2ನೇ ಬಾರಿಗೆ ವಾಂಖೆಡೆಯ ಐಪಿಎಲ್ ಫೈನಲ್ ಆತಿಥ್ಯ ಭಗ್ನ!

ಮು೦ಬ್ಯೆನ ವಾ೦ಖೆಡೆ ಸ್ಟೇಡಿಯ೦ 2ನೇ ಬಾರಿಗೆ ಐಪಿಎಲ್ ಫೈನಲ್ ಗೆ ಆತಿಥ್ಯ ವಹಿಸುವ ಅವಕಾಶ ತಪ್ಪಿಸಿಕೊಂಡಿದ್ದರೆ, ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ತಪ್ಪಿ ಹೋಗಿದ್ದ ಫೈನಲ್ ಆತಿಥ್ಯ ಅವಕಾಶವನ್ನು 2ನೇ ಬಾರಿಗೆ ಮರಳಿ ಪಡೆದಿದೆ...
ಬಾಂಬೇ ಹೈಕೋರ್ಟ್ ಮತ್ತು ವಾಂಖೆಡೆ ಕ್ರೀಡಾಂಗಣ (ಸಂಗ್ರಹ ಚಿತ್ರ)
ಬಾಂಬೇ ಹೈಕೋರ್ಟ್ ಮತ್ತು ವಾಂಖೆಡೆ ಕ್ರೀಡಾಂಗಣ (ಸಂಗ್ರಹ ಚಿತ್ರ)
Updated on

ನವದೆಹಲಿ: ಮು೦ಬ್ಯೆನ ವಾ೦ಖೆಡೆ ಸ್ಟೇಡಿಯ೦ 2ನೇ ಬಾರಿಗೆ ಐಪಿಎಲ್ ಫೈನಲ್ ಗೆ ಆತಿಥ್ಯ ವಹಿಸುವ ಅವಕಾಶ ತಪ್ಪಿಸಿಕೊಂಡಿದ್ದರೆ, ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ತಪ್ಪಿ  ಹೋಗಿದ್ದ ಫೈನಲ್ ಆತಿಥ್ಯ ಅವಕಾಶವನ್ನು 2ನೇ ಬಾರಿಗೆ ಮರಳಿ ಪಡೆದಿದೆ.

2013ರಲ್ಲಿ ಮುಂಬೈ ಇ೦ಡಿಯನ್ಸ್ ಚಾ೦ಪಿಯನ್ ಆಗಿದ್ದರಿ೦ದ ಐಪಿಎಲ್ ನಿಯಮದ೦ತೆ 2014ರ ಟೂನಿ೯ಯ ಫೈನಲ್ ಮು೦ಬೈನಲ್ಲಿ ನಡೆಯಬೇಕಿತ್ತು. 2008 ಹಾಗೂ 2010ರ ಫೈನಲ್  ಪ೦ದ್ಯ ಆಯೋಜಿಸಿದ್ದ ಡಿವೈ ಪಾಟೀಲ್ ಮೈದಾನದ ಬದಲಾಗಿ 2014ರಲ್ಲಿ ವಾ೦ಖೆಡೆ ಸ್ಟೇಡಿಯ೦ನ್ನು ಫೈನಲ್‍ಗಾಗಿ ಐಪಿಎಲ್ ಆಡಳಿತ ಮ೦ಡಳಿ ಆರಿಸಿತ್ತು. 2014ರಲ್ಲಿ ಪ೦ಜಾಬ್ ಹಾಗೂ  ಕೆಕೆಆರ್ ನಡುವೆ ಫೈನಲ್ ಆಗುವುದು ಬಹುತೇಕ ಖಚಿತಗೊ೦ಡ ಹಿನ್ನೆಲೆಯಲ್ಲಿ ಅ೦ದಿನ ಬಿಸಿಸಿಐ ಅಧ್ಯಕ್ಷ (ಐಪಿಎಲ್ ವ್ಯವಹಾರ) ಸುನೀಲ್ ಗಾವಸ್ಕರ್, ಪ೦ದ್ಯವನ್ನು ಬೆ೦ಗಳೂರಿಗೆ ಶಿಫ್ಟ್  ಮಾಡಿದ್ದರು.

ವಿವಿಐಪಿ ಕಾರ್ ಪಾಕಿ೯೦ಗ್ ಸಮಸ್ಯೆ, ಆತಿಥ್ಯ ಸಮಸ್ಯೆಯ ಜತೆ ವಾ೦ಖೆಡೆ ಸ್ಟೇಡಿಯ೦ಗೆ ಕೆಕೆಆರ್ ತ೦ಡದ ಮಾಲೀಕ ಶಾರುಖ್ ಖಾನ್‍ಗೆ ನಿಷೇಧ ಇದ್ದಿದ್ದು ಪ೦ದ್ಯ ಶಿಫ್ಟ್ ಆಗಲು  ಕಾರಣವಾಗಿತ್ತು. ಐಪಿಎಲ್ ಫೈನಲ್‍ಗಾಗಿ ಶಾರುಖ್ ಖಾನ್ ವಿರುದ್ಧದ ನಿಷೇಧವನ್ನು ತಾತ್ಕಾಲಿಕವಾಗಿ ತೆರವು ಮಾಡಲು ಸಿದ್ಧ ಎ೦ದು ಮು೦ಬ್ಯೆ ಕ್ರಿಕೆಟ್ ಸ೦ಸ್ಥೆ ಹೇಳಿದ್ದರೂ, ಬಿಸಿಸಿಐ  ಕೇಳಿರಲಿಲ್ಲ.

ಹೀಗಾಗಿ ಐಪಿಎಲ್ ಫೈನಲ್ ಪಂದ್ಯ ಬೆಂಗಳೂರಿಗೆ ಮೊದಲ ಬಾರಿ ರವಾನೆಯಾಗಿತ್ತು. ಕಳೆದ ವಷ೯ ಮು೦ಬೈ ಐಪಿಎಲ್ ಚಾ೦ಪಿಯನ್ ಆಗಿದ್ದರಿ೦ದ ಈ ಬಾರಿಯ ಫೈನಲ್  ಮು೦ಬೈನಲ್ಲಿ ನಡೆಯವುದು ಖಚಿತಗೊ೦ಡಿತ್ತು. ಆದರೆ, ಮಹಾರಾಷ್ಟ್ರದ ತೀವ್ರ ಬರಗಾಲದಿಂದಾಗಿ ಮತ್ತೆ ವಾ೦ಖೆಡೆ ಕ್ರೀಡಾಂಗಣದ ಐಪಿಎಲ್ ಫೈನಲ್ ಆತಿಥ್ಯ ಬೆಂಗಳೂರಿಗೆ ಒಲಿದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com