ಸದ್ಯ ರವೀಂದ್ರ ಜಡೇಜಾ ಅವರು ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದು, ಅವರ ಮಾವ ಹರ್ದೇವ್ಸಿಂಗ್ ಸೋಲಂಕಿ ಅವರು ಜಡೇಜಾ ಪರವಾಗಿ ದಂಡ ಪಾವತಿಸಿದ್ದಾರೆ. ಜತೆಗೆ ಹೇಳಿಕೆಯನ್ನೂ ಪಡೆದಿದ್ದೇವೆ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದ್ದು, ಶೀಘ್ರ ಅರಣ್ಯ ಇಲಾಖೆಗೆ ವರದಿಯನ್ನು ಸಲ್ಲಿಸಲಾಗುವುದು. ತನಿಖಾ ವರದಿ ಬಂದ ನಂತರ ತಪ್ಪಿತಸ್ಥ ಅರಣ್ಯ ಸಿಬ್ಬಂದಿಯ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜುನಾಗಡದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎ.ಪಿ.ಸಿಂಗ್ ಅವರು ಹೇಳಿದ್ದಾರೆ.