪುನಃ ಬಂದಿರುವುದು. ನಮ್ಮ ಐವರಲ್ಲಿ ಒಬ್ಬರದ್ದಾದರೂ ಒಂದು ಅಂಕವಾದರೂ ಏರು ಪೇರಾಗಿರಬೇಕಿತ್ತಲ್ಲವೇ ಎಂದು ಸಂಶಯಿಸುತ್ತಾರೆ. ಅಚ್ಚರಿಯ ವಿಷಯವೆಂದರೆ ಈ ಪತ್ರಿಕೆಯ ಓ.ಎಂ.ಆರ್ ನೆರಳಚ್ಚು ಪ್ರತಿ ಪಡೆಯಲಾಗಲಿ ಅಥವಾ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲಾಗಲಿ ಅವಕಾಶವೇ ಇಲ್ಲ. (ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿದ್ದಂತೆ ಪರೀಕ್ಷಾ ಕೊಠಡಿಯಿಂದಲೇ ಓ.ಎಂ.ಆರ್ನ ನಕಲು ಪ್ರತಿ ಒಯ್ಯಲೂ ಅವಕಾಶವಿಲ್ಲ).
ಸದ್ಯ 2013-14 ನೇ ಸಾಲಿನ ಮೊದಲ, ದ್ವಿತೀಯ ಮತ್ತು ಐದನೇ ಸೆಮಿಸ್ಟರ್ ಫಲಿತಾಂಶಗಳು ಹೊರಬಿದ್ದಿವೆ. ಈ ಬಾರಿಯೂ ಸಂಭವಿಸಿರುವ ಎಡವಟ್ಟುಗಳ ಸಂಖ್ಯೆಯೇನು ಕಡಿಮೆಯಿಲ್ಲ. ಬಿ.ಎ ಮತ್ತು ಬಿ.ಎಸ್ಸಿಯ ಅಂತಿಮ ವರ್ಷದಲ್ಲಿ ಒಂದೇ ವಿಷಯದ ಎರಡು ಪತ್ರಿಕೆಗಳಿರುತ್ತವೆ. ಕೆಲ ವಿದ್ಯಾರ್ಥಿಗಳು ಒಂದು ಪತ್ರಿಕೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದರೆ, ಮತ್ತೊಂದು ಪತ್ರಿಕೆಯಲ್ಲಿ ಇಪ್ಪತ್ತರ ಆಸು ಪಾಸಿನಲ್ಲಿ ಅನುತ್ತೀರ್ಣರಾಗಿದ್ದಾರೆ. ದ್ವಿತೀಯ ಸೆಮಿಸ್ಟರ್ ಬಿ.ಕಾಂ ನಲ್ಲಿ ಓದುತ್ತಿರುವ ದಾಖಲಾತಿ ಸಂ 3ಶ್ರೀಶ್ರೀಈ31ಶ್ರೀ41 ಹೊಂದಿರುವ ವಿದ್ಯಾರ್ಥಿನಿಯೊಬ್ಬಳು ಪ್ರಥಮ ಸೆಮಿಸ್ಟರ್ ಫಲಿತಾಂಶ ಪಡೆದಿದ್ದು ಕನ್ನಡ, ಇಂಗ್ಲಿಷ್, ಆರ್ಗನೈಸೇಷನಲ್ ಮ್ಯಾನೇಜ್ಮೆಂಟ್, ಎಂ,ಬಿ,ಸಿ,ಎ ಮತ್ತು ಸಿ,ಎ ವಿಷಯಗಳಲ್ಲಿ ಕ್ರಮವಾಗಿ 83, 54, 90, 75 ಮತ್ತು 60 ಅಂಕಗಳನ್ನು ಪಡೆದಿದ್ದು ಎ,ಎಫ್,ಎ ವಿಷಯದಲ್ಲಿ ಕೇವಲ 16 ಅಂಕಗಳೊಂದಿಗೆ ಅನುತ್ತೀರ್ಣಳಾಗಿದ್ದಾಳೆ. ಆದರೆ ವಿದ್ಯಾರ್ಥಿನಿ ನಾನು ಉತ್ತಮವಾಗಿಯೇ ಬರೆದಿದ್ದೇನೆ ಆದರೆ ಮೌಲ್ಯಮಾಪನ ಸರಿಯಾಗಿ ಮಾಡಿದಂತೆ ಕಾಣುತ್ತಿಲ್ಲ ಎಂದು ಸಂಶಯಿಸುತ್ತಾಳೆ. ಹಾಗೆಯೇ ಯೋಚಿಸಿ ನೋಡಿ 80, 90 ಅಂಕಗಳನ್ನು ಪಡೆದ ವಿದ್ಯಾರ್ಥಿನಿ ಒಂದರಲ್ಲಿ ಕೇವಲ 16 ಗಳಿಸುತ್ತಾಳೆ ಎಂದರೆ? ಇಷ್ಟು ಕಡಿಮೆ ಅಂಕಗಳು ಬರಬಾರದೆಂದೇನಲ್ಲ, ಆದರೆ ಉತ್ತಮವಾಗಿ ಬರೆದಿರುವವರಿಗೆ ಹೀಗಾದರೆ ಅವರ ಮನಸ್ಥಿತಿ ಹೇಗಾಗಬೇಡ?
ಎಲ್ಲಾ ಸಂದರ್ಭಗಳಲ್ಲೂ ಮರು ಮೌಲ್ಯಮಾಪನಕ್ಕೆ ಮನವಿ ಸಲ್ಲಿಸಲು ಅವಕಾಶವುಂಟು. ಆದರೆ ವಿದ್ಯಾರ್ಥಿಗಳ ಬಹು ದೊಡ್ಡ ಸಮಸ್ಯೆ ಹಣಕಾಸಿನದ್ದು. ಮೊದಲು ಉತ್ತರ ಪತ್ರಿಕೆಯ ನೆರಳಚ್ಚು ಪ್ರತಿಗೆ ಅರ್ಜಿ ಸಲ್ಲಿಸಬೇಕು. (ಇದನ್ನು ವಿದ್ಯಾರ್ಥಿ ನೀಡುವ ಇ-ಮೇಲ್ ವಿಳಾಸಕ್ಕೆ ಕಳಿಸುತ್ತಾರೆ. ಆದರೆ ಬಹುತೇಕರಿಗೆ ಕಳಿಸಿರುವುದೇ ಇಲ್ಲ.) ನಂತರ ಮರುಮೌಲ್ಯಮಾಪನಕ್ಕೆ ಅರ್ಜಿ. ಎರಡರ ವೆಚ್ಚ ಸೇರಿ ಸುಮಾರು 1200 ಚಿಲ್ಲರೆ ರು.ಗಳಾಗುತ್ತವೆ. ಅಲ್ಲದೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕಾಲೇಜಿಗೆ ರಜೆ ಹಾಕಿ ಎರಡೆರಡು ಬಾರಿ ಬೆಂಗಳೂರು ಒನ್ ಸೆಂಟರ್ಗೆ ಅಲೆದಾಡಬೇಕು. ಈ ಪ್ರಕ್ರಿಯೆಯಲ್ಲಿ ಬಹುತೇಕರು ಹತ್ತರಿಂದ ಇಪ್ಪತ್ತು ಹೆಚ್ಚವರಿ ಅಂಕಗಳನ್ನು ಪಡೆದು ಉತ್ತೀರ್ಣರೂ ಆಗುತ್ತಾರೆ. ಅಂತಹ ವಿದ್ಯಾರ್ಥಿಗಳ ಮರು ಮೌಲ್ಯಮಾಪನ ಶುಲ್ಕವನ್ನು ವಿ.ವಿ.ಯು ಹಿಂದಿರುಗಿಸಬೇಕೆಂಬ ನಿಯಮವಿದೆ. ಆದರೆ ಹಿಂದಿರುಗಿಸಿದ ಉದಾಹರಣೆಗಳು ಸಿಗಲಿಕ್ಕಿಲ್ಲ.
ಇದೇ ಮೇ ಎಂಟರಿಂದ ಪುನಃ 2, 4 ಮತ್ತು 6 ನೆಯ ಸೆಮಿಸ್ಟರ್ ಪರೀಕ್ಷೆಗಳು ಪ್ರಾರಂಭವಾಗಲಿವೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇಂತಹ ತಪ್ಪುಗಳಾಗದಂತೆ ಸಂಬಂದಿಸಿದ ಎಲ್ಲರೂ ಎಚ್ಚರವಹಿಸಲೇಬೇಕಾದ ಅನಿವಾರ್ಯತೆಯಿದೆ.
= ಶ್ರೀನಿವಾಸಮೂರ್ತಿ. ಎನ್, ಸುಂಡ್ರಹಳ್ಳಿ, ಶಿಡ್ಲಘಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

