ಕಿಂಗ್ಸ್ ಇಲೆವೆನ್ ನಿಂದ ಜಯ ಕಸಿದ ಬ್ರಾವೋ-ಫಿಂಚ್

ಐಪಿಎಲ್-9 ನಲ್ಲಿ ನೂತನ ತಂಡ ಗುಜರಾತ್ ಲಯನ್ಸ್ ತಂಡ ಶುಭಾರಂಭ ಮಾಡಿದ್ದು, ಬ್ರಾವೋ ಬೌಲಿಂಗ್ ಮತ್ತು ಆರನ್ ಫಿಂಚ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಗುಜರಾತ್ ಲಯನ್ಸ್ ತಂಡ 5 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ...
ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಆರನ್ ಫಿಂಚ್ (ಚಿತ್ರಕೃಪೆ: ಕ್ರಿಕ್ ಇನ್ಫೋ)
ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಆರನ್ ಫಿಂಚ್ (ಚಿತ್ರಕೃಪೆ: ಕ್ರಿಕ್ ಇನ್ಫೋ)
Updated on: 

ಪಂಜಾಬ್: ಐಪಿಎಲ್-9 ನಲ್ಲಿ ನೂತನ ತಂಡ ಗುಜರಾತ್ ಲಯನ್ಸ್ ತಂಡ ಶುಭಾರಂಭ ಮಾಡಿದ್ದು, ಬ್ರಾವೋ ಬೌಲಿಂಗ್ ಮತ್ತು ಆರನ್ ಫಿಂಚ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಗುಜರಾತ್ ಲಯನ್ಸ್ ತಂಡ 5 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

ಸೋಮವಾರ ಪಂಜಾಬ್ ನ ಮೊಹಾಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಬ್ರಾವೋ ಅವರ ಮಾರಕ ಬೌಲಿಂಗ್ ದಾಳಿಯ ನಡುವೆಯೂ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 161 ರನ್ ಪೇರಿಸಿತು. ಕಿಂಗ್ಸೆ ಇಲೆವೆನ್ ತಂಡಕ್ಕೆ ಆರಂಭಿಕ ಆಟಗಾರ ಮುರಳಿ ವಿಜಯ್ (42 ರನ್), ಎಂ.ವೋಹ್ರಾ (38 ರನ್) ಉತ್ತಮ ಆರಂಭ ಒದಗಿಸಿದರು. ಆದರೆ ಈ ಹಂತದಲ್ಲಿ ಬೌಲಿಂಗ್ ದಾಳಿ ಮಾಡಿದ ಬ್ರಾವೋ ಪಂಜಾಬ್ ತಂಡದ ಮಧ್ಯಮ ಮತ್ತು ಕೆಳ ಕ್ರಮಾಂಕದ ದಿಢೀರ್ ಕುಸಿತಕ್ಕೆ ಕಾರಣರಾದರು. ಹೀಗಾಗಿ ಬೃಹತ್ ಮೊತ್ತ ಪೇರಿಸುವ ಪಂಜಾಬ್ ನ ಆಸೆ ಭಗ್ನವಾಗಿ ಅಂತಿಮವಾಗಿ ನಿಗದಿತ 20 ಓವರ್ ಗಳಲ್ಲಿ ಪಂಜಾಬ್ ತಂಡ 161 ರನ್ ಪೇರಿಸಿ, ಗುಜರಾತ್ ಗೆ 162 ರನ್ ಗಳ ಗುರಿ ನೀಡಿತು.

161 ರನ್ ಸವಾಲಿನ ಮೊತ್ತವನ್ನು ಬೆನ್ನುಹತ್ತಿದ ಗುಜರಾತ್ ತಂಡಕ್ಕೆ ಆರಂಭಿಕ ಆಘಾತ ಎದುರಾಗಿತ್ತು. ಮೊದಲ ಓವರ್ ನಲ್ಲಿಯೇ ಮೆಕ್ಕಲಮ್ ಶೂನ್ಯಕ್ಕೆ ಔಟ್ ಆಗುವ ಮೂಲಕ ಗುಜರಾತ್ ತಂಡ ಒತ್ತಡಕ್ಕೆ ಸಿಲುಕಿತು. ಆದರೆ ಮತ್ತೋರ್ವ ಆರಂಭಿಕ ಆಟಗಾರ ಆರನ್ ಫಿಂಚ್ (74 ರನ್) ಅವರ ಸ್ಫೋಟಕ ಬ್ಯಾಟಿಂಗ್ ನಿಂದಾಗಿ ಗುಜರಾತ್ ತಂಡ 5 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿತು. ಫಿಂಚ್ 74 ರನ್ ಸಿಡಿಸಿ ಔಟಾದರೆ, ಡಿ. ಕಾರ್ತಿಕ್ ಅಜೇಯ 41ರನ್ ಗಳಿಸವ ಮೂಲಕ ಗುಜರಾತ್ ಅನ್ನು ಗೆಲುವಿನ ದಡ ಸೇರಿಸಿದರು.

74 ರನ್ ಸಿಡಿಸಿ ಗುಜರಾತ್ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಆರನ್ ಫಿಂಚ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com