ಎರಡು ಲಕ್ಷ ಅಥವಾ ಅದಕ್ಕೂ ಕಡಿಮೆ ರೂಪಾಯಿ ಮೌಲ್ಯದ ಷೇರನ್ನ ಹೊಂದಿರುವ ಹೂಡಿಕೆದಾರರನನ್ನ ಸಣ್ಣ ಹೂಡಿಕೆದಾರ ಎಂದು ಪರಿಗಣಿಸಲಾಗಿದೆ. ಟಿಸಿಎಸ್ ನಲ್ಲಿ ಇಂತಹ ಸಣ್ಣ ಹೂಡಿಕೆದಾರರ ಸಂಖ್ಯೆಯೇ 4,78,೦೦೦ಕ್ಕೂ ಹೆಚ್ಚಿದೆ. ಟಿಸಿಎಸ್ ಇರಲಿ ಅಥವಾ ಯಾವುದೇ ಸಂಸ್ಥೆಯಿರಲಿ ತನ್ನ ಷೇರನ್ನ ಮರು ಖರೀದಿ ಅಥವಾ ಬಯ್ ಬ್ಯಾಕ್ ಮಾಡುವುದಕ್ಕೆ ಹಲವು ಅರ್ಥ, ಆಯಾಮಗಳಿರುತ್ತವೆ. ಹೀಗಾಗಿ ಸಣ್ಣ ಹೂಡಿಕೆದಾರ ದೊಡ್ಡ ಹೂಡಿಕೆದಾರರ ಹೊಸ ಪ್ರಯೋಗಗಳಿಗೆ ಬಲಿಯಾಗಬಾರದು ಎನ್ನುವುದು ಸೆಬಿಯ ಉದ್ದೇಶ. ಇರಲಿ. ಏನಿದು ಷೇರು ಮರು ಖರೀದಿ, ಅಥವಾ ಬಯ್ ಬ್ಯಾಕ್ ಆಫ್ ಷೇರ್ಸ್ ಎಂದರೇನು? ಬಯ್ ಬ್ಯಾಕ್ ಮಾಡುವ ಉದ್ದೇಶವೇನು? ಇತ್ಯಾದಿ ವಿಷಯಗಳ ಬಗ್ಗೆ ಇಂದಿನ ಹಣಕ್ಲಾಸುವಿನಲ್ಲಿ ತಿಳಿದುಕೊಳ್ಳೋಣ.