

ಮುಂಬಯಿ: ಇಂದು ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರ ಹುಟ್ಟುಹಬ್ಬ. ಈ ಬಾರಿ ಸಚಿನ್ ತೆಂಡೂಲ್ಕರ್ ತಮ್ಮ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.
ಮುಂಬಯಿಯ ಎಂಐಜಿ ಕ್ಲಬ್‌ನಲ್ಲಿ 'ಮೇಕ್ ಎ ವಿಶ್ ಇಂಡಿಯಾ' ಸಂಘಟನೆಯ ಮಕ್ಕಳ ಜತೆ ಕ್ರಿಕೆಟ್ ಆಡುವ ಮೂಲಕ ತಮ್ಮ 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ಹೀಗೆ ತಾವು ಮಕ್ಕಳ ಜತೆ ಕ್ರಿಕೆಟ್ ಆಡುವ ಮೂಲಕ ಹುಟ್ಟು ಹಬ್ಬ ಆಚರಿಸಿ ಸಂಭ್ರಮಿಸಿಕೊಂಡಿದ್ದಾಗಿ ಸಚಿನ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಸಚಿನ್ ಅವರು 1973ರ ಏಪ್ರಿಲ್ 24ರಂದು ಮುಂಬಯಿನಲ್ಲಿ ಜನಿಸಿದ್ದರು.
2013ರ ನವೆಂಬರ್ ನಲ್ಲಿ ತೆಂಡೂಲ್ಕರ್ ಎಲ್ಲಾ ರೀತಿಯ ಕ್ರಿಕೆಟ್ ಪಂದ್ಯಗಳಿಂದ ನಿವೃತ್ತಿ ಹೊಂದಿದರು.