ಅಶ್ವಿನ್ ಹೆಸರಲ್ಲಿ ಮತ್ತೊಂದು ದಾಖಲೆ: ಶ್ರೀನಾಥ್ ಹಿಂದಿಕ್ಕಿದ ಅಶ್ವಿನ್

ಟೀಂ ಇಂಡಿಯಾದ ಸ್ಟಾರ್ ಕೇರಂ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತೊಂದು ದಾಖಲೆ ಮಾಡಿದ್ದು ಇದೀಗ ಭಾರತ ಪರ ಗರಿಷ್ಠ ಟೆಸ್ಟ್ ವಿಕೆಟ್ ಪಡೆದ ಬೌಲರ್ ಗಳ...
ಆರ್ ಅಶ್ವಿನ್, ಜಾವಗಲ್ ಶ್ರೀನಾಥ್
ಆರ್ ಅಶ್ವಿನ್, ಜಾವಗಲ್ ಶ್ರೀನಾಥ್
ಮುಂಬೈ: ಟೀಂ ಇಂಡಿಯಾದ ಸ್ಟಾರ್ ಕೇರಂ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತೊಂದು ದಾಖಲೆ ಮಾಡಿದ್ದು ಇದೀಗ ಭಾರತ ಪರ ಗರಿಷ್ಠ ಟೆಸ್ಟ್ ವಿಕೆಟ್ ಪಡೆದ ಬೌಲರ್ ಗಳ ಪಟ್ಟಿಯಲ್ಲಿ ಕನ್ನಡಿಗ ಜಾವಗಲ್ ಶ್ರೀನಾಥ್ ರನ್ನು ಹಿಂದಿಕ್ಕಿದ್ದಾರೆ. 
ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಮೊಹಿನ್ ಅಲಿ ವಿಕೆಟ್ ಪಡೆಯುವ ಮೂಲಕ ಅಶ್ವಿನ್ ಈ ಸಾಧನೆ ಮಾಡಿದ್ದಾರೆ. 67 ಪಂದ್ಯಗಳಿಂದ 236 ವಿಕೆಟ್ ಉರುಳಿಸಿದ್ದ ಶ್ರೀನಾಥ್ ಈವರೆಗೂ 7ನೇ ಸ್ಥಾನದಲ್ಲಿದ್ದರು. ಇದೀಗ ಅಶ್ವಿನ್ 239 ವಿಕೆಟ್ ಉರುಳಿಸುವ ಮೂಲಕ ಶ್ರೀನಾಥ್ ರನ್ನು ಹಿಂದಿಕ್ಕಿದ್ದಾರೆ. 
ಅಶ್ವಿನ್ ಇನ್ನು ನಾಲ್ಕು ವಿಕೆಟ್ ಗಳನ್ನು ಉರುಳಿಸಿದರೆ ಬಿಎಸ್ ಚಂದ್ರಶೇಖರ್(242) ಅವರ ದಾಖಲೆಯನ್ನು ಮುರಿಯಲಿದ್ದಾರೆ. 
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಅಶ್ವಿನ್ ಸದ್ಯ 4 ವಿಕೆಟ್ ಗಳನ್ನು ಪಡೆದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com