

ನವದೆಹಲಿ: ಸಪ್ತಪದಿ ತುಳಿಯುತ್ತಿರುವ ರವೀಂದ್ರ ಜಡೇಜಾ ವಿವಾಹದ ಮುನ್ನಾ ದಿನ ಟೀಂ ಇಂಡಿಯಾ ಆಟಗಾರರಿಗೆ ಭೋಜನ ಕೂಟ ಏರ್ಪಡಿಸಿದ್ದಾರೆ.
ನವದೆಹಲಿಯ ಕಲ್ವಾಡ್ ರೋಡ್ ನಲ್ಲಿರುವ ಹೋಟೆಲ್ ನಲ್ಲಿ ಪಾರ್ಟಿ ಆಯೋಜಿಸಿದ್ದಾರೆ. ಆದರೆ ಈ ಭೋಜನ ಕೂಟಕ್ಕೆ ಮತ್ತು ವಿವಾಹ ಸಮಾರಂಭಕ್ಕೆ ಮಹೇಂದ್ರ ಸಿಂಗ್ ಧೋನಿ ಮತ್ತು ಸುರೇಶ್ ರೈನಾಗೆ ಆಹ್ವಾನ ನೀಡಿಲ್ಲವಂತೆ.
ಈ ಇಬ್ಬರಿಗೂ ಏಕೆ ಆಹ್ವಾನ ನೀಡಿಲ್ಲ ಎಂದು ಆಂಗ್ಲ ಚಾನೆಲ್ ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಜಡೇಜಾ ಸತ್ಯ ಬಹಿರಂಗ ಪಡಿಸಿದ್ದಾರೆ. ಇಬ್ಬರೂ ಕ್ರಿಕೆಟರ್ಸ್ ನನಗೆ ತೀರಾ ಆತ್ಮೀಯರು. ಹೀಗಾಗಿ ತೀರಾ ಕ್ಲೋಸ್ ಫ್ರೆಂಡ್ಸ್ ಗೆ ಆಹ್ವಾನ ನೀಡುವ ಅವಶ್ಯಕತೆಯಿಲ್ಲ ಎಂದು ಹೇಳಿದ್ದಾರೆ.
ನನಗೆ ತೀರಾ ಹತ್ತಿರವಾಗಿರುವವರಿಗೆ ವಿಶೇಷ ಆಹ್ವಾನ ನೀಡಿರುವುದಾಗಿ ಜಡೇಜಾ ಹೇಳಿದ್ದಾರೆ. ಏಪ್ರಿಲ್ 17 ರಂದು ಮ್ಯೆಕಾನಿಕಲ್ ಎಂಜಿನೀಯರ್ ರೀವಾ ಸೋಲಂಕಿ ಅವರನ್ನು ಜಡೇಜಾ ವಿವಾಹವಾಗುತ್ತಿದ್ದಾರೆ. ಮದುವೆಗಾಗಿ ಜಡೇಜಾ ಮಾವ 95 ಲಕ್ಷ ರು. ಮೌಲ್ಯದ ಆಡಿ ಕಾರ್ ಉಡುಗೊರೆ ನೀಡಿದ್ದಾರೆ.