ಮೌಢ್ಯದ ಪ್ರವರ್ತಕ ಬೆನ್ನಿ ನಿಜಸ್ವರೂಪ

ಜನವರಿ 15 ರಿಂದ 19ರ ವರೆಗೆ ಅಮೆರಿಕದ ಕ್ರೈಸ್ತ ಪ್ರಚಾರಕ ಬೆನ್ನಿಹಿನ್ ಬೆಂಗಳೂರಿನ ಯಲಹಂಕದ ಸೂಪರ್ನೋವಾ ಅರೇನಾದಲ್ಲಿ ಕಾನೂನುಬಾಹಿರವಾಗಿ ಪ್ರಾರ್ಥನಾ ಸಭೆಯನ್ನು ನಡೆಸಲಿದ್ದಾ. ಬೆನ್ನಿಹಿನ್ ರೋಗಗಳನ್ನು ಗುಣಪಡಿಸುವ ನಾಟಕವಾಡಿ, ಜನರನ್ನು ಕ್ರೈಸ್ತ ಮತಕ್ಕೆ ಮತಾಂತರವಾಗುವುದಕ್ಕೆ ಪ್ರಚೋದನೆ ನೀಡುತ್ತಿರುವುದು ಜಗಜ್ಜಾಹಿರಾಗಿದೆ. ಇವನ ಸ್ಪರ್ಷಮಾತ್ರದಿಂದ ಅನೇಕ ವರ್ಷಗಳ ಕಾಲ ಕ್ಯಾನ್ಸರ್ನಿಂದ ಬಳಲುತ್ತಿರುವವರು ಇದ್ದಕ್ಕಿದ್ದಂತೆ ಕ್ಯಾನ್ಸರ್ ಮುಕ್ತರಾಗುತ್ತಾರೆ, ಕಿವುಡರಾದವರಿಗೆ ಇದ್ದಕ್ಕಿದ್ದಂತೆ ಕಿವಿ ಕೇಳುತ್ತದೆ. ಮಾತು ಬಾರದವನು ಮಾತಾಡತೊಡಗುತ್ತಾನೆ ಇತ್ಯಾದಿ. ಈ ರೀತಿಯ ಪೂರ್ವಯೋಜಿತ ಕಾರ್ಯಕ್ರಮಗಳ ಮೂಲಕ ಪವಾಡದ ನಾಟಕವಾಡಿ ಜನರನ್ನು ಮೋಸ ಮಾಡುವುದೇ ಬೆನ್ನಿಹಿನ್ನ ಮುಖ್ಯ ಕೆಲಸ.
ಬೆನ್ನಿಹಿನ್ ಭಾರತಕ್ಕೆ ಪ್ರವಾಸಿ ವೀಸಾದಲ್ಲಿ ಬರುತ್ತಿದ್ದಾನೆ. ಭಾರತದ ಸಂವಿಧಾನ ಮತ್ತು ಕಾನೂನು ಪ್ರಕಾರ ಪ್ರವಾಸೀ ವೀಸಾದಲ್ಲಿ ಆಗಮಿಸುವ ವ್ಯಕ್ತಿ ದೇಶದಲ್ಲಿ ಯಾವುದೇ ಸಭೆಗಳಲ್ಲಿ ಭಾಷಣ ಮಾಡುವುದು, ಉಪದೇಶ ನೀಡುವುದು ಕಾನೂನುಬಾಹಿರವಾಗಿದೆ. 2005 ರಲ್ಲಿ ಧರ್ಮಸಿಂಗ್ ಸರ್ಕಾರ ಕಾನೂನನ್ನು ಗಾಳಿಗೆ ತೂರಿ ಬೆನ್ನಿಹಿನ್ಗೆ ಅವಕಾಶ ಕಲ್ಪಿಸಿಕೊಟ್ಟಿತ್ತು. ಆ ಸಂದರ್ಭದಲ್ಲಿ ಆತನ ವಿರುದ್ಧ ಉಚ್ಚನ್ಯಾಯಲಯದಲ್ಲಿ 5 ಪ್ರಕರಣಗಳು ದಾಖಲಾಗಿದ್ದವು. ಅಷ್ಟೇ ಅಲ್ಲದೆ ಸಾರ್ವಜನಿಕರ ಆಕ್ರೋಶದಿಂದಾಗಿ 100 ಕ್ಕೂ ಅಧಿಕ ಬಿಎಂಟಿಸಿ ಬಸ್ಗಳು ಹಾನಿಗೊಳಗಾಗಿದ್ದವು. ಈ ಬಾರಿ ಪುನಃ ಅವಕಾಶ ನೀಡಿದ್ದು ಸಮಾಜದಲ್ಲಿ ಶಾಂತಿಯನ್ನು ಕೆಡಿಸುವ ಪ್ರಯತ್ನವಾಗಿದೆ.
2005ರಲ್ಲಿ ಬೆನ್ನಿಹಿನ್ ಬೆಂಗಳೂರಿಗೆ ಬಂದಿದ್ದಾಗ ಆ ಪ್ರಾರ್ಥನಾ ಸಭೆಯ ಕರಪತ್ರ ಹೀಗಿತ್ತು "ಎಲ್ಲ ವಿಧವಾದ ವಿಗ್ರಹಾರಾಧನೆ, ವ್ಯಭಿಚಾರ, ಮಾಟ-ಮಂತ್ರ ಮತ್ತು ಒಡಕುತನದ ಆತ್ಮಗಳನ್ನು ಕಟ್ಟಿಹಾಕಿರಿ. ಏಸು ಸ್ವಾಮಿಯನ್ನು ಸ್ವೀಕರಿಸುವುದಕ್ಕಾಗಿ ಪ್ರಾರ್ಥಿಸಿರಿ". ಈ ರೀತಿ ಹಿಂದು ಧರ್ಮದ ಮುರ್ತಿಪೂಜೆ, ದೇವತೆಗಳನ್ನು ಬಹಿರಂಗವಾಗಿ ಅಪಮಾನವನ್ನು ಮಾಡಿ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡಲಾಗಿತ್ತು.
ಒಂದುಕಡೆ ಸರ್ಕಾರ "ಮೂಢನಂಬಿಕೆ ಪ್ರತಿಬಂಧಕ" ಕಾನೂನನ್ನು ತರಲು ಪ್ರಯತ್ನಿಸುತ್ತಿದೆ. ಮತ್ತೊಂದು ಕಡೆ "ಮೌಢ್ಯದ ಪರಮಾವಧಿ" ಪ್ರದರ್ಶಿಸುವ ಬೆನ್ನಿಹಿನ್ಗೆ ಕಾರ್ಯಕ್ರಮವನ್ನು ನಡೆಸಲು ಅನುಮತಿ ನೀಡುತ್ತಿದೆ!
ಪ್ರಖ್ಯಾತ ಔ್ಟಡ ಆಟ್ಜಿಜಟಜಡ ಖ್ಝಿಟಜಡನಡೆಸಿದ ತನಿಖೆಗಳ ಪ್ರಕಾರ ಬೆನ್ನಿಹಿನ್ ಪ್ರಾರ್ಥನೆಯಿಂದ ಯಾರೂ ಗುಣಮುಖರಾಗಿಲ್ಲ. ಅಲ್ಲದೆ, 2001 ರಲ್ಲಿ ಹೆಚ್ಬಿಓ ಚಾನೆಲ್ನಲ್ಲಿ ಪ್ರಸಾರವಾದ ಸಾಕ್ಷ್ಯ ಚಿತ್ರವೊಂದರಲ್ಲಿ ಬೆನ್ನಿಹಿನ್ ಗುಣಪಡಿಸಿದ 76 ವ್ಯಕ್ತಿಗಳನ್ನು ನಂತರ ಭೇಟಿ ಮಾಡಿ ವಿಚಾರಿಸಲಾಯಿತು. ಆದರೆ 76 ಪ್ರಕರಣಗಳ ಪೈಕಿ ಒಬ್ಬರಿಗೂ ಈತನ ಪ್ರಾರ್ಥನೆಯಿಂದ ಖಾಯಿಲೆ ಗುಣವಾಗಿಲ್ಲ ಎನ್ನುವುದು ತಿಳಿಯಿತು. 2004 ರಲ್ಲಿ ಸಿಬಿಸಿ ಟೆಲಿವಿಷನ್ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಕಂಡುಬಂದ ಆಂಶವೆಂದರೆ, ಬೆನ್ನಿಹಿನ್ ಪ್ರಾರ್ಥನಾ ಸಭೆಗಳಲ್ಲಿ ನಿಜವಾಗಿಯೂ ತೊಂದರೆ ಇರುವವರಿಗೆ ವೇದಿಕೆಗೆ ಹೋಗಲು ಅವಕಾಶ ನೀಡುವುದಿಲ್ಲ ಎನ್ನುವುದು. ಒಮ್ಮೆ ಒಬ್ಬ ಮಹಿಳೆ ತನ್ನ ರೋಗಗ್ರಸ್ಥ ಮಗುವನ್ನು ವೇದಿಕೆಗೆ ಕರೆದುಕೊಂಡು ಹೊಗಲು ಪ್ರಯತ್ನಿಸಿದಾಗ, ಬೆನ್ನಿ ಹಿನ್ ಬೆಂಬಲಿಗರು ಆಕೆಯ ಕಣ್ಣುಗಳಿಗೆ ಸ್ಪ್ರೇ ಮಾಡಿ ಆಕೆಯನ್ನು ವಾಪಸ್ ಕಳುಹಿಸಿದ್ದರು! ಇದು ಬೆನ್ನಿಹಿನ್ನ ನಿಜ ಸ್ವರೂಪ.
ಬೆನ್ನಿಹಿನ್ನ ಪವಾಡಗಳು ಸುಳ್ಳು ಎನ್ನುವುದಕ್ಕೆ ಕೆಲವು ಉದಾಹರಣೆಗಳು ಇಲ್ಲಿವೆ:
1. ಮೆದುಳಿನ ಖಾಯಿಲೆಯಿಂದ ಬಳಲುತ್ತಿದ್ದ ರೋಗಿಯನ್ನು ಗುಣಪಡಿಸಿದ್ದಾಗಿ ಈತ ಹೇಳಿಕೊಂಡಿದ್ದ. ನಂತರ "ಇನ್ಸೈಡ್ ಎಡಿಷನ್" ಪತ್ರಿಕೆಯ ವರದಿಗಾರರು ತನಿಖೆ ಮಾಡಿದಾಗ ಆ ರೋಗಿಗೆ ಖಾಯಿಲೆ ಗುಣಮುಖವಾಗಿಲ್ಲ ಎನ್ನುವುದು ತಿಳಿಯಿತು.
2. ಕಿವುಡಿಯೊಬ್ಬಳನ್ನು ಸ್ಪರ್ಷಮಾತ್ರದಿಂದಲೇ ಗುಣಪಡಿಸಿದೆ ಎಂದು ಈತ ಹೇಳಿಕೊಂಡು ಅಡ್ಡಾಡಿದ. ಆದರೆ ಆಕೆಗೆ ಕಿವುಡೇ ಇರಲಿಲ್ಲ!
3. ಹ್ಯೂಸ್ಟನ್ನಲ್ಲಿ ಶ್ವಾಸಕೋಶದ ಕ್ಯಾನ್ಸರ್ನಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ಈತನ ಚಮತ್ಕಾರದಿಂದಾಗಿ ತಾನು ಗುಣಮುಖಳಾದೆಳೆಂದು ನಂಬಿ ಔಷಧಿ ತ್ಯಜಿಸಿದಳು. ಎರಡೇ ತಿಂಗಳಲ್ಲಿ ಇಹಲೋಕವನ್ನೇ ತ್ಯಜಿಸಿದ್ದಳು!
4. ಘಾನಾದಲ್ಲಿ ಮೃತ ವ್ಯಕ್ತಿಯೊಬ್ಬರಿಗೆ ಪುನರ್ಜನ್ಮ ನೀಡಿದ ಕುರಿತಾದ ವೀಡಿಯೋ ತನ್ನಲ್ಲಿದೆ ಎಂದು ಹೇಳಿಕೊಂಡಿದ್ದ ಬೆನ್ನಿಹಿನ್ ಹೇಳಿಕೊಳ್ಳುತ್ತಾನೆ. ಆದರೆ ಇದುವರೆಗೂ ಆ ವೀಡಿಯೋ ಮಾತ್ರ ಯಾರಿಗೂ ತೋರಿಸಿಲ್ಲ.
5. 8 ವರ್ಷದ ಅಂಧ ಬಾಲಕನಿಗೆ ಸ್ಪರ್ಷಮಾತ್ರದಿಂದಲೇ ದೃಷ್ಟಿ ನೀಡಿದ್ದಾಗಿ ಹೇಳಿದ್ದ. ಆದರೆ ಒಂದು ವರ್ಷದ ನಂತರ ಆ ಬಾಲಕ "ತಾನು ಬೆನ್ನಿಯಿಂದ ಪ್ರಭಾವಿತನಾಗಿ ದೃಷ್ಟಿ ಮರಳಿ ಬಂದಿದ್ದಾಗಿ ಹೇಳಿದ್ದೆ" ಎಂದು ಟಿ.ವಿ. ಸಂದರ್ಶನವೊಂದರಲ್ಲಿ ಒಪ್ಪಿಕೊಂಡಿದ್ದ.
6. ಮನಃಶಾಸ್ತ್ರಜ್ಞರ ಪ್ರಕಾರ ರೋಗಿಗಳ ವರ್ತನೆ ಬೆನ್ನಿಹಿನ್ ಸೃಷ್ಟಿಸುವ ಸಮೂಹ ಸನ್ನಿಯ ಪರಿಣಾಮವೇ ಹೊರತು ಬೇರೇನೂ ಅಲ್ಲ. ತೀವ್ರ ಅನಾರೋಗ್ಯಪೀಡಿತ ವ್ಯಕ್ತಿ ತಾನು ಉತ್ತಮ ಔಷಧಿ ತೆಗೆದುಕೊಳ್ಳುತ್ತಿದ್ದೇನೆ ಎಂದು ಭಾವಿಸಿದರೂ ಸಾಕು, ಆತನ ಆರೋಗ್ಯದಲ್ಲಿ ಗಣನೀಯ ಸುಧಾರಣೆ ಸಾಧ್ಯ.
7. ಯಾರಿಗಾದರೂ ತನ್ನ ಕೈಚಳಕದಿಂದ ಖಾಯಿಲೆ ಗುಣವಾಗದಿದ್ದರೆ ಅದಕ್ಕೆ ದೇವರ ಮೇಲಿನ ನಂಬಿಕೆಯ ಕೊರತೆ ಕಾರಣ ಎನ್ನುವ ಈತ, ಖಾಯಿಲೆ ಗುಣವಾದರೆ ಮಾತ್ರ ತನ್ನ ಪ್ರಾರ್ಥನೆಯ ಪವಾಡ ಎನ್ನುತ್ತಾನೆ.
ಈ ರೀತಿ ಸುಳ್ಳು ಹೇಳಿಕೊಂಡು ಜನರನ್ನು ಮೋಸ ಮಾಡುವುದು ಈತನ ನಿತ್ಯದ ಕಾಯಕ. ಈತನ ಇಂತಹ ಎಲ್ಲ ಅತಿರೇಕಗಳನ್ನು ಗಮನಿಸುತ್ತಿರುವ ಕ್ರಿಶ್ಚಿಯನ್ ವಾಚ್ಡಾಗ್ ಆರ್ಗನೈಸೇಷನ್ನ ಅಧ್ಯಕ್ಷ ಅಂಥೋನಿ ವೋಲ್ ಪ್ರಕಾರ, ಬೆನ್ನಿಹಿನ್ಗೆ 1993ರಲ್ಲೇ ಅನೇಕ ಷರತ್ತುಗಳನ್ನು ವಿಧಿಸಲಾಗಿದೆಯಂತೆ. ಪ್ರಾರ್ಥನಾ ಸಭೆಯ ನಂತರ ತಾನು ಗುಣಪಡಿಸಿದನೆನ್ನಲಾದವರಿಂದ ದೃಢೀಕರಣ ಪತ್ರ ಪಡೆಯಬೇಕು ಎನ್ನುವುದು ಅಂತಹ ಷರತ್ತುಗಳಲ್ಲಿ ಒಂದು. ಆದರೆ ಈತ ಯಾವುದೇ ಷರತ್ತುಗಳನ್ನು ಪಾಲಿಸದೆ ಭಾರತದಲ್ಲಿ ಮಂಕು ಬೂದಿ ಎರಚಲು ಕಾಲಿಡುತ್ತಿದ್ದಾನೆ. ಬೆನ್ನಿಹಿನ್ ಬಗ್ಗೆ ಅಮೆರಿಕ, ನ್ಯೂಜಿಲೆಂಡ್, ಯುರೋಪ್ ದೇಶಗಳಲ್ಲೇ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. 2006ರಲ್ಲಿ ಫಿಜಿ ದೇಶಕ್ಕೆ ಆತ ಭೇಟಿ ನೀಡಿದಾಗ ಭಾರೀ ವಿರೋಧ ಎದ್ದಿತ್ತು. ಅಲ್ಲಿನ ಚರ್ಚ್ ಪ್ರಮುಖರೇ ಆತನ ನಕಲಿ ಪವಾಡಗಳನ್ನು ವಿರೋಧಿಸಿದ್ದರು.
ಈಗ ಬೆನ್ನಿ 30 ವರ್ಷ ತನ್ನೊಂದಿಗೆ ಬದುಕು ಹಂಚಿಕೊಂಡಿದ್ದ ತನ್ನ ಪತ್ನಿ ಸುಝಾನೆಗೆ ವಿಚ್ಛೇದನ ನೀಡಿ ವಿವಾದಕ್ಕೊಳಗಾಗಿದ್ದಾನೆ. ಬೇರೆಯವರ ಬದುಕನ್ನು ತನ್ನ ಉಪದೇಶದ ಮೂಲಕ ಸರಿಪಡಿಸುತ್ತೇನೆನ್ನುವ ಬೆನ್ನಿ ತನ್ನ ಬದುಕನ್ನೇಕೆ ಹೀಗೆ ಮೂರಾಬಟ್ಟೆ ಮಾಡಿಕೊಂಡ? ಬೆನ್ನಿಹಿನ್ ಕ್ರಿಶ್ಚಿಯನ್ ಧರ್ಮಕ್ಕೆ ಒಂದು ಕಳಂಕ ಎಂದು ಹೀಗಳೆದವರು ಹಾಂಕಾಂಗ್ನ ಲೂಥರೆನ್ಸ್ ಮಿಷನನರಿಯಲ್ಲಿ ತತ್ತ್ವಶಾಸ್ತ್ರದ ಅಧ್ಯಾಪಕರಾಗಿರುವ ಜಾನ್ ಲಿಮಾಂಡ್. ಈ ಎಲ್ಲಾ ವಿಚಾರಗಳೂ ಗಂಭೀರವಾಗಿದ್ದು, ರಾಜ್ಯದ ಹಿತದೃಷ್ಟಿಯಿಂದ, ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆಯಾಗದಿರಲು ಮತ್ತು ಹಿಂದು ಧಾರ್ಮಿಕ ಭಾವನೆಗಳನ್ನು ಗೌರವಿಸಲು ಯಾವುದೇ ಕಾರಣಕ್ಕೂ ಬೆನ್ನಿಹಿನ್ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು. ಅದಕ್ಕಾಗಿ ಸಮಸ್ತ ಹಿಂದುಗಳು ಸಂಘಟಿತರಾಗಬೇಕಾಗಿದೆ.
ಚಂದ್ರ ಮೋಗೇರ
ಬೆಂಗಳೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


