ಅಂಕಣಗಳು

ಶಿಕ್ಷಕರಿಗೂ ಬೇಕು ಸರದಿಯಲ್ಲಿ ಅವಕಾಶ

Published On :

ಗತಿಸಿ ಹೋದ ರಂಗ ನಟ ಮತ್ತು ಪ್ರತಿಭಾವಂತ ಸಿನೆಮಾ ನಟ ಸಿಂಹ ಅವರಿಗೆ ಇಂತಹ ಶ್ರೇಷ್ಠ  ಶ್ರದ್ಧಾಂಜಲಿಯನ್ನು ಬಹುಶಃ ಕನ್ನಡ ಪ್ರಭ ಹೊರತು ಯಾವ ಪತ್ರಿಕೆಯೂ ನೀಡಿರುವುದಕ್ಕೆ ಸಾಧ್ಯವಿಲ್ಲ.    'ಉಪ ಸಿಂಹಾರ' ಶೀರ್ಷಿಕೆ ಬೇರೆಯವರಿಗೆ ಹೊಳೆಯಲು ಸಾಧ್ಯವಿಲ್ಲ. 'ಪಿಬಿಶ್ರೀ ಇತಿಶ್ರೀ'  ನೆನಪು ಮಾಸುವ ಮುಂಚೆಯೇ ಈ ಶೀರ್ಷಿಕೆ ಬಂದಿದೆ.  ಈ ಶೀರ್ಷಿಕೆ ಸೂಚಿಸಿದ ಕನ್ನಡ ಪ್ರಭ ಹೆಮ್ಮೆಯ ಕುವರನಿಗೆ,  ಪ್ರತಿಭಾವಂತನಿಗೆ ನನ್ನ ಅಭಿನಂದನೆಗಳನ್ನು ತಿಳಿಸಿ. ವರ್ಷದ ಕೊನೆಗೆ ಕ.ಪ್ರ ಮಾಡುವ  'ಸಿಂಹಾ'ವಲೋಕನದಲ್ಲಿ ಈ ಶೀರ್ಷಿಕೆಯನ್ನು ಉಲ್ಲೇಖಿಸಿ.  
- ಎಸ್. ರಾಘವೇಂದ್ರ, ಮೈಸೂರು ragvendra.mys@gmail.com
ದೇವರಾಣೆಗೂ ದಿ. 17 ಫೆಬ್ರವರಿ 2014ರ ಕುಂ.ವಿ. ಉಪಸಂಹಾರದ ಉತ್ತರ ನನಗೆ ಅರ್ಥವಾಗಲೇ ಇಲ್ಲ. ಹತ್ತು ಸಾರಿ ಓದಿಕೊಂಡೆನಾದ್ರೂ ಕುಂ.ವೀರಭದ್ರಪ್ಪನವರ ಉತ್ತರ ನನಗಿನ್ನೂ ಪ್ರಶ್ನೆಯಾಗಿಯೇ ಉಳಿದಿದೆ.
- ಶಿವನಾಪುರ ನರಸಿಂಹಮೂರ್ತಿ, ಬೆಂಗಳೂರು.
ಮೊ. 9731 890045

ಕ.ಪ್ರ. ವಿಭಿನ್ನವಾಗಿ ಮೂಡಿ ಬರುತ್ತಿದ್ದು, ಇದರಲ್ಲಿ ಓದುಗರ ಅಭಿಪ್ರಾಯಕ್ಕೆ ಅತ್ಯಂತ ಹೆಚ್ಚಿನ ಮಹತ್ವ ನೀಡುತ್ತಿರುವುದು ಶ್ಲಾಘನೀಯ.
ಕ.ಪ್ರ.ದ ಭಾನುವಾರದ ಸಂಚಿಕೆಯಲ್ಲಿ 'ಉಪನ್ಯಾಸಕರ ಸರದಿ' ಅತ್ಯಂತ ಮೆಚ್ಚುಗೆಯಾಗಿದೆ. ಉಪನ್ಯಾಸಕರು ಕೇವಲ ನಾಲ್ಕು ಗೋಡೆಯ ಮಧ್ಯದಲ್ಲಿ ಅದೆಷ್ಟೋ ವಿಚಾರಗಳನ್ನು ಧಾರೆಯೆರೆಯುತ್ತಿರುವವರು ತಮ್ಮ ವಿಚಾರಗಳನ್ನು, ಸಾಮಾಜಿಕ ಕಳಕಳಿಯನ್ನು ಇತರರಲ್ಲಿಯೂ ಹಂಚಿಕೊಳ್ಳಲು ಕ.ಪ್ರ. ಸೂಕ್ತ ವೇದಿಕೆಯನ್ನು ಕಲ್ಪಿಸಿದೆ. ಇದಕ್ಕೂ ಮುನ್ನ ವಿವಿಧ ಪತ್ರಿಕೆಯ ಸಂಪಾದಕರಿಗೂ 'ಸಂಪಾದಕರ ಸರದಿ'ಯಲ್ಲಿ ಜಾಗ ಕಲ್ಪಿಸಿದ್ದಿರಿ. 'ಸಂಪಾದಕರ ಸರದಿ'ಯೂ ಮುಗಿಯಿತು, 'ಉಪನ್ಯಾಸಕರ ಸರದಿ'ಯೂ ಬಂದಾಯಿತು. ಇವರಂತೆ, ಅದೆಷ್ಟೋ ಶಾಲೆಗಳ ಶಿಕ್ಷಕರಲ್ಲಿಯೂ ಇಂತಹ ಸಾಮಾಜಿಕ ಕಳಕಳಿ, ವಿಚಾರಗಳು ಇರುತ್ತವೆ. ಅವುಗಳನ್ನು ವ್ಯಕ್ತಪಡಿಸಲು ಅಂತಹ ಹೇಳಿಕೊಳ್ಳುವ ವೇದಿಕೆ, ಅವಕಾಶಗಳು ಇಲ್ಲ. ಆದ್ದರಿಂದ ಕನ್ನಡಪ್ರಭದಲ್ಲಿ ಮುಂದಿನ, ದಿನಗಳಲ್ಲಿ 'ಶಿಕ್ಷಕರ ಸರದಿ' ಆರಂಭವಾಗಲಿ. ಇದರಿಂದ ಅದೆಷ್ಟೋ ಶಿಕ್ಷಕರಲ್ಲಿ ಹುದುಗಿರುವ ಭವ್ಯ ವಿಚಾರಗಳು ಕನ್ನಡಪ್ರಭದ ಮೂಲಕ ಹೊರಬೀಳಲಿ. ನಾನೂ ಒಬ್ಬ ಶಿಕ್ಷಕನಾಗಿ ಇಂತಹ ಅವಕಾಶಗಳನ್ನು ಕಾತುರದಿಂದ ನಿರೀಕ್ಷಿಸುತ್ತೇನೆ.
- ಸೋಮಲಿಂಗಪ್ಪ ಗುಳದಳ್ಳಿ, ಶಿಕ್ಷಕರು, ಗಿಣಿಗೇರಾ (ಕೊಪ್ಪಳ).
ದೂ. 9740 887028

ದಿ. 09.02.14ರ 'ಖುಷಿ' ಭಾನುವಾರದ ಪುರವಣಿಯಲ್ಲಿ 'ಭರವಸೆಯ 25 ಪತ್ರಕರ್ತರು' ಸಚಿತ್ರ ಲೇಖನ ತುಂಬಾ ಇಷ್ಟವಾಯಿತು. ಒಂದು ಪತ್ರಿಕೆಯನ್ನು ಕಂಡರೆ ಮತ್ತೊಬ್ಬರಿಗೆ ಆಗದು. ಅದೊಂದು ರೀತಿಯ ವೃತ್ತಿ ವೈಷಮ್ಯ ಇರಬಹುದು. ಆದರೆ ಕನ್ನಡಪ್ರಭ ಇದಕ್ಕೆ ಹೊರತಾಗಿ ಬೇರೆ ಬೇರೆ ಪತ್ರಿಕೆಗಳು ಟಿ.ವಿ. ಚಾನೆಲ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರನ್ನು ಖುಷಿ ಸಾಪ್ತಾಹಿಕ ಪುರವಣಿಯ ಒಂದೇ ಸೂರಿನಡಿ ಸೇರಿಸಿ ಅವರುಗಳ ಸಂಪೂರ್ಣ ಬಯೋಡೇಟಾಗಳನ್ನೇ ವಾಚಕರಿಗೆ ಪರಿಚಯಿಸಿಕೊಟ್ಟಿರುವುದು ಇದೊಂದು ಅಭೂತಪೂರ್ವ ಪ್ರಶಂಸಾರ್ಹ ಲೇಖನವೂ ಆಗಿದೆ.
- ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ
ಮೊ. 94491-30531

ಬೈಟುಕಾಫಿಯಲ್ಲಿನ "ಬೊನ್ಸಾಯಿ ಸ್ವಾಮಿಜಿ" ಲೇಖನ ಚೆನ್ನಾಗಿತ್ತು. ಗಡಿಭಾಗದ 'ಕನ್ನಡಮಠ' -ವಂದೇ ಪ್ರಸಿದ್ಧಿ ಪಡೆದಿರುವ -ಬೆಳಗಾಂವ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ "ಚಿಂಚಣಿ"ಯ ಅಲ್ಲಮಪ್ರಭು ಸಿದ್ದುಸಂಸ್ಥಾನ ಮಠದ ಅಲ್ಲಮಪ್ರಭು ಸ್ವಾಮೀಜಿಯ 'ಬೊನ್ಸಾಯಿ' ಗಿಡಗಳ ಕುರಿತಾದ ಲೇಖನ ದಿ.13.02.14ರ ಕ.ಪ್ರ. ದಿನಪತ್ರಿಕೆಯ ಬೈಟು ಕಾಫಿಯಲ್ಲಿ ಚೆನ್ನಾಗಿ ಮೂಡಿಬಂದಿದೆ.
- ಶ್ರೀ ಚಿದಂಬರ ನಿಂಬರಗಿ, ನರಗುಂದ. ಗದಗ ಜಿಲ್ಲೆ.
ಮೊ. 9480 659056

22 ಫೆಬ್ರವರಿ ಮೈಸೂರು ಕುವೆಂಪು ನಗರದ ರಾಘವೇಂದ್ರರ ಪತ್ರ ಭರಾಟೆಯಲ್ಲಿ ಮೈಸೂರಿನ ಓದುಗರು ಬೆಂಗಳೂರಿನ ಓದುಗರಿಗಿಂತ ಸ್ವಾಭಿಮಾನಿಗಳು ಅಂತ ಬರೆದಿರುವುದು ಸರಿಯಲ್ಲ. ಸ್ವಾಭಿಮಾನಿಗಳು ಕೇವಲ ಮೈಸೂರಿಗರಷ್ಟೇ ಅಲ್ಲಾ ಸ್ವಾಮಿ! ಎಲ್ಲಾ ನಗರಗಳಲ್ಲೂ ಇದ್ದಾರೆ. ನಿಮಗೆ ಕನ್ನಡಪ್ರಭ ಮೇಲೆ ಕೋಪ ಇದೆ ಅಂತ ವಿನಾಕಾರಣ ನಮ್ಮನ್ನೇಕೆ ದೂಷಿಸುತ್ತೀರಿ? ನಾವು ಬೆಂಗಳೂರಿಗರಾದರೂ ಈವತ್ತಿಗೂ ಮೈಸೂರು ಎಂದರೆ ವ್ಯಾಮೋಹವೇ... ಮೈಸೂರು ಆವೃತ್ತಿಯಲ್ಲಿ ಕೇವಲ ಮೈಸೂರು ವಿಷಯವನ್ನೇ ಬರೆದರೆ ಇತರೇ ಊರಿನ ವಿಷಯಗಳು ಬೇಡವೇ...? ನಾನು ತಿಂಗಳಿಗೆ 20-25 ದಿನ ಮಣಿಪಾಲ (ಉಡುಪಿ)ದಲ್ಲಿರುತ್ತೇನೆ. ಪ್ರತಿ ದಿನ ನಾನೂ ಸಹ ಕನ್ನಡಪ್ರಭ (ಮಂಗಳೂರು ಆವೃತ್ತಿ) ಓದುತ್ತೀನಿ. ನಾನು ನಿಮ್ಮಂತೆ ಕೇವಲ ಮಂಗಳೂರು ವಿಷಯವನ್ನು ಮಾತ್ರ ಬರೀರಿ ಅಂತ ಹೇಳಲಾದೀತೇ?
- ಬಿ.ಎಸ್. ರಮೇಶ್, ಬನಶಂಕರಿ 3ನೇ ಹಂತ, ಬೆಂಗಳೂರು.

ನಿಮ್ಮ ಅನಿಸಿಕೆಗಳನ್ನು  ಗೋಡೆಗೆ ಛಾಪಿಸಲು: anisikeprabha@gmail.com
ಗೋಡೆಬರಹ ವಿಭಾಗ, ಕನ್ನಡಪ್ರಭ, ಎಕ್ಸ್‌ಪ್ರೆಸ್ ಕಟ್ಟಡ, ನಂ.1, ಕ್ವೀನ್ಸ್ ರಸ್ತೆ, ಬೆಂಗಳೂರು -1.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.