ಅಂಕಣಗಳು

ಸುಳ್ಳಿನ ಸೌಧದಲ್ಲಿ ಶಿಂದೆ ಕೋಮುವಾದ?

ಸುಳ್ಳಿನ ಸೌಧದಲ್ಲಿ ಶಿಂದೆ ಕೋಮುವಾದ?
Published On :

ತಪ್ಪಾಗಿ ಬಂಧಿಸಿರುವ ಮುಸ್ಲಿಂ ಯುವಕರನ್ನು ಬಿಡಬೇಕು ಎಂಬ ಸೂಚನೆ ಮೂಲಕ ತುಷ್ಟೀಕರಣ ಪ್ರದರ್ಶಿಸಿರುವ ಕೇಂದ್ರ ಗೃಹಮಂತ್ರಿ ಸುಶೀಲ್ ಕುಮಾರ್ ಶಿಂದೆ ಅವರ ವಿರುದ್ಧ ಇದೀಗ ಗೃಹಖಾತೆಯ ನಿವೃತ್ತ ಕಾರ್ಯದರ್ಶಿಯೊಬ್ಬರು ಭ್ರಷ್ಟಾಚಾರ ಹಾಗೂ ಪಾತಕಿಗಳನ್ನು ರಕ್ಷಿಸಿರುವ ಗುರುತರ ಆರೋಪವನ್ನೂ ಮಾಡಿದ್ದಾರೆ. ಗೃಹಮಂತ್ರಿಯ ಹುದ್ದೆ ಅತ್ಯಂತ ಆಯಕಟ್ಟಿನದು. ಇಂಥವರ ಧೋರಣೆಗಳು ದೇಶದ ಜನರಲ್ಲಿ ಆತಂಕ ಮೂಡಿಸುವಂತಿದ್ದರೆ ಹೇಗೆ? ಈ ನಿಟ್ಟಿನ ಎರಡು ವಿಶ್ಲೇಷಣೆಗಳು ಇಲ್ಲಿವೆ.
ನಿವೃತ್ತ ಅಧಿಕಾರಿಗಳ ಹೇಳಿಕೆಗಳ ಆಧಾರದಲ್ಲಿ ಬಿಜೆಪಿಯನ್ನು ಕಟಕಟೆಯಲ್ಲಿ ನಿಲ್ಲಿಸುವ ಕೆಲಸವನ್ನು ಕಾಂಗ್ರೆಸ್ ಲಾಗಾಯ್ತಿನಿಂದ ಮಾಡಿಕೊಂಡು ಬಂದಿತ್ತು. ನರೇಂದ್ರ ಮೋದಿ ವಿರುದ್ಧ ಗುಜರಾತ್‌ನಲ್ಲಿ ಸೇವೆ ಸಲ್ಲಿಸಿದ್ದ ಹಲವು ಅಧಿಕಾರಿಗಳು ಆರೋಪ ಮಾಡಿಕೊಂಡು ಬಂದದ್ದು ತಿಳಿದ ವಿಷಯ. ಇದೀಗ ಅದೇ ಅಸ್ತ್ರವನ್ನು ಕಾಂಗ್ರೆಸ್ ಎದುರಿಸುವ ಪರಿಸ್ಥಿತಿ ಉದ್ಭವಿಸಿದಂತಿದೆ. ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ, ದಾವೂದ್ ಇಬ್ರಾಹಿಂ ವಿಷಯದಲ್ಲಿ ಸುಳ್ಳು ಹೇಳುತ್ತಿದ್ದಾರೆ ಎಂದು ಈ ಹಿಂದೆ ಗೃಹ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಆರ್. ಕೆ. ಸಿಂಗ್ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ದಾವೂದ್ ಇಬ್ರಾಹಿಮ್‌ಗೆ ಆಪ್ತನಾಗಿರುವ ಉದ್ಯಮಿಯೊಬ್ಬರ ವಿರುದ್ಧದ ತನಿಖೆಗೂ ಅಡ್ಡಿಪಡಿಸಿದ್ದರು ಎಂದಿದ್ದಾರೆ ಇತ್ತೀಚೆಗೆ ಬಿಜೆಪಿ ಸೇರಿರುವ ಆರ್‌ಕೆ ಸಿಂಗ್.
ಮಾಧ್ಯಮದ ವೇದಿಕೆಯಲ್ಲಿ ಶಿಂದೆ ಕುರಿತು ವ್ಯಕ್ತವಾಗುತ್ತಿರುವ ಆರೋಪಗಳು, ಆ ಕುರಿತಾದ ಚರ್ಚೆಗಳ ಪ್ರಮುಖಾಂಶಗಳನ್ನು ಇಲ್ಲಿ ಒಟ್ಟು ಮಾಡಿ ನೀಡುತ್ತಿದ್ದೇವೆ. ಇವುಗಳಲ್ಲಿ ಯಾವುದಕ್ಕೂ ಗೃಹಸಚಿವರು ಉತ್ತರಿಸುವ ಗೋಜಿಗೆ ಹೋಗಿಲ್ಲ.

  • ಪ್ರಮುಖ ಪೊಲೀಸ್ ಹುದ್ದೆಗಳನ್ನು ತುಂಬುವಲ್ಲಿ ಶಿಂದೆ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ ಗೃಹ ಇಲಾಖೆಯ ನಿವೃತ್ತ ಕಾರ್ಯದರ್ಶಿ.
  • ಮೋಸ್ಟ್ ವಾಂಟೆಡ್ ಕ್ರಿಮಿನಲ್ ಪಟ್ಟಿಯಲ್ಲಿರುವ ದಾವೂದ್ ಇಬ್ರಾಹಿಮ್‌ನನ್ನು ಭಾರತಕ್ಕೆ ಕರೆತರುವ ಕಾರ್ಯಯೋಜನೆಯನ್ನು ರೂಪಿಸಲಾಗಿದ್ದು, ಇದಕ್ಕೆ ಭಾರತವು ಅಮೆರಿಕದ ಎಫ್‌ಬಿಐ ಸಹಾಯವನ್ನು ಪಡೆದಿದೆ ಎಂಬ ಹೇಳಿಕೆ ನೀಡಿದ್ದರು ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ. ಅಂಥ ಯಾವ ಒಪ್ಪಂದಗಳೂ ಆಗಿರಲಿಲ್ಲ, ಅಮೆರಿಕವು ಈ ನಿಟ್ಟಿನಲ್ಲಿ ಯಾವ ಸಹಕಾರವನ್ನೂ ನೀಡಿಲ್ಲ. ಶಿಂದೆ ಬರೀ ಓಳು ಬಿಡುತ್ತಿದ್ದಾರೆ ಅಂತಾರೆ ನಿವೃತ್ತ ಗೃಹ ಕಾರ್ಯದರ್ಶಿ ಆರ್‌ಕೆ ಸಿಂಗ್.
  • ಇಂಡಿಯನ್ ಪ್ರೀಮಿಯರ್ ಲೀಗ್‌ನ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮುಂಬಯಿ ಮೂಲದ ಉದ್ಯಮಿಯೊಬ್ಬನನ್ನು ತನಿಖೆಗೆ ಒಳಪಡಿಸುವುದಕ್ಕೆ ಮುಂದಾಗಿದ್ದರು. ಆದರೆ ಶಿಂದೆಯವರೇ ಇದಕ್ಕೆ ಅಡ್ಡಿಯಾದರು. ಕಾರಣ, ಆ ಉದ್ಯಮಿ ದಾವೂದ್ ಇಬ್ರಾಹಿಮ್‌ಗೆ ನಿಕಟವರ್ತಿ ಎಂಬುದು ಆರ್‌ಕೆ ಸಿಂಗ್ ಸಿಡಿಸಿರುವ ಇನ್ನೊಂದು ಬಾಂಬ್! ಈ ಉದ್ಯಮಿ 2ಜಿ ಹಗರಣಕ್ಕೂ ಸಂಬಂಧಪಟ್ಟಿರುವ ವ್ಯಕ್ತಿ. ಅಲ್ಲೂ ಸಹ ಆತನನ್ನು ಬಚಾವು ಮಾಡುವುದಕ್ಕೆ ಶಿಂದೆಯವರು ಶ್ರಮವಹಿಸಿದ್ದಾರೆ ಅನ್ನೋದು ಆರೆಕೆ ಸಿಂಗ್ ಉವಾಚ.
- ಶ್ರೀ ಬಸವಾನಂದ ಸ್ವಾಮಿಗಳು,
ಶ್ರೀಗುರು ಬಸವ ಮಹಾಮನೆ, ಧಾರವಾಡ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.